ಲಂಡನ್, ಏ.5- ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ!

 

ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಎರಡು ಬಾರಿ ಜಾನ್ಸನ್ ಭಾರತ ಭೇಟಿಯನ್ನು ರದ್ದುಗೊಳಿಸಿದ್ದರು. ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇದೇ ತಿಂಗಳು 22 ರ ಸುಮಾರಿಗೆ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
ಕಳೆದ ತಿಂಗಳು ಜಾನ್ಸನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿ ಪ್ರವಾಸದ ಅವಧಿಯನ್ನು ನಿಗದಿ ಪಡಿಸಿದ್ದಾರೆ.

ಆದರೆ ಈವರೆಗೂ ಬ್ರಿಟನ್‍ನ ಪ್ರಧಾನಿ ಕಚೇರಿ ಮೂಲಗಳು ಅಧಿಕೃತವಾದ ಯಾವದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಈ ಕುರಿತು ಡೌನಿಂಗ್ ಸ್ಟ್ರೀಟ್‍ನ ವಕ್ತಾರರು ಮಾರ್ಚ್ 22ರಂದು ಹೇಳಿಕೆ ನೀಡಿ, ಉಭಯ ದೇಶಗಳ ನಾಯಕರು ಪರಸ್ಪರ ವೈಯಕ್ತಿಕವಾಗಿ ಭೇಟಿಯಾಗುವುದು ಮತ್ತು ಮತ್ತಷ್ಟು ಸಂವೃದ್ಧವಾದ ಹಾಗು ಬಲವಾದ ಸಂಬಂಧ ಸುಧಾರಣೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದ್ದರು.

ಕಳೆದ ವರ್ಷ ನವೆಂಬರ್‍ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಪ್ 26 ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ವಿಶ್ವ ನಾಯಕರ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ಭಾರತ-ಬ್ರಿಟನ್ ಹವಾಮಾನ ಪಾಲುದಾರಿಕೆ ಮಾರ್ಗಸೂಚಿಯ ಮೇಲೆ ಕೇಂದ್ರಿಕರಿಸಿದವು.

2030 ರ ವೇಳೆಗೆ ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಪ್ರಯತ್ನಗಳು ಮುಂದುವರೆದಿವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಆರ್ಥಿಕತೆಯಿಂದ ಬ್ರಿಟನ್‍ನ ವ್ಯವಹಾರಗಲು, ಕಾರ್ಮಿಕರು ಮತ್ತು ಗ್ರಾಹಕರಿಸಿ ಭಾರಿ ಪ್ರಯೋಜನವಾಗಲಿದೆ ಎಂದು ಈ ವರ್ಷದ ಆರಂಭದಲ್ಲಿ ಜಾನ್ಸನ್ ಹೇಳಿದ್ದರು. ಈ ನಿಟ್ಟಿನಲ್ಲಿ ಮತ್ತಷ್ಟು ಮುಕ್ತ ಮಾತುಕತೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಬ್ರಿಟನ್ ವಿಶ್ವ ದರ್ಜೆಯ ವ್ಯವಹಾರಗಳು ಮತ್ತು ಪರಿಣತಿಯನ್ನು ಹೊಂದಿದೆ, ಸ್ಕಾಚ್ ವಿಸ್ಕಿ ಡಿಸ್ಟಿಲರ್‍ಗಳಿಂದ ಹಣಕಾಸು ಸೇವೆಗಳು ಮತ್ತು ಅತ್ಯಾಧುನಿಕ ನವೀಕರಿಸಬಹುದಾದ ತಂತ್ರಜ್ಞಾನದವರೆಗೆ ನಾವು ಹೆಮ್ಮೆಪಡಬಹುದು. ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇಂಡೋ-ಪೆಸಿಫಿಕ್ ಆರ್ಥಿಕತೆಯಲ್ಲಿ ಅವಕಾಶಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಅವರ ಜನವರಿಯಲ್ಲಿ ಹೇಳಿದ್ದರು.

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಕಳೆದ ವಾರ ದೆಹಲಿಗೆ ಭೇಟಿ ನೀಡಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‍ರೊಂದಿಗೆ ಮಾತುಕತೆ ನಡೆಸಿದರು. ಈ ತಿಂಗಳ ಕೊನೆಯಲ್ಲಿ ಭಾರತ ಆಯೋಜಿಸಲಿರುವ ಮೂರನೇ ಸುತ್ತಿನ ಭಾರತ-ಬ್ರಿಟನ್ ಎಫ್‍ಟಿಎ ಮಾತುಕತೆಗಳು ಪ್ರಧಾನ ಮಂತ್ರಿಯ ಭೇಟಿಯ ಸಮಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಕಡಲ ವಲಯ ಕಳೆದ ಎಂಟು ವರ್ಷಗಳಲ್ಲಿ ಉನ್ನತ ಶೃಂಗಕ್ಕೇರಿದ್ದು,

Tue Apr 5 , 2022
  , ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಕಡಲ ದಿನದ ಸಂದರ್ಭದಲ್ಲಿ ಮಂಗಳವಾರ ಮಾತನಾಡಿರುವ ಅವರು, ಏಪ್ರಿಲ್ 5 ಅನ್ನು ದೇಶದಾದ್ಯಂತ ರಾಷ್ಟ್ರೀಯ ಕಡಲ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಕಡಲ ವ್ಯಾಪಾರದ ಪಾತ್ರ ಮಹತ್ವದ್ದಾಗಿದೆ. ಜಾಗತಿಕ ವ್ಯವಹಿವಾಟಿನಲ್ಲಿ ಗಣನೀಯ ಕೊಡುಗೆ ನೀಡಿದೆ. ರಾಷ್ಟ್ರೀಯ ಸಮುದ್ರಯಾನ ದಿನದಂದು ನಾವು ನಮ್ಮ ವೈಭವದ ಕಡಲ ಇತಿಹಾಸವನ್ನು […]

Advertisement

Wordpress Social Share Plugin powered by Ultimatelysocial