ನಂಜನಗೂಡು ಕಾಂಗ್ರೆಸ್ ನಲ್ಲಿ ಯಾವುದೇ ಬಣ್ಣ ಇಲ್ಲ.

ನಂಜನಗೂಡು ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ ಇರುವುದೊಂದೆ ಕಾಂಗ್ರೆಸ್ ಬಣ ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ಟಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಸುನೀಲ್ ಬೋಸ್ ಹೇಳಿದ್ದಾರೆ.
ಇಂದು ನಂಜನಗೂಡಿನಲ್ಲಿ ಕೈ ಕಾರ್ಯಕರ್ತರು ಹಾಗೂ ಹೆಚ್ ಸಿ ಮಹದೇವಪ್ಪ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು
ಜ.26 ರಂದು ಮೈಸೂರಿನಲ್ಲಿ ಆಯೋಜಿಸಿರುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸುವ ಉದ್ದೇಶದಿಂದ ಈ ಪೂರ್ವಭಾವಿ ಸಭೆ ಎಂದರು .
ನಮ್ಮ ತಂದೆಯವರು ಕೋಲಾರಕ್ಕೆ ತೆರಳಿರುವ ಹಿನ್ನೆಲೆ ನನ್ನನ್ನು ಸಭೆಗೆ ಹೋಗುವಂತೆ ಹೇಳಿದ್ದರು ಅದರಂತೆ ನಾನು ಸಭೆಗೆ ಬಂದಿದ್ದೇನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಜಿಲ್ಲೆಯವರೇ ಆದ ಕಾರಣ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು
ನಾನು ಪಕ್ಷದಿಂದ ನರಸೀಪುರಕ್ಕೆ ಅರ್ಜಿ ಸಲ್ಲಿಸಿದ್ದೇನೆ, ನಂಜನಗೂಡಿನಲ್ಲಿ ನಮ್ಮ ತಂದೆ ಮಹದೇವಪ್ಪ ಮಾಜಿ ಸಂಸದರಾದ ಧ್ರುವನಾರಾಯಣ್ ಮಾಜಿ ಶಾಸಕರಾದ ಕೇಶವಮೂರ್ತಿ ಸೇರಿದಂತೆ ಮೂರು ಜನ ಅರ್ಜಿ ಸಲ್ಲಿಸಿದ್ದು,ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಒಗ್ಗಟ್ಟಾಗಿ ಕೆಲಸ ಮಾಡಿ ಈ ಬಾರಿ ಕಮಲ ಕೆಳಗಿಳಿಸಿ ಕೈ ಏರಿಸುವದಾಗಿ ತಿಳಿಸಿದರು
ನರಸೀಪುರದಲ್ಲಿ ಇತ್ತೀಚೆಗೆ ಚಿರತೆ ದಾಳಿಯಿಂದಾಗಿ ಮೂರು ಮಂದಿ ಮೃತಪಟ್ಟಿರುವುದು ನಿಜಕ್ಕೂ ವಿಷಾದನೀಯ ಇದಕ್ಕೆ ಜಿಲ್ಲಾಡಳಿತದ ವಿಫಲವೇ ಕಾರಣ ಎಂದರು ಇನ್ನು ರಾಜಕೀಯವಾಗಿ ನಮ್ಮ ತಂದೆಯವರು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿರುವುದೇ ಶ್ರೀ ರಕ್ಷೆಯಾಗಿದ್ದು ಈ ಬಾರಿ ನರಸೀಪುರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.
ಇದೇ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಅಜ್ಗರ್ ಹಾಗೂ ಉಪಾಧ್ಯಕ್ಷರಾಗಿ ನೇಮಕಗೊಂಡ ನಾಸಿರ್ ಅಹಮದ್ ಅವರನ್ನು ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ಮುಖಂಡರಾದ ಬುಲೆಟ್ ಮಹದೇವಪ್ಪ ಇಂಧನ್ ಬಾಬು ಮೂಗ ಶೆಟ್ಟಿ, ಬಸವೇಗೌಡ, ಕೆ ಬಿ ಸ್ವಾಮಿ, ಶಿವಮಲ್ಲಪ್ಪ, ಚೋಳರಾಜು, ಕೆಂಪಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮ್ ಚರಣ್ ಪತ್ನಿಗೆ ಆಘಾತದ ಸುದ್ದಿ.

Mon Jan 23 , 2023
      ಅಜ್ಜಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಅದರಲ್ಲೂ ಹೆಣ್ಣು ಮಕ್ಕಳಿಗೆ ಸ್ವಲ್ಪ ಹೆಚ್ಚಾಗಿ ಇಷ್ಟವಿರುತ್ತದೆ. ಮೆಗಾ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅಜ್ಜಿ ತೀರಿಕೊಂಡರು ನೋವಿನಲ್ಲಿದ್ದಾರೆ. ಅಜ್ಜಿ ಸಾವಿನ ಸುದ್ದಿ ಕೇಳಿ ಅಘಾತಗೊಂಡಿರುವ ಉಪಾಸನಾ, ಅಜ್ಜಿ ನೆನೆದು ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾವು ಅಜ್ಜಿಗೆ ಕೊನೆಯವರೆಗೂ ಕೃತಜ್ಞರಾಗಿರಬೇಕು ಎಂದ್ರು. ಹೆಮ್ಮೆ ಪಡುವಂತೆ ಗೌರವ ಮತ್ತು ಪ್ರೀತಿಯಿಂದ ಜೀವನವನ್ನು ನಡೆಸಿದ್ದಾರೆ. […]

Advertisement

Wordpress Social Share Plugin powered by Ultimatelysocial