ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭ:ಚಳಿಗಾಲ ಅಧಿವೇಶನ ಬೆಳಗಾವಿಗೆ ಶೀಫ್ಟ್

ಸಿಎಂ ಬಸವರಾಜ್‌  ಬೊಮ್ಮಾಯಿ ನೇತೃತ್ವದಲ್ಲಿ  ಸಚಿವ ಸಂಪುಟ ಸಭೆ ನಡೆಯಿಯಿತ್ತು.ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಬಹಳಷ್ಟು ಮಹತ್ವದ ವಿಚಾರಗಳು ಚರ್ಚೆ ಆಗಿದೆ.ಮರಳು ನೀತಿ ಸೇರಿದಂತ್ತೆ ಅನೇಕ ಯೊಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯ್ತು. ವಿಧಾನ ಸೌಧದ ಮೂರನೇ ಮಹಡಿ ಸಭಾಂಗಣದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಸಿಎಂ ಬೊಮ್ಮಾಯಿಯ ಸರ್ಕಾರ  ಕೆಲವೊಂದು ಮಹತ್ವದ ಯೋಜನೆಗಳಿಗೆ  ಅನುಮೋದನೆ ನೀಡಿದ್ರು.

ಸತತ ಎರೆಡುವರೆ ಗಂಟೆಗಳ ಕಾಲ ಸಚಿವ ಸಂಪುಟ ಸಭೆ ನಡೆಸಲಾಯ್ತು.ಪದೇ ಪದೇ ಉತ್ತರ ಕರ್ನಾಟಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ ಎಂಬ ಆಪಾದನೆ ಸರ್ಕಾರದ ಮೇಲಿತ್ತು.ಆದ್ರೆ ಈ ಬಾರಿ ಉತ್ತರ ಕರ್ನಾಟಕ್ಕೆ ಸಚಿವ ಸಂಪುಟದಲ್ಲಿ ಮಹತ್ವದ ಸ್ಥಾನ ಮಾನ ನೀಡಿದೆ ಸರ್ಕಾರ. ಈ  ಬಾರಿಯ ಚಳಿಗಾಲದ ಅಧಿವೇಶ ಬೆಂಗಳೂರಿನ ವಿಧಾನಸೌಧದಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ಶೀಫ್ಟ್‌ ಆಗಿದೆ. ಡಿಸೆಂಬರ್ 13 ರಿಂದ 24 ವರೆಗೆ ಚಳಿಗಾಲ ಅಧಿವೇಶನ ಕುಂದಾನಗರಿಯಲ್ಲಿ ನಡೆಸಲು ಸಿಎಂ ಬೊಮ್ಮಾಯಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಆದ್ರೆ ಕೊನೆಯದಾಗಿ ಸಿಎಂ ಸಾಹೇಬ್ರು ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ನೂತನ ಮರಳು ನೀತಿಗೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ :

ಇನ್ನು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೊಷ್ಟಿ ನಡೆಸಿದ ಕಾನೂನ ಮತ್ತು ಸಂಸದಿಯ ವ್ಯಾವಹಾರ ಸಚಿವ ಜೆಸಿ ಮಾಧುಸ್ವಾಮಿ.ಕೆಲವು ಪೆಂಡಿಂಗ್‌ ಉಳಿದ ಯೊಜನೆಗಳಿಗೆ ಇಂದಿನ ಕ್ಯಾಬಿನೆಟನಲ್ಲಿ ಅನುಮೋದನೆ ನೀಡಿದೆ ಎಂದರು.ಅದ್ರಲ್ಲೂ   ನೂತನ ಮರಳು ನೀತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯ್ತು.ಈ ಮರಳು ನೀತಿಯಿಂದ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಅಧಿಕಾರಿ ಮೆಟ್ರಿಕ್ ಟನ್ ಗೆ 300ರೂ.ನಂತೆ ಮಾರಾಟಕ್ಕೆ ಅವಕಾಶ. ನದಿ ಮರಳಿಗೆ 700ರೂ ಫಿಕ್ಸ್ ಮಾಡಲಾಗಿದೆ.ಗ್ರಾ.ಪಂ ನವರಿಗೆ ಮರಳು ಮಾರಾಟಕ್ಕೆ ಅನುಮತಿ ಮಾರಾಟದ 25% ಗ್ರಾ.ಪಂಗೆ ನೀಡಲಾಗುತ್ತದೆ ನದಿ ಪಾತ್ರದ ಮರಳಿಗೆ 700 ರೂ ಫಿಕ್ಸ್ ಒಂದು ಮೆಟ್ರಿಕ್ ಟನ್ ಗೆ 700 ರೂ ಫಿಕ್ಸ್ ಇದನ್ಮ‌ನೋಡಿಕೊಳ್ಳಲು ಅಥಾರಿಟಿ ರಚನೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.ಇನ್ನು ದಕ್ಷಿಣಕನ್ನಡದಲ್ಲಿ ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶವನ್ನು ನೀಡಲಾಗಿದೆ.

ನೇಕಾರ ಸಮುದಾಯಕ್ಕೆ ಸಿಎಂ ಭರ್ಜರಿ ಕೋಡುಗೆ :

 ಈ ಬಾರಿಯ ಸಚಿವ ಸಂಪುಟದಲ್ಲಿ  ನೇಕಾರ ಸಮುದಾಯಕ್ಕೆ ಭರ್ಜರಿ ಗೀಫ್ಟ್‌ ಸಿಕ್ಕಿದೆ. ನೇಕಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಮಾಡಲಾಗಿದೆ.ಬರೊಬ್ಬರಿ 376 ಕೋಟಿ ಹಣ ನೇಕಾರ ಸಮುದಾಯಕ್ಕೆ ಮೀಸಲಿಡಲಾಗಿದ್ದು, ಎಸ್ಪಿ,ಟಿಎಸ್ಪಿ ಹಣವನ್ನ ಇದಕ್ಕೆ ಬಳಸಲಾಗುವುದು ಎಂದು ಇಂದಿನ ಕ್ಯಾಬಿನೇಟ್‌ ನಲ್ಲಿ ಅನುಮೋದನೆ ಸಿಕ್ಕಿದೆ.ಇನ್ನು ಮುಂಬೈ ಕರ್ನಾಟಕದ ಹೆಸರು ಬದಲಾವಣೆಮಾಡಿ  ಕಿತ್ತೂರು ಕರ್ನಾಟಕವೆಂದು ಹೊಸ ನಾಮಕರಣಕ್ಕೆ  ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ  500 ಕೋಟಿಗೆ ಆಡಳಿತಾತ್ಮಕ ಅನುಮೋದನೆಯನ್ನು ಕ್ಯಾಬಿನೇಟ್‌ ನೀಡಿದೆ.ದಕ್ಷಿಣ ಕನ್ನಡದಲ್ಲಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಇನ್ನು ಸಿರಗುಪ್ಪದಲ್ಲಿ ವೇದಾವತಿಗೆ ಬ್ರಿಡ್ಜ್ ನಿರ್ಮಾಣಕ್ಕೆ 30 ಕೋಟಿ ಮತ್ತು  ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ825 ಕೋಟಿ ಹಣವನ್ನು ಸಚಿವ ಸಂಪುಟದಲ್ಲಿ ಗ್ರೀನ್‌ ಸಿಗ್ನಲ್‌ ನೀಡಿದೆ.

ಈ ವರ್ಷ 80 ಲಕ್ಷ ಮನೆಕಟ್ಟುವ ಗುರಿಯಲ್ಲಿ ಸರ್ಕಾರ :

ಇನ್ನು ಅಗರ ಗ್ರಾಮದಲ್ಲಿ ಸ್ವಾನಂದಾಶ್ರಮಕ್ಕೆ ಭೂಮಿ ಮಂಜೂರು ಬಹುಮಹಡಿ ವಸತಿ ಯೋಜನೆಗೆ 69 ಎಕರೆ ಭೂಮಿ  ರಾಜೀವ್ ವಸತಿ ನಿಗಮಕ್ಕೆ ಭೂಮಿ ನೀಡಲು ಸಚಿವ ಸಂಪುಟ ಸಭೆ  ಸಮ್ಮತಿ ನೀಡಿದೆ.ಇನ್ನು  ಬೆಂಗಳೂರಿನಲ್ಲಿ ಭೂಮಿ ನೀಡಲಾದ್ದು  ಈ ವರ್ಷ 80ಲಕ್ಷ ಮನೆಕಟ್ಟುವ ಗುರಿಯಿದೆ ಎಂದು ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ..

ಪುನೀತ್‌ ಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ಕ್ಯಾಬಿನೇಟನಲ್ಲಿ ಸಿಎಂ ಮೌನ :

ದಿವಂಗತ ನಟ ಪುನೀತ್‌ ರಾಜಕುಮಾರ ಅವರಿಗೆ ಮರಣೊತ್ತರ ಪದ್ಮಶ್ರೀ ಪ್ರಶಸ್ತಿ ಕೋಡಬೇಕು ಎಂಬುವುದು ಎಲ್ಲಾ ಕನ್ನಡಿಗರ ಅಭಿಪ್ರಾಯ.ಅಷ್ಟೆ ಅಲ್ಲ ಕನ್ನಡ ಚಿತ್ರರಂಗ ಕೂಡ ಅಪ್ಪುಗೆ ಪದ್ಮಶ್ರೀ ನೀಡಲೇ ಬೇಕು ಎಂದು ಕೂಗುತ್ತಿದೆ.ಇನ್ನು ಆಡಳಿತ ಮತ್ತು ವಿಪಕ್ಷ ನಾಯಕರು ಕೂಡ ಇದಕ್ಕೆ ಸಹಮತಿ ನೀಡಿದ್ದಾರೆ.ಪುನೀತ್‌ ರಾಜಕುಮಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೋಡ್ಲೇಬೇಕು ಎಂದು.ಪದ್ಮಶ್ರೀ ಪ್ರಶಸ್ತಿ ಕೋಡುವುದು ಕೇಂದ್ರ ಸರ್ಕಾರ. ಆದ್ರೆ ಅದಕ್ಕೆ ರಾಜ್ಯ ಸರ್ಕಾರ ಸೇಂಟ್ರಲ್‌ ಗೊರ್ಮೇಂಟ್‌ ಗೆ ರೆಫರ್‌ ಮಾಡಬೇಕು.ಸಚಿವ ಸಂಪುಟ ಸಭೆಯಲ್ಲಿ  ಪುನಿತ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ವಿಚಾರ ಚರ್ಚೆ ಆಗುತ್ತೆ ಅನ್ನೋದು ಹೇಳಲಾಗುತ್ತಿತ್ತು.ಆದ್ರೆ ಇದಕ್ಕೆ ಸರ್ಕಾರದ ಉತ್ತರವೇ ಬೇರೆಯಾಗಿದೆ.

ಸರ್ಕಾರಕ್ಕೆ ತೀವ್ರ ತಲೆ ನೋವಾಯ್ತು ಬಿಟ್‌ ಕಾಯಿನ್‌ ಪ್ರಕರಣ :

ರಾಜ್ಯ ಸರ್ಕಾರಕ್ಕೆ ತೀವ್ರ ತಲೆ ನೋವಾಗಿರುವ ವಿಚಾರ ಅಂದ್ರೆ ಅದು ಬಿಟ್‌ ಪ್ರಕರಣ.ಆಡಳಿತ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಬಿಟ್‌ ಕಾಯಿನ್‌ ಪ್ರಕರಣದಲ್ಲಿದ್ದಾರೆ ಎಂಬ ಪ್ರತಿಪಕ್ಷದವರ ಆರೋಪಕ್ಕೆ ಸರ್ಕಾರ ಕಂಗಾಲಾಗಿದೆ.ಇಗಾಗ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಬಿಟ್‌ ಕಾಯಿನ್‌ ಪ್ರಕರಣವನ್ನು ಇಡಿಗೆ ನೀಡಿದೇವೆ ಎಂದು ಹೇಳಿದ್ದಾರೆ.ಆದ್ರೆ ಇದಕ್ಕೆ ಸುಮ್ಮನಾಗದ ಕಾಂಗ್ರೆಸ್‌ ನಾಯಕರು ಸಿಎಂ ಸಾಹೇಬರ ಬಳಿ ದಾಖಲೆ ಕೇಳುತ್ತಿದ್ದಾರೆ.ನೀವು ಬಿಟ್‌ ಕಾಯಿನ್‌ ಪ್ರಕರಣ ಇಡಿ ಅಥವಾ ಸಿಬಿಐಗೆ ನೀಡಿರುವ ಬಗ್ಗೆ ನಮ್ಗೆ ದಾಖಲೆ ನೀಡಿ ಅಂತಿದ್ದಾರೆ.ಅದಕ್ಕೆ ಸಿಎಂ ಬೊಮ್ಮಾಯಿ ಕೂಡ ಕಂಗಾಲಾಗಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಬಿಟ್‌ ಕಾಯಿನ್‌ ದಂಧೆ ಬಗ್ಗೆ ಚರ್ಚೆ ನಡೆದಿದ್ರು,ಚರ್ಚೆ ನಡೆದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಬಿಟ್‌ ಕಾಯಿನ್‌ ಬಗ್ಗೆ ಕಾನೂನ ಸಚಿವರ ಉತ್ತರವೇ ಬೇರೆ ಆಗಿತ್ತು. ಬಿಟ್ ಕಾಯಿನ್ ದಂಧೆ ಯ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಇಡಿಗೆ ರೆಫರ್ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ  ಯಾವ ಡೇಟ್ ಕೊಟ್ಟಿದ್ದಾರೆ ಅನ್ನೋದು  ಸಿಎಂ ಅವರನ್ನೇ ಕೇಳಿ.ನಾನು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿಕೆ  ನೋಡಿದ್ದೇನೆ ಆದ್ರೆ ಬಿಟ್‌ ಕಾಯಿನ್‌ ಪ್ರಕರಣದ ಟೈಮ್‌ ನಲ್ಲಿ ನಾನು  ಕಾನೂನು ಸಚಿವನೂ ಆಗಿರಲಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತ್ತೆ ಸಚಿವರು ಉತ್ತರ ನೀಡಿದ್ರು.

ಬಿಟ್‌ ಕಾಯಿನ್‌ ಕೇಸ್‌ ನಲ್ಲಿ ಈಶ್ವರಪ್ಪ ಅಂದ್ರು ನೋ ಕಮೇಂಟ್‌ :

ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳಿದ್ದಾರೆ ಅಂತಾ ವಿಪಕ್ಷಗಳ ಆರೋಪ ವಿಚಾರಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.ಈ ಬಗ್ಗೆ ನಾನೇನು ಹೇಳೋಕೆ ಹೋಗಲ್ಲ.ಇದರಲ್ಲಿ ಕಾಂಗ್ರೇಸ್ ನವರು ಇದ್ದಾರಾ..? ಜೆಡಿಎಸ್ ನವರು ಇದ್ದಾರಾ..?ಯಾರಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ.ಡ್ರಗ್ಸ್, ಬಿಟ್ ಕಾಯಿನ್ ಬಗ್ಗೆ ನನಗೇ ಯಾರಿದ್ದಾರೆ ಅಂತಾ ಗೊತ್ತಿಲ್ಲ.ಅದಕ್ಕೆ ನಾನೇನು ಹೇಳೋಕೆ ಹೋಗಲ್ಲ.ಸಿಎಂ ಮಗನಿದ್ದಾರಾ? ಸಚಿವರ ಮಗನಿದ್ದಾರಾ!? ಇದೆಲ್ಲ ಸಾರ್ವಜನಿಕ ಚರ್ಚೆಯಾದ್ರೆ ನಾನ್ಯಾಕೆ ಉತ್ತರಿಸಲಿ.ತನಿಖೆಯಾಗ್ತಿದೆ ತನಿಖೆಯಾಗಲಿ ಯಾರಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಹೇಳುವ ಮೂಲಕ ವಿಪಕ್ಷಗಳ ಮೇಲೆ ಕಿಡಿಕಾರಿದ್ರು.ಒಟ್ಟಾರೆಯಾಗಿ ಸಿಎಂ ಸಂಪುಟ ಸಭೆಯಲ್ಲಿ ಹಲವು ಮಹತ್ತರ ಯೋಜನೆಗಳ ಬಗ್ಗೆ ಚರ್ಚೆ ನಡೆದದ್ದು,ಜೊತೆಗೆ ಹಲವು ಯೋಜನೆಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆಯನ್ನು ನೀಡಲಾಗಿದೆ…..

Please follow and like us:

Leave a Reply

Your email address will not be published. Required fields are marked *

Next Post

ಸದ್ದಿಲ್ಲದೆ ನಡೆಯುತ್ತಿದೆ ಬಿಬಿಎಂಪಿ ಚುನಾವಣೆ ತಯಾರಿ

Tue Nov 9 , 2021
ಬಿಜೆಪಿಯಿಂದ ಪಾಲಿಕೆ ಸದ್ದಿಲ್ಲದೆ ಬಿಬಿಎಂಪಿ ಚುನಾವಣೆಯ ಯತಾರಿ ನಡೆಯುತ್ತಿದೆ.ಬಿಬಿಎಂಪಿ ಚುನಾವಣೆ ಹಿನ್ನೆಲೆ ಕೇಸರಿ ಪಡೆಯು ಶಾಸಕರ ಅಭಿಪ್ರಾಯವನ್ನು ಪಡೆತಯಲು ಮುಂದಾಗಿದೆ..ಇಂದು ಮಧ್ಯಾಹ್ನ ಜಗನ್ನಾಥ ಭವನದಲ್ಲಿ ನಡೆಯಲಿರೋ ಸಭೆಯಲ್ಲಿ ಚುನಾವಣೆ ಬೇಕೋ, ಬೇಡವೋ ಅನ್ನೋ ಅಭಿಪ್ರಾಯ  ಶಾಸಕರಿಂದ ಸಂಗ್ರಹಿಸಿಲಿದ್ದಾರೆ.ಜೊತೆಗೆ ಯಾವ ರೀತಿ ಚುನಾವಣೆ ತಯಾರಿ ಮಾಡಿಕೊಳ್ಳಬೇಕು ಅಂತ ಪಕ್ಷದ ಹಿರಿಯರು ಶಾಸಕರಿಂದ ಅಭಿಪ್ರಯಾವನ್ನು ಪಡೆಯಲಿದ್ದಾರೆ… ಈಗಾಗಲೇ ಒಂದುವರೆ ವರ್ಷಗಳಿಂದ ಚುನಾವಣೆ ಬಿಬಿಎಂಪಿ ಚುನಾವಣೆ ನಡೆದಿಲ್ಲ  198 ವಾರ್ಡ್‌ಗಳಿಂದ 243ವಾರ್ಡ್ ಮರು ವಿಂಗಡಣೆ […]

Advertisement

Wordpress Social Share Plugin powered by Ultimatelysocial