ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಬೆಳಗಾವಿ ಎಂಇಎಸ್ ಪುಂಡಾಟಿಕೆ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಅನ್ನೋದು ಬಹಳ ಸ್ಪಷ್ಟ ಎಂದು ಬಿಜೆಪಿ ಶಾಸಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ.ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ದಾರೆ.ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಎಂಇಎಸ್ ಜೊತೆ ಇದ್ದಿದ್ದು ಕಾಂಗ್ರೆಸ್ ಕಾರ್ಯಕರ್ತರು.ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಕೂಡ ಕಾಂಗ್ರೆಸ್ ಕಾರ್ಯಕರ್ತರು.ಡಿ.ಕೆ ಶಿವಕುಮಾರ್, […]

ಬೆಳಗಾವಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಬುಧವಾರದ ನಂತರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮೋದನೆ ಸಾಧ್ಯತೆಯಿದ್ದು, ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ.ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ […]

ಪುಂಡಾಟಿಕೆ ತಡೆಗಟ್ಟಲು ನಿರ್ಣಾಯಕ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಪುಂಡಾಟಿಕೆ ಮಾಡಿದ ಪ್ರಮುಖರನ್ನು ಬಂಧಿಸಲಾಗಿದೆ. ಪುಂಡಾಟಿಕೆ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದರು.ಮಹಾರಾಷ್ಟ್ರ ಸರ್ಕಾದೊಂದಿಗೆ ನಮ್ಮ ರಾಜ್ಯದ ಗೃಹ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರು ಮಾತನಾಡಿ ಕನ್ನಡಿಗರು ಹಾಗೂ ಕನ್ನಡಿಗರ ಆಸ್ತಿ ಹಾಗೂ ಸರ್ಕಾರಿ ವಾಹನಗಳ ರಕ್ಷಣೆಗೆ ಕ್ರಮಕೈಗೊಳ್ಳಯುವಂತೆ […]

ತಾವಾಡಿದ ಮಾತುಗಳು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಅವರ ಕೋಪ ಇನ್ನೂ ತಣ್ಣಿದಿಲ್ಲ.ಸುವರ್ಣಸೌಧಕ್ಕೆ ಬಂದ ಅವರನ್ನು ಎಂಇಎಸ್‌ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು, ಮಾಧ್ಯಮಗಳ ಮುಂದೆ ಬಂದು ಅವರು ಕೈ ಮುಗಿದು ಒಳ ಹೋದರು.ಈ ಸಂದರ್ಭದಲ್ಲಿ ಅವರು ‘ ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ. ನಾಲ್ಕುದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ’ […]

ಬೆಳಗಾವಿ ಅನಗೋಳ ಇವತ್ತು ಮುಂಜಾನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅನಗೋಳ ಕನಕದಾಸ ಕಾಲೋನಿಗೇ ಭೇಟಿ ನೀಡಿ ಮರುಪ್ರತಿಷ್ಠಾಪನೆಗೊಂಡ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಿ ಹಾಗೇ ಮಾಧ್ಯಮದವರೊದಿಗೆ ಮಾತನಾಡಿದ ಮಾಜಿ ಸಿದ್ದರಾಮಯ್ಯರವರು ಎಂ ಇ ಎಸ್ ಬ್ಯಾನ್ ಬಗ್ಗೆ ನಾನು ಚರ್ಚೆ ಮಾಡುತ್ತೆನೆ ಮೂರ್ತಿ ಧ್ವ0ಸಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ರಾಯಣ್ಣ ಯವುದೇ ಜಾತಿ , ಧರ್ಮಕ್ಕೆ ಸೇರಿದವರಲ್ಲ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ… […]

ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ…ಕೃಷ್ಣಮೂರ್ತಿ ಎಂಬುವವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ  ಆರೋಪದ ಮೇಲೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ…ಸೈಟ್ ಗಲಾಟೆ ವಿಚಾರಕ್ಕೆ ಕೃಷ್ಣ ಮೂರ್ತಿಗೆ  ಕುಳ್ಳ ದೇವರಾಜ್ ಧಮ್ಕಿ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ ಈ ಹಿಂದೆಯಷ್ಟೇ ಶಾಸಕ ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ್ದ ಬಂಧಿತನಾಗಿದ್ದ ದೇವರಾಜ್‌ ಐಪಿಸಿ ಸೆಕ್ಷನ್‌ 506,34,504 ಹಾಗೂ ಎಸ್‌ಸಿ, ಎಸ್ ಟಿ ಕಾಯ್ದೆಯಡಿ […]

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಿಲುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ವೀರ್ ಸಾವರ್ಕರ್ ದಿ ಮ್ಯಾನ್ ಹು ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು,ಶಾಸಕ ಎನ್.ಮಹೇಶ್ ಹಾಗೂ ನಿಲುಮೆ ಪ್ರತಿಷ್ಠಾನದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ತುಮಕೂರು ನಗರದ ಕನ್ನಡ ಭವನದಲ್ಲಿ ಶ್ರೀ ವಾಲ್ಮೀಕಿ ಸನಿವಾಸ ಪ್ರೌಢಶಾಲೆ ಹಳೇ ವಿಧ್ಯಾರ್ಥಿಗಳ ವತಿಯಿಂದ ಗುರುವಂದನೆ, ನುಡಿನಮನ ಮತ್ತು ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ ಆಯೋಜನೆ ಕಾರ್ಯಕ್ರಮವನ್ನು ನಾಡೋಜ ಸಾಹಿತಿ ಚಲನಚಿತ್ರ ನಿರ್ದೇಶಕ ಪ್ರೊ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಿದ ಅವರು ನೂರಾರು ಜನ ಸಾವಿರಾರು ಜನ ಬಲಿದಾನವನ್ನು ಮಾಡಿ ಈ ದೇಶವನ್ನು ಕಟ್ಟಿರುವಂತ ಉದಾಹರಣೆ ನಮ್ಮ ಕಣ್ಮುಂದೆ ಇದೆ ಹಾಗೆ ಈ ದೇಶವನ್ನು ಕಟ್ಟಿದವರು ಒಂದೆಡೆ ಯಾದರೆ ಮನಸ್ಸನ್ನು ಕಟ್ಟಿದವರು […]

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಭೂಕಬಳಿಕೆ ವಿಚಾರವಾಗಿ ಇಂದು ಕೆಆರ್ ಪುರ ಬಿಬಿಎಂಪಿ ಕಚೇರಿಯ ಎದುರು ಕೆಆರ್ ಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು…ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆಗೆ ಒತ್ತಾಯಿಸಿದರು.. ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು, ಭೂಕಬಳಿಕೆ ಮಾಡಿದ ಬೈರತಿ ಬಸವರಾಜ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು… ಇತ್ತ ಭೂ ಮಾಲೀಕ ಅಣ್ಣಯ್ಯಪ್ಪ ಅವರ […]

ಭಗವಂತ ಕೃಷ್ಣನ ಜನ್ಮಸ್ಥಳವಾದ ಮಥುರಾ ಕ್ಷೇತ್ರವನ್ನು ನಾನು ಸಂಸತ್‌ ನಲ್ಲಿ ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಅಲ್ಲಿ ಭವ್ಯವಾದ ಮಂದಿರವೊಂದು ಇರಬೇಕೆಂದು ನಾನು ಆಶಿಸುತ್ತೇನೆ. ಮಥುರಾದಲ್ಲಿ ಈಗಾಗಲೇ ದೇವಾಲಯವಿದೆ. ಅದನ್ನು ಕಾಶಿ ವಿಶ್ವನಾಥ ಕಾರಿಡಾರ್ ರೀತಿ ಅಭಿವೃದ್ಧಿಪಡಿಸಬೇಕು,’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.ರಾಮ ಜನ್ಮಭೂಮಿ ಮತ್ತು ಕಾಶಿಯ ಮರುಸ್ಥಾಪನೆಯ ನಂತರ, ಸ್ವಾಭಾವಿಕವಾಗಿ ಮಥುರಾವನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗುತ್ತದೆ, ಎಂದು ಸಂಸದೆ ಭಾನುವಾರ ಇಂದೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದೋರ್‌ಗೆ ಆಗಮಿಸಿದ್ದ ಸಂಸದೆ […]

Advertisement

Wordpress Social Share Plugin powered by Ultimatelysocial