ದರ್ಶನ್ ಗೆಳೆತನದ ಬಗ್ಗೆ ಸುದೀಪ್ ಮಾತು..!!

ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ದಿಕ್ಕುಗಳಂತಾಗಿಬಿಟ್ಟಿದ್ದರು. ಇನ್ನೆಂದೂ ಜೊತೆ ಸೇರಲಾರರು ಎಂದೇ ಎಲ್ಲರೂ ಭಾವಿಸಿದ್ರು. ಆದರೆ ಈ ಶೀಥಲ ಸಮರಕ್ಕೆ ಅಂತ್ಯ ಹಾಡುವ ಬಹಿರಂಗ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ”ದರ್ಶನ್ ಸದಾ ನನ್ನ ಗೆಳೆಯನೇ” ಎಂದಿರುವ ಸುದೀಪ್ ಆ ಮೂಲಕ ತಾವೊಬ್ಬ ವಿಶಾಲ ಹೃದಯಿ ವ್ಯಕ್ತಿ ಎಂಬುದನ್ನೂ ಜಾಹೀರು ಮಾಡಿದ್ದಾರೆ.ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್‌ಗೆ ನಿರೂಪಕರು ದರ್ಶನ್ ಹಾಗೂ ಸುದೀಪ್ ಒಟ್ಟಿಗಿರುವ ಚಿತ್ರವನ್ನು ತೋರಿಸಿ ಆ ಬಗ್ಗೆ ಮಾತನಾಡುವಂತೆ ಕೇಳಿದಾಗ ”ಅವನು ನನ್ನ ಗೆಳೆಯ, ಸದಾ ನನ್ನ ಗೆಳೆಯ, ಪರಸ್ಪರ ಮಾತನಾಡಿಲ್ಲ, ಒಟ್ಟಿಗೆ ಇಲ್ಲ ಎಂದ ಮಾತ್ರಕ್ಕೆ ಯಾವತ್ತೂ ನಾನು ಕೆಟ್ಟದು ಬಯಸಿಲ್ಲ. ಕೆಟ್ಟದ್ದು ಬಯಸೋದು ಇಲ್ಲ” ಎಂದಿದ್ದಾರೆ ಸುದೀಪ್. ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ತಾಂತ್ರಿಕ ಸಲಹಾ ಪಾಲಿಸುವಂತೆ ಆದೇಶ

Thu Oct 28 , 2021
      ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಪಾಲಿಸುವ ಬಗ್ಗೆ ಆದೇಶವನ್ನು ನೀಡಿದೆ ಸಮಿತಿಯ 128ನೇ ಸಭೆಯ ಶಿಫಾರಸ್ಸಿನನ್ವಯ.ಪ್ರಸ್ತುತ ರಾಜ್ಯದಲ್ಲಿ ದೈನಂದಿನ ಕೋಡ್-19 ಪ್ರಕರಣಗಳಲ್ಲಿ ಇಳಿಕೆಯನ್ನು ಗಮನಿಸಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಯಶಸ್ಸನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ.ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂದರ್ಶಕರು ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದು.ಈ ಸಂಬಂಧ ಆದೇಶಗಳನ್ನು ಈಗಾಗಲೇ ಹೊರಡಿಸಲಾಗಿದೆ.ಈ ಹಿನ್ನೆಲೆಯಲ್ಲಿ, ಪ್ರತಿ ಕಛೇರಿಯ ಕರ್ತವ್ಯದ ಅವಧಿಯಲ್ಲಿ.ಎಲ್ಲಾ ಸಿಬ್ಬಂದಿ ಹಾಗೂ ಸಂದರ್ಶಕರು […]

Advertisement

Wordpress Social Share Plugin powered by Ultimatelysocial