ಚಳಿಗಾಲದಲ್ಲಿ ಬೇಕು ತ್ವಚೆಯ ಆರೈಕೆ

ಚಳಿಗಾಲದಲ್ಲಿ ಬೇಕು ತ್ವಚೆಯ ಆರೈಕೆ

ಇನ್ನೇನು ಚಳಿಗಾಲ ಆರಂಭವಾಗಲಿದೆ. ಈ ಅವಧಿಯಲ್ಲಿ ಮುಖದ ತ್ವಚೆಯ ಅಂದ ಕೆಡುವುದು ಸಾಮಾನ್ಯ. ಇದಕ್ಕೆ ಚಳಿಗಾಲ ಮಾತ್ರ ಕಾರಣವಲ್ಲ. ಈ ಕಾಲದಲ್ಲಿನ ನಮ್ಮ ಆಹಾರಕ್ರಮ, ಜೀವನಶೈಲಿಯಂತಹ ಪ್ರಕ್ರಿಯೆಗಳೂ ಚರ್ಮದ ಆರೋಗ್ಯವನ್ನು ಅವಲಂಬಿಸಿವೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ಸೂಚಿಸಿರುವ ಮಾರ್ಗಗಳನ್ನು ಅನುಸರಿಸುವುದು ಅಗತ್ಯ.

ಈ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಮುಖವನ್ನು ಸ್ವಚ್ಛ ಮಾಡಿಕೊಳ್ಳಿ

ಚಳಿಗಾಲದಲ್ಲಿ ಮುಖದ ಚರ್ಮ ಒಣಗಿ ಸೀಳುತ್ತದೆ. ಆ ಕಾರಣದಿಂದ ನಮ್ಮ ಸೌಂದರ್ಯವು ಕೆಡುತ್ತದೆ. ಈ ಸಮಯದಲ್ಲಿ ಮುಖದ ಮೇಲಿನ ಎಣ್ಣೆ ಅಂಶ, ಕೊಳೆಯನ್ನು ಆಗಾಗ್ಗೆ ಸ್ವಚ್ಛ ಮಾಡುತ್ತಿರಬೇಕು. ಮಾಯಿಶ್ವರೈಸರ್ ಅಂಶ ಇರುವ ಸೋಪ್‌ ಬಳಸಬೇಕು. ಚರ್ಮಕ್ಕೆ ಹಾನಿ ಮಾಡುವ ಸ್ಕ್ರಬ್ ಬಳಸಬಾರದು. ಇದರಿಂದ ತ್ವಚೆಯು ಇನ್ನಷ್ಟು ಕೆಡಬಹುದು. ಎಣ್ಣೆಯಂಶವನ್ನು ಹೋಗಲಾಡಿಸಲು ಸೌಮ್ಯವಾದ ಕ್ಲೆನ್ಸರ್ ಬಳಕೆ ಉತ್ತಮ.

ಎಕ್ಸ್‌ಫೋಲಿಯೇಷನ್‌

ಅಂದದ, ಹೊಳೆಯುವ ತ್ವಚೆ ನಿಮ್ಮದಾಗಬೇಕು ಎಂದರೆ ಎಕ್ಸ್‌ಫೋಲಿಯೇಷನ್‌ ಅಗತ್ಯವಾಗಿದೆ. ಚರ್ಮ ಒಣಗಿದಂತೆ, ಶುಷ್ಕವಾಗಿ ಕಾಣಿಸಲು ಹೊರ ಪದರಗಳ ಮೇಲೆ ಸತ್ತ ಜೀವಕೋಶಗಳ ಶೇಖರಣೆಯಾಗುವುದು ಮುಖ್ಯ ಕಾರಣವಾಗಿದೆ. ಎಕ್ಸ್‌ಫೋಲಿಯೇಷನ್‌ನಿಂದ ಚರ್ಮದ ಮೇಲಿನ ಸತ್ತ ಪದರಗಳನ್ನು(ಡೆಡ್‌ ಲೇಯರ್‌) ತೊಡೆದು ಹಾಕಬಹುದು. ಅಲ್ಲದೇ ಇದರಿಂದ ಚರ್ಮವು ನಯವಾಗಿ ಆರೋಗ್ಯ ಪೂರ್ಣವಾಗಿರುತ್ತದೆ. ವಾರದಲ್ಲಿ ಎರಡು ಬಾರಿ ಎಕ್ಸ್‌ಫೋಲಿಯೇಷನ್‌ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Wed Dec 22 , 2021
BMRC Recruitment 2021: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬಿಎಂಆರ್​ಸಿಯ ಅಧಿಕೃತ ವೆಬ್​ಸೈಟ್ ಆದ english.bmrc.co.in ನಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ […]

Advertisement

Wordpress Social Share Plugin powered by Ultimatelysocial