ಫೆ. 20ರಿಂದ ಜಾತ್ರೆ ಶುರು, 27ರಂದು ರಥೋತ್ಸವ.

ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿ ಪ್ರಖ್ಯಾತವಾದ ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಫೆ.20ರಿಂದ 27ರ ವರೆಗೆ ಶ್ರೀ ಕರಿಬಸವೇಶ್ವರಸ್ವಾಮಿ ಗದ್ದಿಗೆಯ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಜ್ಜಯ್ಯನ ಜಾತ್ರೆಗೆ ಗ್ರಾಮ ಸಂಪೂರ್ಣ ಸಜ್ಜುಗೊಂಡಿದೆ. ಒಂದು ವಾರದವರೆಗೆ ನಡೆಯುವ ಜಾತ್ರೆಗೆ ರಾಜ್ಯದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಉಕ್ಕಡಗಾತ್ರಿಗೆ ಹರಿದು ಬರುತ್ತಿದ್ದಾರೆ. ಜಾತ್ರೆ ಪ್ರಯುಕ್ತ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಇರುಮುಡಿ ಹೊತ್ತ ಮಾಲಾಧಾರಿಗಳು ಭಜನೆ ಮಾಡುತ್ತಾ ಅಜ್ಜಯ್ಯನ ಸನ್ನಿಗೆ ಬಂದು ಹರಕೆ ಸಲ್ಲಿಸುತ್ತಿದ್ದಾರೆ.ಶ್ರೀಕರಿಬಸವೇಶ್ವರ ಗದ್ದಿಗೆ ಟ್ರಸ್ಟ್‌ ಕಮಿಟಿ, ಭಕ್ತರಿಗೆ ತಂಗಲು ತುಂಗಭದ್ರಾ ನಿಲಯ, ಕರಿಬಸವೇಶ್ವರ ಗದ್ದಿಗೆ ಕಲ್ಯಾಣ ಮಂಟಪ, ಕರಿಬಸವೇಶ್ವರ ಪ್ರೌಢಶಾಲೆಯಲ್ಲಿ ಕೋಣೆಗಳ ವ್ಯವಸ್ಥೆ ಕಲ್ಪಿಸಿದೆ. ರೂಮ್‌ ಸಿಗದಿದ್ದವರಿಗೆ ದೇವಾಲಯದ ಆವರಣದಲ್ಲಿತಂಗಿದ್ದಾರೆ. ಕೆಲವರು ಕಲ್ಯಾಣ ಮಂಟಪದ ಆವರಣದಲ್ಲಿಹಾಕಿರುವ ಷಾಮಿಯಾನದ ಕೆಳಗೆ ತಂಗಿದ್ದಾರೆ.25 ಅಡುಗೆ ಭಟ್ಟರು, 26 ಸಫಾಯಿ ಕರ್ಮಚಾರಿಗಳು ನದಿ ಪಾತ್ರ ಹಾಗೂ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾರ್ಯದಲ್ಲಿತೊಡಗಿದ್ದಾರೆ. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪಂಕ್ತಿ ಊಟದಲ್ಲಿನೂಕು ನುಗ್ಗಲು ನಿಯಂತ್ರಿಸಲು ದಾಸೋಹ ಮಂದಿರದ ಪಕ್ಕದಲ್ಲೇ ಬಫೆ ಊಟಕ್ಕೆ ಸಾಲಾಗಿ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಗ್ನಿಶಾಮದ ದಳದ ವಾಹನ ಸ್ಥಳದಲ್ಲಿಮೊಕ್ಕಾಂ ಹೂಡಿದೆ. ಪೊಲೀಸರು ಭದ್ರತೆ ಒದಗಿಸಿದ್ದಾರೆ.ಭಕ್ತರ ಅನುಕೂಲಕ್ಕೆ ದಾವಣಗೆರೆ, ಹರಿಹರ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರುಗಳಿಂದ ಉಕ್ಕಡಗಾತ್ರಿಗೆ ಬರಲು ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ವ್ಯವಸ್ಥೆ, ತುಮ್ಮಿನಕಟ್ಟೆ ರಸ್ತೆ, ನಿಟುವಳ್ಳಿ ರಸ್ತೆ, ಪತ್ತೇಪುರ ಕುಪ್ಪೆಲೂರು ರಸ್ತೆಗಳಲ್ಲಿವಾಹನಗಳ ನಿಲುಗಡೆಗೆ ವ್ಯವಸ್ಥೆ, ನದಿ ತೀರದಲ್ಲಿ ಶೌಚಾಲಯಗಳು, ಮೂತ್ರಾಲಯಗಳನ್ನು ನಿರ್ಮಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಧಿಕ ತೂಕದ ಮಕ್ಕಳಲ್ಲಿ ಹೃದ್ರೋಗ, ಅಸ್ತಮಾ ,ಮಧುಮೇಹ ಸಮಸ್ಯೆ ಹೆಚ್ಚಳ.!

Mon Feb 20 , 2023
  ನೀವು ವಯಸ್ಸಾದಂತೆ, ನಿಮ್ಮ ಮಗುವಿನ ದೇಹದಲ್ಲಿ ಅನೇಕ ದೈಹಿಕ ಬದಲಾವಣೆಗಳಿವೆ. ಇವು ಬಹಳ ಸಾಮಾನ್ಯ. ಆದರೆ ಪೋಷಕರು ಖಂಡಿತವಾಗಿಯೂ ಆ ಬದಲಾವಣೆಗಳನ್ನು ಗಮನಿಸಬೇಕು. ಏಕೆಂದರೆ ಕೆಲವು ಮಕ್ಕಳು ಸಾಕಷ್ಟು ತೂಕ ಹೆಚ್ಚಾಗುತ್ತಿದ್ದಂತೆ ಅವರು ನೋಡೊದಕ್ಕೆ ಗುಂಡುಗುಂಡಾಗಿ ಮುದ್ದಾಗಿ ಕಾಣುತ್ತಿದ್ದರೂ.. ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಮಕ್ಕಳಿಗೆ ನೀಡುವ ಆಹಾರವು ಉತ್ತಮವಾಗಿಲ್ಲದಿದ್ದಾಗ, ಅವರು ಸಾಕಷ್ಟು ತೂಕ ಹೆಚ್ಚಾಗುತ್ತಲೇ ಹೋಗುತ್ತಾರೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ನಡೆಸಿದ […]

Advertisement

Wordpress Social Share Plugin powered by Ultimatelysocial