ಕಾಲ್​ ಗರ್ಲ್​ಗಾಗಿ ಆನ್​ಲೈನ್​ನಲ್ಲಿ​ ಸರ್ಚ್​ ಮಾಡಿದ ಟೆಕ್ಕಿಗೆ ಕಾದಿತ್ತು ಬಿಗ್​ ಶಾಕ್!​

ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆ ಹೆಚ್ಚಾಗಿದೆ. ಅಮಾಯಕ ಜನರ ದೌರ್ಬಲ್ಯವನ್ನು ತಿಳಿದುಕೊಂಡು ಜಾಲತಾಣದಲ್ಲಿ ವಂಚಿಸುವುದು ಸಾಮಾನ್ಯವಾಗಿದೆ. ಮಾಹಿತಿಗಾಗಿ ಗೂಗಲ್​ ಸರ್ಚ್​ ಮಾಡುವಾಗಲೂ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಸ್ವಲ್ಪ ಯಾಮಾರಿದರೂ ಜೇಬು ಖಾಲಿಯಾಗುವುದಂತೂ ಖಚಿತ.ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.ವಿವರಣೆಗೆ ಬರುವುದಾದರೆ, ಹೈದರಾಬಾದ್​ನ ಚಾಂದ್​ ನಗರದ ಯುವಕನೊಬ್ಬ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಆಕರ್ಷಕ ಸಂಬಳದೊಂದಿಗೆ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಹೀಗಿರುವಾಗ ಟೆಕ್ಕಿಗೆ ಲೈಂಗಿಕ ಬಯಕೆಯಾಗುತ್ತದೆ. ಅದಕ್ಕೆ ಹಣ ಖರ್ಚು ಮಾಡಲು ಸಹ ಟೆಕ್ಕಿ ಮುಂದಾಗಿರುತ್ತಾನೆ. ಕೊನೆಗೆ ಗೂಗಲ್​ನಲ್ಲಿ ಕಾಲ್​ ಗರ್ಲ್​ಗಾಗಿ ಯುವಕ ಹುಡುಕಾಡುತ್ತಾನೆ.ವೆಬ್​ಸೈಟ್​ ಒಂದರ ಲಿಂಕ್​ ಮೇಲೆ ಕ್ಲಿಕ್​ ಮಾಡಿ, ಯುವತಿಯ ವಾಟ್ಸ್​ಆಯಪ್​ ನಂಬರ್​ ಸಹ ಪಡೆಯುತ್ತಾನೆ. ಬಳಿಕ ಚಾಟಿಂಗ್​ ಆರಂಭಿಸುತ್ತಾನೆ. ಆದರೆ, ಚಾರ್ಮಿ ಹೆಸರಿನಲ್ಲಿ ಚಾಟಿಂಗ್​ ಮಾಡುವ ಪಟೇಲ್​ ಎಂಬಾತ ಸಂತ್ರಸ್ತ ಯುವಕನಿಗೆ ಕೆಲ ಯುವತಿಯರ ಫೋಟೋವನ್ನು ಕಳುಹಿಸುತ್ತಾನೆ. ಮೊದಲ ಬುಕ್ಕಿಂಗ್​ಗೆ 510 ರೂ. ಹಣ ಪಾವತಿಸಲು ಕೇಳುತ್ತಾನೆ. ಸ್ವಲ್ಪವು ತಡಮಾಡದೇ ಯುವಕ ಹಣ ಕಳುಹಿಸುತ್ತಾನೆ. ಇದಾದ ಬಳಿಕ ಭದ್ರತಾ ಠೇವಣಿಯಾಗಿ ರೂ.5,500 ಮತ್ತು ಮತ್ತೆ ರೂ.7,800 ಕಳುಹಿಸಲು ಕೇಳುತ್ತಾನೆ. ಇತ್ತ ಟೆಕ್ಕಿ ಅವರು ಕೇಳಿದ್ದನ್ನೆಲ್ಲಾ ಕಳುಹಿಸುತ್ತಾನೆ. ವಿಚಾರಿಸುವ ಗೋಜಿಗೆ ಹೋಗುವುದೇ ಇಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜನವರಿ 5ರಂದು 293 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ

Thu Jan 5 , 2023
ಕಾನ್ಪುರ ಶತಾಬ್ದಿ, ಹೌರಾದಿಂದ ನ್ಯೂ ಜಲ್ಪೈಗುರಿ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಜಯನಗರದಿಂದ ನವದೆಹಲಿಗೆ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಸೇರಿದಂತೆ 293 ರೈಲುಗಳನ್ನು ಭಾರತೀಯ ರೈಲ್ವೆ ಸಂಪೂರ್ಣವಾಗಿ ರದ್ದುಗೊಳಿಸಿದೆ. ಹೆಚ್ಚುವರಿಯಾಗಿ, ಹೌರಾದಿಂದ ಪುಣೆ ಡುರೊಂಟೊ ಎಕ್ಸ್‌ಪ್ರೆಸ್ ಮತ್ತು ದೆಹಲಿಯಿಂದ ಕೋಟ್‌ದ್ವಾರ ಸಿದ್ಧಬಲಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ 17 ರೈಲುಗಳನ್ನು ಬಿಡಲಾಗಿದೆ. 19 ರೈಲುಗಳ ಮಾರ್ಗ ಬದಲಿಸಲಾಗಿದೆ. ಇಂದು ರದ್ದಾದ ಪ್ರಮುಖ ರೈಲುಗಳ ಪಟ್ಟಿ ರೈಲು [ಹೆಸರು] 01606 PTK-JMKR EXP […]

Advertisement

Wordpress Social Share Plugin powered by Ultimatelysocial