ಬಂದೆಬಿಡ್ತು ಡೆಲ್ಟಾದ ಎವೈ.4.2 : ಮನುಷ್ಯ ಉಳಿಯುವುದಾದರೂ ಹೇಗೆ…?

ಕೋವಿಡ್ ಇಷ್ಟರವರೆಗೆ ಬಾಧಿಸಿದ್ದು ಸಾಲದೆಂಬಂತೆ ರೂಪಾಂತರಿಯಾಗಿ ಮತ್ತೆ ಕಾಡುವ ಸುಳಿವು ನೀಡಿದೆ.

ನಾವೆಲ್ ಕೊರೋನಾ ವೈರಸ್‌ ಕುರಿತಂತೆ ಮಾಧ್ಯಮಗಳಲ್ಲಿ ಭಯ ಮೂಡಿಸುವ ವರದಿಗಳು ದಿನೇ ದಿನೇ ಕಡಿಮೆಯಾಗುತ್ತಿರುವಂತೆಯೇ ಇದೀಗ ಯೂರೋಪ್ ಮತ್ತು ಏಷ್ಯಾದ ಅನೇಕ ದೇಶಗಳಲ್ಲಿ ಕೋವಿಡ್‌ನ ಹೊಸ ಅಲೆಯ ಅಬ್ಬರ ಶುರುವಾಗಿದೆ.

ಎವೈ.4.2 ಅಥವಾ ‘ಡೆಲ್ಟಾ ಪ್ಲಸ್’ ಎಂದು ಕರೆಯಲಾಗುವ ಈ ವೈರಾಣು ಕೋವಿಡ್‌ನ ಹೊಸ ಅವತಾರಿಯಾಗಿದೆ.

ಡೆಲ್ಟಾ ವೈರಾಣು ಇನ್ನೂ ಸಹ ಪ್ರಭಾವಿಯಾಗಿರುವಾಗಲೇ ಇದರ ಉಪ ವೈರಾಣು ಎವೈ.4.2 ಡೆಲ್ಟಾ ಅದಾಗಲೇ ವ್ಯಾಪಕವಾಗಿ ಹಬ್ಬುತ್ತಿದೆ. ಇದರಲ್ಲಿ ಸ್ಪೈಕ್ ಮ್ಯಟೇಷನ್‌ಗಳಾದ ಎ222ವಿ ಹಾಗೂ ವೈ145ಎಚ್‌ಗಳು ಇದ್ದು, ವೈರಾಣುವನ್ನು ಜೀವಂತವಿಡುತ್ತವೆ.

ಎವೈ.4.2 ವೈರಾಣು ಇನ್ನಷ್ಟು ಹೆಚ್ಚಿನ ಅಪಾಯಕಾರಿಯಾಗಿದ್ದು, ಇದು ಡೆಲ್ಟಾಗಿಂತಲೂ ಹೆಚ್ಚಿನ ಮಟ್ಟದಲ್ಲಿ ಪಸರುತ್ತದೆಯೇ ಎಂದು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಈ ವೈರಾಣು ಆಲ್ಫಾ ಹಾಗೂ ಡೆಲ್ಟಾವತಾರಿಗಳಷ್ಟು ದೊಡ್ಡ ಬೆದರಿಕೆಯನ್ನಂತೂ ಹುಟ್ಟಿ ಹಾಕಿಲ್ಲ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾರಣಾಸಿಯಲ್ಲಿ ದುರಂತ : ಯುವತಿ ಮೇಲೆ 9 ತಿಂಗಳಿನಿಂದ ಅತ್ಯಾಚಾರ

Sun Oct 24 , 2021
ಬಲಿಯಾ,ಅ.23- ಕಾಮುಕನೊಬ್ಬ ಯುವತಿಯನ್ನು ಅಪಹರಿಸಿ ಕಳೆದ ಒಂಬತ್ತು ತಿಂಗಳಿನಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಬಲಿಯಾ ಜಿಲ್ಲೆಯ ನರಹಿ ಗ್ರಾಮದ 17 ವರ್ಷದ ಯುವತಿಯನ್ನು ಅಪಹರಿಸಿ ವಾರಣಾಸಿಗೆ ಕರೆತಂದ ಕಾಮುಕ 9 ತಿಂಗಳಿನಿಂದ ನಿರಂತರ ಆತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜ.16 ರಂದು ಯುವತಿಯನ್ನು ಅಪಹರಿಸಿ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪಿಯನ್ನು ಬಂಸಿ ಸಂತ್ರಸ್ಥೆಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ನರಾಹಿ ಪೊಲೀಸ್ ಠಾಣೆಯ ಅಕಾರಿ […]

Advertisement

Wordpress Social Share Plugin powered by Ultimatelysocial