ಪ್ರೀತಿಸುವ ವಿಚಾರದಲ್ಲಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯತೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಣಸೆಗಟ್ಟೆಪಾಳ್ಯ ಗ್ರಾಮದಲ್ಲಿ ನಡೆದಿದೆ.ಶಶಿಕಲಾ (23) ಮನೆಯಲ್ಲಿ ನೇಣಿಗೆ ಶರಣಾದ ಯುವತಿಯಾಗಿದ್ದು, ಮೃತ ಶಶಿಕಲಾ ಹಲವಾರು ತಿಂಗಳಿಂದ ಬೆಂಗಳೂರು ಮೂಲದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರಿಬ್ಬರ ಪ್ರೀತಿ ವಿಚಾರದಲ್ಲಿ ತಡರಾತ್ರಿ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮನನೊಂದು ಶಶಿಕಲಾ ತಡರಾತ್ರಿ […]

ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಈ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಚೆನ್ನೈನಿಂದ 500 ಕಿ.ಮೀ ದೂರದಲ್ಲಿರುವ ವಿರುಧುನಗರದಲ್ಲಿ ಇಂದು ಮಧ್ಯಾಹ್ನ 1:30ರ ಸುಮಾರಿಗೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಸ್ಥಳದಲ್ಲೇ 6 ಜನರು ಸಜೀವ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ […]

ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿ ಪಿಎಸ್ ವೈ ಶಿವಣ್ಣನವರು ಮತ್ತು ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲೇ ನಿಂತು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಇದಲ್ಲದೆ ಜನರು ತಮ್ಮ ವಾಹನಗಳಿಗೆ ದಾಖಲೆ ಮಾಡಿಸಿಕೊಳ್ಳುವುದು ಮತ್ತು ರಸ್ತೆ ನಿಯಮಗಳನ್ನ ಪಾಲಿಸುವ ಬಗ್ಗೆ ಅರಿವು ಮೂಡಿಸಿದ್ದಾರೆ. ರಸ್ತೆಯಲ್ಲಿ ವಾಹನ ಚಾಲಕರಿಗೆ ದಂಡ ಹಾಕುವ ಪೊಲೀಸರೇ ರಸ್ತೆಯಲ್ಲಿ ನಿಂತು ಅರಿವು ಮೂಡಿಸಿರುವುದು ಮಾದರಿಯ ಕೆಲಸವಾಗಿದೆ. ಇದನ್ನೂ […]

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಇಂದು ನಸುಕಿನ ವೇಳೆ ಸಂಭವಿಸಿದೆ. ಹೇರ ನಿವಾಸಿಗಳಾದ ಚಂದ್ರ ಶೇಖರ್ ಹಾಗೂ ಸೌಮ್ಯ ಕಾಮತ್ ಅವರು ರಾತ್ರಿ ತೋಟದ ಸ್ಪಿಂಕ್ಲೇರ್ ಬದಲಾಯಿಸುವಲ್ಲಿ ನಿರತರಾಗಿರುವ ವೇಳೆ ಚಿರತೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಚಂದ್ರ ಶೇಖರ್ ಹಾಗೂ ಸೌಮ್ಯ ಕಾಮತ್ ಅವರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ […]

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸಿ ಮಗುಚಿ ಬಿದ್ದು ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವು, 5 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂಧ ರಸ್ತೆಯಲ್ಲಿ ನಡೆದಿದೆ. ಅಕ್ಕಿಗುಂದ ದಿಂದ ಲಕ್ಷ್ಮೇಶ್ವರ ಕಡೆಗೆ ಹೊಗುತ್ತಿದ್ದ ಟಾಟಾ ಏಸಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ ಒಬ್ಬ ಸಾವು ರೂಪ್ಲಪ್ಪ ವಾಚಪ್ಪ ಲಮಾಣಿ(65) ಎನ್ನಲಾಗುತ್ತಿದೆ. ಇನ್ನ 5 ಜನ ಮಹಿಳೆಯರು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ […]

ಬಾಗಲಕೋಟ ಜಿಲ್ಲೆಯ ಮುಧೋಳ್ ತಾಲೂಕಿನಿಂದ ಬೀಳಗಿಗೆ ಹೋಗುವ ಮುಖ್ಯರಸ್ತೆ ಬಸ್ ಸ್ಟ್ಯಾಂಡ್ ಎದುರುಗಡೆ ತಗ್ಗು ಗುಂಡ್ಡಿ ಬಿದ್ದು 5 6 ತಿಂಗಳಾದರೂ ಕೂಡ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಜನರಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಪೌರಾಯುಕ್ತರು ಸುನೀಲ್ ಪಾಟೀಲ್ ಗಮನಹರಿಸಬೇಕು ಎಂದು ಜನರು ಒತ್ತಾಯಿಸಿದರು. ಮೇವಿನ ಬಜಾರದಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕ ಘಟಾರುಗಳು ತುಂಬಿ ಹರಿದು ಗಬ್ಬು ವಾಸನೆಯಿಂದ ಕೂಡಿದೆ ಅದರಿಂದ ಜನರು ಬೇಸತ್ತು ಹೋಗಿ ಅದನ್ನು ಸ್ವಚ್ಛ ಮಾಡುವ […]

ದೇವಸ್ಥಾನದ ಬೀಗ ಒಡೆದು ಹುಂಡಿ ಕಳವು ಮಾಡಿರುವ ಘಟನೆ ಮಾಲೂರು ನಗರದ ವೈಟ್ ಗಾರ್ಡನ್ ಬಳಿ ನಡೆದಿದೆ. ಸಾಯಿ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ಮಾಡಿ ಹುಂಡಿ ಸಮೇತ ಕಳ್ಳರು ಪರಾರಿಯಾಗಿದ್ದಾರೆ.ಹುಂಡಿಯಲ್ಲಿ ಸುಮಾರು 30 ಸಾವಿರ ಅಂದಾಜು ಹಣವಿದ್ದು,ಸ್ಥಳಕ್ಕೆ ಮಾಲೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಪ್ರಕರಣ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ಏರಿಕೆಯಾಗುತ್ತಲೇ ಇದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರಿಗೆ ಅರಿವಿಲ್ಲದಂತೆ ದಿನನಿತ್ಯವೂ ಜೇಬಿಗೆ ಕತ್ತರಿ ಬೀಳುತ್ತಿದೆ. ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆಯಿಂದ ದೈನಂದಿನ ವಸ್ತುಗಳ ಬೆಲೆಯೂ ದುಬಾರಿಯಾಗಿದ್ದು, ಶ್ರೀಸಾಮಾನ್ಯ ಜೀವನ ನಡೆಸುವುದೇ ದುಸ್ತರವಾಗುವಂತಾಗಿದೆ. ಕೊರೊನಾ ಲಾಕ್‌ ಡೌನ್‌ ನಿಂದ ಮೊದಲೇ ಆರ್ಥಿಕವಾಗಿ ಕಂಗೆಟ್ಟಿದ್ದವರಿಗೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನೂ ಓದಿ :ಕಾರು ಬೈಕ್ […]

ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಒಂದು ನಡೆದಿದೆ..ಗುಬ್ಬಿ ತಾಲೂಕಿನ ಹೇರೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ ಮತ್ತು ಕಾರಿನಲ್ಲಿದ್ದ ಆಸ್ಪತ್ರೆ ವೈದ್ಯರಿಗೆ ಗಂಭೀರ ಗಾಯಗಳಾಗಿವೆ. ಸಾವನಪ್ಪಿರುವ ವ್ಯಕ್ತಿಯು ದೊಡ್ಡಗುಣಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸಂಜಯ್ ಎಂದು ಹೇಳಲಾಗುತ್ತಿದೆ. ಇನ್ನು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಗುಬ್ಬಿ ಪೋಲೀಸರು […]

ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ, ನಾಲ್ಕು ತಿಂಗಳ ಸೆರೆವಾಸದ ಬಳಿಕ ಸದ್ಯ ಹೊರಬಂದಿದ್ದಾರೆ.. ಜೈಲಿನಿಂದ ಹೊರಬಂದ ನಂತ್ರ ಸಾಕಷ್ಟು ಜನರು ನಟಿ ರಾಗಿಣಿ ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೇಸೇಜ್ ಮಾಡುವ ಮೂಲಕ, ಫೋನ್ ಮಾಡುವ ಮೂಲಕ ನಿಂದಿಸಿದ್ದಾರೆ.. ಇದ್ರಿಂದಾಗಿ ತಮಗಾದ ನೋವನ್ನ ರಾಗಿಣಿ ಸದ್ಯ ಇನ್ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಹೇಳಿಕೊಂಡಿದ್ದಾರೆ.. ಸೆರೆವಾಸದ ಜೀವನದ ನೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.. ಜೀವನದ […]

Advertisement

Wordpress Social Share Plugin powered by Ultimatelysocial