ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮೂರನೆ ಅಲೆಯ ಆತಂಕ ಇಲ್ಲ.ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಎನ್‌ಇಪಿ ಜಾರಿ ಕುರಿತಂತೆ ಮಾತನಾಡಿದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. […]

ಮಹಿಳೆಯರ ಮದುವೆಯ  ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರವು ಹಲವಾರು ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿದೆ ಮತ್ತು ಸಿಪಿಐ-ಎಂ ವಿವಿಧ ಅಂಶಗಳಲ್ಲಿ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.ಸಿಪಿಐ-ಎಂ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಮಾತನಾಡಿ, ಸರ್ಕಾರದ ಪ್ರಸ್ತಾವನೆಯು ಮಹಿಳಾ ಸಬಲೀಕರಣದ ಹೋರಾಟಕ್ಕೆ ಸಹಾಯ ಮಾಡುವುದಿಲ್ಲ. ‘ವಯಸ್ಕರ ವೈಯಕ್ತಿಕ ಆಯ್ಕೆಯನ್ನು ಅಪರಾಧೀಕರಿಸುವುದು ಸಂಪೂರ್ಣವಾಗಿ ತಪ್ಪು. ಸರ್ಕಾರವು ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಬಯಸಿದರೆ, ಅದು ಗಂಡುಮಕ್ಕಳ […]

ಶಿವಮೊಗ್ಗ: ಮಹಾರಾಷ್ಟ್ರ ಸಿಎಂ ಆಕಾಶದಿಂದ ಇಳಿದು ಬಂದಿಲ್ಲ ಅಂಥ ಸಚಿವ ಈಶ್ವರಪ್ಪನವುರ ಟಾಂಗ್‌ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಹೇಳಿದ್ರು. ಇದೇ ವೇಳೆ ಅವರು ಮಾತನಾಡುತ್ತ, ನಾಡು, ನುಡಿಗೆ, ಗಡಿಗೆ ಸಂಬಂಧಪಟ್ಟಂತೆ ಮಾಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.ಇನ್ನೂ ಮಹಾ ಸಿಎಂ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ ಅಂತ ಅವರು ಹೇಳಿದರು. ಇನ್ನೂ […]

ದೇಶಭಕ್ತರಾದ ಶಿವಾಜಿ ಮಹರಾಜರು, ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮ ಅವರು ಸಮುದಾಯ ಮೀರಿ ನಿಂತು ದೇಶಕ್ಕಾಗಿ ತ್ಯಾಗ ಮಾಡಿ ದೇಶವನ್ನು ಒಗ್ಗೂಡಿಸಿದವರು, ಅವರ ಹೆಸರಲ್ಲಿ ನಾವೆಲ್ಲರು ಒಗ್ಗಟ್ಟಾಗಿ ಇರಬೇಕು, ಅವರನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಶಿಗ್ಗಾವಿ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ, ಈಗ ನಡೆಯುತ್ತಿರುವ ಗೊಂದಲದ ಬಗ್ಗೆ […]

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ. ಅವರು ವಿಭಿನ್ನ ಕಾರ್ಯನಿರ್ವಾಹಕರು, ವಿಭಿನ್ನ ನೀತಿಗಳು, ವಿಭಿನ್ನ ಕಾರ್ಯ ವಿಧಾನಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದ್ದಾರೆ.ಆಲೋಚನೆಗಳು ಹಾಗೂ ಸಂಸ್ಕೃತಿ ಸಂಘದ್ದು ಹಾಗೂ ಅದು ಪರಿಣಾಮಕಾರಿಯಾಗಿದೆ. ಅಲ್ಲಿ  ಕೆಲಸ ಮಾಡುತ್ತಿರುವ ಪ್ರಮುಖರು ಸಂಘಕ್ಕೆ ಸೇರಿದವರು ಹಾಗೂ ಹಾಗೆಯೇ ಉಳಿಯುತ್ತಾರೆ. ಅಂತಹ ಸಂಬಂಧ ಮಾತ್ರ ಇದೆ. ಮಾಧ್ಯಮಗಳು ಹೇಳುವಂತೆ ‘ಡೈರೆಕ್ಟ್ […]

ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳು ಕರ್ನಾಟಕದಲ್ಲಿ ಅಷ್ಟೇನೂ ಪ್ರಬಲವಾಗಿಲ್ಲ. ಅವುಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಎಲ್ಲಿದೆ? ರಾಷ್ಟ್ರದ್ರೋಹಿ ಕೆಲಸ ಮಾಡುವ ಎಸ್‍ಡಿಪಿಐನಂತಹ ಸಂಘಟನೆಗಳ ಬಗ್ಗೆ ನಿಷೇಧದ ಮಾತು ಕೇಳಿಬಂದರೆ ಸಮಂಜಸ.ಅಷ್ಟೇನೂ ಪ್ರಬಲವಾಗಿಲ್ಲದ, ಶಕ್ತಿಯೇ ಇಲ್ಲದ ಎಂಇಎಸ್ ಬಗ್ಗೆ ನಾವು ಅನಗತ್ಯವಾಗಿ ಏಕೆ ಮಹತ್ವ ನೀಡಬೇಕು ಎಂದು ಪ್ರಶ್ನಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದಕ್ಕೆ ಸಂಬಂಧಪಟ್ಟಂತೆ ಈಗಾಗಲೇ […]

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್  ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು.ಗೋಹತ್ಯೆ ನಿಷೇಧ ಜಾರಿಯಾದ ನಂತರ ಸಾವಿರಾರು ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗಿದೆ ಎಂದರು.ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡಾಟ ಹೆಚ್ಚಾಗುತ್ತಿದೆ.ಎಂಇಎಸ್ ಆಟಕ್ಕೆ ಸರ್ಕಾರ ಬ್ರೇಕ್ ಹಾಕಲಿದೆ. ಈಗಾಗಲೇ ಎಂಇಇಎಸ್ ಬ್ಯಾನ್ ಮಾಡುವ ವಿಚಾರ ಚರ್ಚೆ […]

ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಸ್ಪರ್ಧಿಸುವಂತೆ ರಾಕೇಶ್ ಟಿಕಾಯತ್ ಅವರಿಗೆ ಮನವಿ ಮಾಡಿದ್ದರು.ಆದರೆ, ಆ ಮನವಿಯನ್ನು ಟಿಕಾಯತ್ ತಿರಸ್ಕರಿಸಿದ್ದಾರೆ.ಈ ಸಂಬಂಧ ಉತ್ತರಪ್ರದೇಶದ ಶಾಮ್ಲಿಯಲ್ಲಿ ಮಾತನಾಡಿರುವ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ. ಆದರೆ, ಉತ್ತರಪ್ರದೇಶದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ರಾಜ್ಯದ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ […]

ಇತರರ ನಂಬಿಕೆ ಅಥವಾ ಭಾವನೆಗಳಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು   ಒತ್ತಿ ಹೇಳಿದರು.ನವದೆಹಲಿಯ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಇತರರ ನಂಬಿಕೆ ಅಥವಾ ಭಾವನೆಗಳಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು  ಜವಾಬ್ದಾರಿಯುತವಾಗಿ ಬಳಸಬೇಕು. ಲೇಖಕರು ಮತ್ತು ಚಿಂತಕರು ಬೌದ್ಧಿಕತೆಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.ಸಮಾಜದಲ್ಲಿ ಚರ್ಚೆ, ವಿವಾದಗಳನ್ನು ಪ್ರಚೋದಿಸುವುದಿಲ್ಲ ಎಂದರು.ಖ್ಯಾತ ಹಿಂದಿ ಲೇಖಕ ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ಈ ವರ್ಷದ ಮೂರ್ತಿದೇವಿ […]

ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.ಅಲ್ಲದೆ, ಮಹಾರಾಷ್ಟ್ರ ಏಕೀಕರಣ ಸಮಿತಿಗೆ ತನ್ನ ಬೆಂಬಲವನ್ನು ಮಹಾರಾಷ್ಟ್ರ ಸರ್ಕಾರವು ಪುನರುಚ್ಛರಿಸಿದೆ. ಘಟನೆಯ ನಂತರ ಗಡಿಭಾಗದ ಜಿಲ್ಲೆಗಳಾದ ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಪ್ರತಿಭಟನೆಗಳು ನಡೆದಿವೆ.ಪ್ರತಿಮೆಗೆ ಮಸಿ ಬಳಿದಿರುವುದು ಕನ್ನಡಿಗರ ವಿಕೃತ […]

Advertisement

Wordpress Social Share Plugin powered by Ultimatelysocial