ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ:RSS ಮುಖ್ಯಸ್ಥ ಮೋಹನ್ ಭಾಗವತ್

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ. ಅವರು ವಿಭಿನ್ನ ಕಾರ್ಯನಿರ್ವಾಹಕರು, ವಿಭಿನ್ನ ನೀತಿಗಳು, ವಿಭಿನ್ನ ಕಾರ್ಯ ವಿಧಾನಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದ್ದಾರೆ.ಆಲೋಚನೆಗಳು ಹಾಗೂ ಸಂಸ್ಕೃತಿ ಸಂಘದ್ದು ಹಾಗೂ ಅದು ಪರಿಣಾಮಕಾರಿಯಾಗಿದೆ. ಅಲ್ಲಿ  ಕೆಲಸ ಮಾಡುತ್ತಿರುವ ಪ್ರಮುಖರು ಸಂಘಕ್ಕೆ ಸೇರಿದವರು ಹಾಗೂ ಹಾಗೆಯೇ ಉಳಿಯುತ್ತಾರೆ. ಅಂತಹ ಸಂಬಂಧ ಮಾತ್ರ ಇದೆ. ಮಾಧ್ಯಮಗಳು ಹೇಳುವಂತೆ ‘ಡೈರೆಕ್ಟ್ ರಿಮೋಟ್ ಕಂಟ್ರೋಲ್’ ಯಾವುದೂ ಇಲ್ಲ. ಕೇಂದ್ರ ಸರಕಾರದ ಮೇಲೆ ಆರೆಸ್ಸೆಸ್ ಅಂತಹ ನಿಯಂತ್ರಣ ಹೊಂದಿಲ್ಲ” ಎಂದು ಅವರು ಒತ್ತಿ ಹೇಳಿದರು.ಧರ್ಮಶಾಲಾದಲ್ಲಿ ಮಾಜಿ ಸೈನಿಕರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಭಾಗವತ್ ಈ ಹೇಳಿಕೆ ನೀಡಿದ್ದಾರೆ.ತಮಿಳುನಾಡಿನ ಕುನ್ನೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 12 ಸಶಸ್ತ್ರ ಪಡೆಗಳ ಸಿಬ್ಬಂದಿಯ ನಿಧನಕ್ಕೆ ಅವರು ಸಂತಾಪ ವ್ಯಕ್ತಪಡಿಸಿ ಒಂದು ನಿಮಿಷ ಮೌನ ಆಚರಿಸಿದರು.ಶನಿವಾರ ಸಂಜೆ ಧರ್ಮಶಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಾಜಿ ಸೈನಿಕರು ಭಾಗವಹಿಸಿದ್ದರು. ಆರೆಸ್ಸೆಸ್ ಮುಖ್ಯಸ್ಥರು ಸಂಘದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ಒತ್ತಾಯಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶಕ್ಕಾಗಿ ಹೋರಾಡಿದವರನ್ನು ಜಾತಿಗೆ ಸೀಮಿತ ಮಾಡಬಾರದು: ನಾವೆಲ್ಲರು ಒಗ್ಗಟ್ಟಾಗಿರಬೇಕು: ಸಿಎಂ ಬೊಮ್ಮಾಯಿ ಮನವಿ

Sun Dec 19 , 2021
ದೇಶಭಕ್ತರಾದ ಶಿವಾಜಿ ಮಹರಾಜರು, ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮ ಅವರು ಸಮುದಾಯ ಮೀರಿ ನಿಂತು ದೇಶಕ್ಕಾಗಿ ತ್ಯಾಗ ಮಾಡಿ ದೇಶವನ್ನು ಒಗ್ಗೂಡಿಸಿದವರು, ಅವರ ಹೆಸರಲ್ಲಿ ನಾವೆಲ್ಲರು ಒಗ್ಗಟ್ಟಾಗಿ ಇರಬೇಕು, ಅವರನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಶಿಗ್ಗಾವಿ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ, ಈಗ ನಡೆಯುತ್ತಿರುವ ಗೊಂದಲದ ಬಗ್ಗೆ […]

Advertisement

Wordpress Social Share Plugin powered by Ultimatelysocial