ಈ ಬಾರಿಯು ಸಾಂಪ್ರದಾಯಿಕ ‘ಬಹಿ ಖಾತಾ’ ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡಿಸಲಿರುವ ವಿತ್ತ ಸಚಿವೆ

ನವದೆಹಲಿ: ಕರೊನಾ ಸಂಕಷ್ಟದ ನಡುವೆಯೂ ಮಂಡನೆಯಾಗಲಿರುವ 2022ನೇ ಸಾಲಿನ ಬಜೆಟ್​ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್​ ಮಂಡನೆ ತುಂಬಾ ವಿಶಿಷ್ಟವಾಗಿದ್ದು, ಕಳೆದ ಬಾರಿಯಂತೆ ‘ಬಹಿ ಖಾತಾ’ ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.ಇಂದೆಲ್ಲ ಬಜೆಟ್​ ಪ್ರತಿಗಳಿದ್ದ ಸೂಟ್​ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್​ಕೇಸ್​ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್​ಬೈ ಹೇಳಿದ್ದ ನಿರ್ಮಲಾ ಸೀತಾರಾಮನ್​ ಸಾಂಪ್ರದಾಯಿಕ ‘ಬಹಿ ಖಾತಾ’ ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.ಆದರೆ, ಕಳೆದ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದ ನಿರ್ಮಲಾ ಸೀತಾರಾಮನ್​ ಬಜೆಟ್​ ಅನ್ನು ಟ್ಯಾಬ್​ ಮೂಲಕ ಮಂಡನೆ ಮಾಡಿದ್ದರು. ಈ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಿದ್ದರು. ಅಲ್ಲದೆ, ಮೊದಲ ಬಾರಿಗೆ ಕಾಗದರಹಿತ ಬಜೆಟ್​ ಮಂಡನೆ ಮಾಡಿದ ಹೆಸರಿಗೆ ಪಾತ್ರವಾಗಿದ್ದರು. ಈ ಬಾರಿಯು ಅದನ್ನೆ ಮುಂದುವರಿಸಿರುವ ನಿರ್ಮಲಾ ಸೀತಾರಾಮನ್​ ಟ್ಯಾಬ್​ ಮೂಲಕ ಬಜೆಟ್​ ಮಂಡನೆ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಬುರಗಿ: ಏಕದಂಡಗಿ ಮಠ ಜೀರ್ಣೋದ್ಧಾರಕ್ಕೆ ಚಾಲನೆ

Tue Feb 1 , 2022
  ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದ ಜೀರ್ಣೋದ್ಧಾರ ಕಾಮಗಾರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೋಮವಾರ ಭೂಮಿಪೂಜೆ ನೆರವೇರಿಸಿದರು.ಶಾಸಕರ ಅನುದಾನದಡಿ ₹ 50 ಲಕ್ಷ ವೆಚ್ಚದಲ್ಲಿ ಈ ಮಠದ ಜೀರ್ಣೋದ್ಧಾರ ನಡೆಯಲಿದೆ ಎಂದು ಶಾಸಕ ದತ್ತಾತ್ರೇಯ ತಿಳಿಸಿದರು.ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ದೇವೇಂದ್ರ ಸ್ವಾಮೀಜಿ, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಾಮು ರೆಡ್ಡಿ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಅರವಿಂದ ಪೋದ್ದಾರ ಬೆಣ್ಣೆಶಿರೂರ, ಪಾಲಿಕೆ ಸದಸ್ಯ […]

Advertisement

Wordpress Social Share Plugin powered by Ultimatelysocial