ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 – ಪೈಸೆ ಡಿಸೇಲ್‌ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆ

ಮೊದಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.ಇಂದೂ ಕೂಡಾ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 ಪೈಸೆ ಹಾಗೂ ಡಿಸೇಲ್‌ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆಯಾಗಿದೆ.ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.85 ರೂಪಾಯಿಗಳಾಗಿದ್ದರೆ, ಲೀಟರ್‌ ಡಿಸೇಲ್‌ ಬೆಲೆ 78.03 ರೂಪಾಯಿಗಳಾಗಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 94.36 ರೂಪಾಯಿಗಳಾಗಿದ್ದು, ಲೀಟರ್‌ ಡಿಸೇಲ್‌ ಬೆಲೆ 84.94 ರೂಪಾಯಿಗಳಾಗಿದೆ.

ಇದನ್ನೂ ಓದಿ:ಎರಡು ಟ್ರ್ಯಾಕ್ಟರ್ ಹಾಗೂ ರಾಗಿ ಹುಲ್ಲು ಬೆಂಕಿಗೆ ಆಹುತಿ

Please follow and like us:

Leave a Reply

Your email address will not be published. Required fields are marked *

Next Post

ಕಾರು ಪಲ್ಟಿಹೊಡೆದು ಅಪಘಾತ

Thu Feb 11 , 2021
ಕಾರು ಪಲ್ಟಿಹೊಡೆದು ಅಪಘಾತ ಸಂಭವಿಸಿದ ಘಟನೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ದಿಂದಾ ಹೈದ್ರಾಬಾದ್ ಗೆ ತೆರಳುತ್ತಿದ್ದ ವೇಳೆ NH9 ಬಳಿ ನಡೆದಿದೆ. ಕಾರು ಚಾಲಕ ಎದುರು ಬರುತ್ತಿರುವ ಬಸ್ ನೀಂದ ಆಗುವ ಅಪಘಾತವನ್ನು ತಪ್ಪಿಸುವ ಸಂಧರ್ಬದಲ್ಲಿ ಕಾರನ್ನು ಬೇರೆಡೆಗೆ ತಿರಿಗಿಸುವಾಗ ಸಂಪೂರ್ಣವಾಗಿ ಪಲ್ಟಿ ಯಾಗಿದೆ. ಚಾಲಕನಿಗೆ ಎದೆಯ ಮೇಲೆ ಸ್ವಲ್ಪ ಗಾಯವಾಗಿದ್ದು ಇನ್ನುಳಿದ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದನ್ನೂ ಓದಿ:ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 – […]

Advertisement

Wordpress Social Share Plugin powered by Ultimatelysocial