ಬಿಟ್ ಕಾಯಿನ್ ಹಾಗೂ ಡ್ರಗ್ಸ್ ವಿಚಾರಗಳು ರಾಜ್ಯದಲ್ಲಿ ಮತ್ತೆ ಚರ್ಚೆಗೆ ಬಂದಿದ್ದು, ಬಿಟ್ ಕಾಯಿನ್ ಕೇಸ್ ನಲ್ಲಿ ಪ್ರಭಾವಿಗಳೇ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಬೊಮ್ಮಾಯಿ ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಕೇಸ್ ವಿಚಾರವನ್ನು ಸಮಗ್ರವಾಗಿ ತನಿಖೆ ನಡೆಸಿದೆ. ತನಿಖೆ ಬಳಿಕ ನಾವೇ ಇಡಿ […]

ದಕ್ಷಿಣ ಭಾರತ ಪ್ರವಾಸೋದ್ಯಮಗಳ ಸಚಿವ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ಸಚಿವ ಆನಂದ ಸಿಂಗ್ ಗರಂ ಅಗಿದ್ದಾರೆ..ಕಾರ್ಯಕ್ರಮದ ನಡುವೆ ಹೊರಬಂದು ಅಧಿಕಾರಿಗಳಿಗೆ ಸಚಿವ ಆನಂದ ಸಿಂಗ್ ತರಾಟೆ ತೆಗೆದುಕೊಂಡಿದ್ದಾರೆ.. ಕರ್ನಾಟಕದಲ್ಲಿ ರೂಲ್ ಇದೆ.. ನಮ್ಮ ಆಡಳಿತ ಭಾಷೆ ಕನ್ನಡ.. ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ ಎಂದು ಅಧಿಕಾರಿಗಳಿಗೆ ಸಚಿವ  ಆನಂದ ಸಿಂಗ್ ಎಚ್ಚರಿಕೆ ನೀಡಿದ್ದಾರೆ… ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada

ರಷ್ಯಾದಿಂದ ಎಸ್​ 400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡ್ಕೊಂಡಿರೋ ಭಾರತದ ಮೇಲೆ CAATSA ಅಂದ್ರೆ ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್​​ ಥ್ರೂ ಸ್ಯಾಂಕ್ಷನ್ ಆಕ್ಟ್​​ ಅಡಿಯಲ್ಲಿ ನಿರ್ಬಂಧ ಹೇರಬಾರದು ಅಂತ ಸೆನೆಟರ್​ಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಸೀನಿಯರ್ ಸೆನೆಟರ್​​ಗಳಾದ ಮಾರ್ಕ್​ ವಾರ್ನರ್ ಮತ್ತು ಜಾನ್ ಕಾರ್ನಿನ್​​​​ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗೆ ಪತ್ರ ಬರೆದಿದ್ದಾರೆ. 2019ರ ಅಕ್ಟೋಬರ್​ನಲ್ಲಿ ಭಾರತ– ರಷ್ಯಾ ನಡುವೆ 543 ಕೋಟಿ ಡಾಲರ್​​ ಮೊತ್ತದಲ್ಲಿ 5 ಎಸ್​ 400 […]

ಇಂದಿನಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂರು ದಿನಗಳ ಗುಜರಾತ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ 29 ರಂದು ಭಾವನಗರ ಜಿಲ್ಲೆಯಲ್ಲಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಸತಿ ಯೋಜನೆ ಉದ್ಘಾಟಿಸಿ, ನಂತರ ಅವರು ಅಹಮದಾಬಾದ್‌ಗೆ ತೆರಳಿ ನಂತರ ಮಹುವಾಗೆ ಹೊಗಲಿದ್ದಾರೆ. ಅವರನ್ನು ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಬರಮಾಡಿಕೊಳ್ಳಲಿದ್ದು, ಅಲ್ಲಿಂದಭಾವನಗರ ಜಿಲ್ಲೆಯ ತಲಗಜರಡಾದಲ್ಲಿರುವ ಮೊರಾರಿ ಬಾಬು ಅವರ ಆಶ್ರಮವಾದ ಶ್ರೀ ಚಿತ್ರಕೂಟಕ್ಕೆ ಭೇಟಿ ನೀಡಲಿದ್ದಾರೆ.   ತಾಜಾ ಸುದ್ಧಿಗಳಿಗಾಗಿ ಈಗಲೇ […]

ದೇಶದಲ್ಲಿ ತೀವ್ರವಾಗಿ ಆಹಾರ ಬಿಕ್ಕಟ್ಟು ಎದುರಿಸುವಂತಾಗಿದ್ದು, ಜನರು 2025ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಕಠಿಣ ಮತ್ತು ವಿಲಕ್ಷಣ ಆದೇಶಗಳನ್ನು ಹೊರಡಿಸುವ ಮೂಲಕ ಕುಖ್ಯಾತಿ ಗಳಿಸಿದ್ದು, ಇದೀಗ ಅಂತಹ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿರುವುದಾಗಿ ವಿವರಿಸಿದೆ.ದೇಶದಲ್ಲಿನ ಆಹಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಳ ಮಾಡಲು ಮಾರ್ಗೋಪಾಯ ಕಂಡುಹಿಡಿಯಬೇಕೆಂದು ಕಿಮ್ ಮನವಿ […]

ನಕ್ಸಲರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿತನಾಗಿದ್ದ ವಿದ್ಯಾರ್ಥಿಗೆ ಸುಪ್ರೀಂಕೋರ್ಟ್ ಗುರುವಾರ ಜಾಮೀನು ನೇಡಿದೆ. ಕೇಂದ್ರ ರಾಷ್ಟ್ರೀಯ ತನಿಖಾ ದಳ 2019 ರ ನವೆಂಬರ್  2 ರಂದು ಪತ್ರಿಕೋದ್ಯಮದ ವಿದ್ಯಾರ್ಥಿ ಥವಾಹ್ ಫಾಸಲ್ ಮತ್ತು ಕಾನೂನು ವಿದ್ಯಾರ್ಥಿ ಅಲ್ಲನ್ ಸೋಯೆಬ್‍ರನ್ನು ಕಾಜಿಕೋಡದಲ್ಲಿ ಬಂಧಿಸಿ, ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.   ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada

ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡುವುದಕ್ಕೆ ಭಯವೇಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವಾಜ್ ಬೊಮಾಯಿ ಅವರನ್ನು ಪ್ರಶ್ನಿಸಿದ್ದಾರೆ.ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದಕ್ಕೆ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಆದರೆ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅನ್ನುತ್ತಾರೆ. ಅವರು ಹೇಳಿದ್ದು ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಕೆ ಏಕೆ ಭಯ ಎಂದು ಪ್ರಶ್ನಿಸಿದರು.ಬಿಜೆಪಿಯವರಿಗೆ ದುಡ್ಡು ಹಂಚುವುದೇ ಕೆಲಸ. […]

ಸಚಿವರಿಲ್ಲದೆ ರಾಜ್ಯದ ಶಕ್ತಿಸೌಧ ಖಾಲಿ ಖಾಲಿಯಾಗಿದೆ ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಟೀಮ್ ಬ್ಯೂಸಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ….ಕಳೆದ ಹಲವಾರು ದಿನಗಳಿಂದ ವಿಧಾನಸೌಧದ ಕಡೆ ಸಿಎಂ ಬೊಮ್ಮಾಯಿ ಮುಖ ಮಾಡಿಲ್ಲ  ಉಪಚುನಾವಣೆ ಪ್ರಚಾರದಲ್ಲಿಯೇ  ಸಿಎಂ ಅವರು  ಫುಲ್ ಬ್ಯೂಸಿಯಾಗಿದ್ದಾರೆ…ರಾಜ್ಯದ ಎಲ್ಲಾ ಕೆಲಸಗಳನ್ನು ಸೈಡಿಗಿಟ್ಟು ಬೈ ಎಲೆಕ್ಷನ ಪ್ರಚಾರದಲ್ಲಿ  ಸಿಎಂ ನಿರತರಾಗಿದ್ದಾರೆ….ಉಪಚುನಾವಣೆ ನಡೆಯುವ ಕ್ಷೇತ್ರದಲ್ಲೆ ಠಿಕಾಣಿ ಹುಡಿದ್ದಾರೆ..ಇನ್ನು ಸಿಎಂ ಜೊತೆಗೆ ಮಂತ್ರಿಗಳು ಸಹ ಪ್ರಚಾರ ನಡೆಸುತ್ತಿದ್ದಾರೆ.ರಾಜ್ಯದ […]

ಅಮೆರಿಕ, ಬ್ರೆಜಿಲ್‌, ಜಪಾನ್‌ಗಳಿಗಿಂತಲೂ ಹೆಚ್ಚಿನ ಜನರಿಗೆ ಕೋವಿಡ್‌ ಲಸಿಕೆ ನೀಡಿರುವುದು ಭಾರತದ ಐತಿಹಾಸಿಕ ಸಾಧನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ ಎಂದ ಆರೋಗ್ಯ ಸಚಿವ ಕೆ.ಸುಧಾಕರ್‌ ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್‌ ಹಾಕಿಸಿಕೊಂಡು 2ನೆಯ ಡೋಸ್‌ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು. ನಗರದಲ್ಲಿ ಶುಕ್ರವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 100 ಕೋಟಿ ಲಸಿಕೆ ಸಾಧನೆ ವಿಚಾರ ಹಂಚಿಕೊಂಡ […]

ನಮ್ಮದು ಕೇವಲ ಮಾತುಗಳಲ್ಲ. ಕೆಲಸ ಮಾಡುತ್ತಿದ್ದೇವೆ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಗೊತ್ತಿದೆ. ತಳಮಟ್ಟದಲ್ಲಿ ಮಾತಾಡಿದರೆ ದೊಡ್ಡವರಾಗಲ್ಲ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಹಾನಗಲ್ಲ ಕ್ಷೇತ್ರದ ಚಿಕ್ಕೌಶಿ– ಹೊಸೂರು ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರನ್ನಾದರೂ ಆಯ್ಕೆ ಮಾಡಬೇಕಾದರೆ ಜನರು ತುಲನಾತ್ಮಕವಾಗಿ ನೋಡುತ್ತಾರೆ. ಉದಾಸಿ ಆರು ಬಾರಿ ಆಯ್ಕೆಯಾಗಿದ್ದರು ಎಂದರೆ ನಿಮ್ಮ ಹೃದಯದಲ್ಲಿ […]

Advertisement

Wordpress Social Share Plugin powered by Ultimatelysocial