ಬಣ್ಣದ ಹಬ್ಬ

ಬಣ್ಣದ ಹಬ್ಬ – ಹೋಳಿ ಹಬ್ಬ ವರ್ಣರಂಜಿತ ಭಾರತೀಯ ಸಂಸ್ಕೃತಿಯ ವಿಶಿಷ್ಟ ಹಬ್ಬ. ಇದಕ್ಕೆ ಕಾಮನ ಹಬ್ಬ ಎಂದೂ ಹೆಸರು. ಕೆಟ್ಟದ್ದರ ಸಂಹಾರವಾಗಲು ಭಕ್ತಿಯ ಆಸ್ವಾದನೆ ಇರಬೇಕು, ಸೌಂದರ್ಯದ ಅಪೇಕ್ಷೆ ಬೇಕು, ಸ್ನೇಹ – ಸೌಹಾರ್ದತೆ – ಪ್ರೀತಿ – ಪ್ರೇಮಗಳ ಸಂಮಿಲನ ಇರಬೇಕು, ತ್ಯಾಗ ಮನೋಭಾವವಿರಬೇಕು, ಧೈರ್ಯವೂ ಬೇಕು, ಪರಮಾತ್ಮನ ಅನುಗ್ರಹವೂ ಬೇಕು. ಹೀಗೆ ಕೆಟ್ಟದ್ದರ ಅಂತ್ಯದಲ್ಲಿ ಪರಮಾತ್ಮನ ಕೃಪೆ ಹೊರಹೊಮ್ಮಿದಾಗ ಬದುಕು ವರ್ಣರಂಜಿತ ಸೊಬಗು ಕಾಣುತ್ತದೆ.
ಹೋಳಿ ಹಬ್ಬದ ತಾರಕಾಸುರನ ಕತೆ, ದೇವತೆಗಳ ಪರಮಾತ್ಮನ ಸಹಾಯದ ಯಾಚನೆ, ರತಿ-ಮನ್ಮಥರ ಪ್ರೀತಿ-ಪ್ರೇಮ-ಧೈರ್ಯ ಭಕ್ತಿಗಳ ಫಲ, ಕಾಮನು ದಹಿತಗೊಂಡು ಪ್ರೇಮ ಮಾತ್ರ ಶಾಶ್ವತವಾಗಿ ಉಳಿದುಕೊಂಡ ರೀತಿ, ತಾರಕಾಸುರನ ಸಂಹಾರವನ್ನು ಲೋಕ ವರ್ಣರಂಜಿತವಾಗಿ ಸಡಗರಿಸಿದ ರೀತಿ ಇವೆಲ್ಲವೂಈ ಆಚರಣೆಯ ಅಂತಃಸತ್ವದಲ್ಲಿ ಅಡಗಿರುವುದನ್ನು ಕಾಣಬಹುದು.
ನಮ್ಮೆಲ್ಲರ ಬದುಕು ಸಂತಸಕರವಾಗಿ ಸೊಗಸು – ಸೌಂದರ್ಯಗಳ ವರ್ಣ ಸೊಬಗಿನಲ್ಲಿ ಮೀಯಲಿ ಎಂದು ಆಶಿಸೋಣ.
ಎಲ್ಲರಿಗೂ ಬಣ್ಣಗಳ ಹಬ್ಬ ಶುಭತರಲಿ. ಬದುಕು – ಪ್ರಪಂಚ ಸೌಂದರ್ಯದಿಂದ ನಲಿಯಲಿ. ಬದುಕಿನಲ್ಲಿ ನಲಿವಿಲ್ಲದೆ ಬಳಲುತ್ತಿರುವವರಿಗೆ ಒಳಿತಾಗಲಿ ಎಂಬ ಭಾವ ಕೂಡಾ ನಮ್ಮ ಪ್ರಾರ್ಥನೆಯಲ್ಲಿ ಜೊತೆಗೂಡಲಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯಾ | On the birthday of great Journalist and writer Dr. Vijaya |

Fri Mar 18 , 2022
ವಿಜಯಾ ಅವರು ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ದಿಟ್ಟ ಪರ್ತಕರ್ತೆಯಾಗಿ ಹೆಸರಾಗಿದ್ದಾರೆ. ವಿಜಯಾರವರು 1942ರ ವರ್ಷದ ಹೋಳಿ ಹುಣ್ಣಿಮೆಯ ದಿನದಂದು ದಾವಣಗೆರೆಯಲ್ಲಿ ಜನಿಸಿದರು (ಸಾಮಾನ್ಯವಾಗಿ ಇದು ಮಾರ್ಚ್ ಮಾಸದಲ್ಲಿ ಬರುತ್ತದೆ). ತಂದೆ ಶಾಮಣ್ಣನವರು ಮತ್ತು ತಾಯಿ ಸರೋಜ ಅವರು. ವಿಜಯಾ ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಹೊಸ ಪೇಟೆಯ ಅಮರಾವತಿಗಳಲ್ಲಿ ನೆರವೇರಿತು. ವಿಜಯಾ ಅವರು […]

Advertisement

Wordpress Social Share Plugin powered by Ultimatelysocial