heath tips;ಕಿಡ್ನಿ ಬೀನ್ಸ್‌ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು;

ಕಿಡ್ನಿ ಬೀನ್ಸ್‌ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು, ಏಕೆ ಗೊತ್ತಾ?

ಮಧುಮೇಹ ಬಂದರೆ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂಬ ಗೊಂದಲ ಅನೇಕರಲ್ಲಿದೆ. ಮಧುಮೇಹ ಬಂದ ಮೇಲೆ ರುಚಿ ರುಚಿಯಾದ ಆಹಾರಗಳನ್ನು ತಿನ್ನಲು ಸಾಧ್ಯವಿಲ್ಲ, ಬರೀ ಪಥ್ಯದಂಥ ಆಹಾರಗಳನ್ನು ಸೇವಿಸಬೇಕು ಎಂದು ಯೋಚಿಸುತ್ತಾರೆ, ಹಾಗೇನೂ ಇಲ್ಲ ಮಧುಮೇಹ ಬಂದ ಮೇಲೂ ನೀವೂ ರುಚಿಯಾದ ಆಹಾರಗಳನ್ನು ಸವಿಯಬಹುದು, ಆದರೆ ನಿಮ್ಮ ಆಹಾರಕ್ರಮದಲ್ಲಿ ಸಕ್ಕರೆಯಂಶ ಹೆಚ್ಚು ಮಾಡದಂಥ ಆಹಾರಗಳನ್ನು ಸೇವಿಸಬೇಕು.

ಅಂಥದ್ದೊಂದು ಆಹಾರದ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ, ಅದೇ ರಾಜ್ಮಾ…

ರಾಜ್ಮಾದಿಂದ ತಯಾರಿಸಿದ ಗ್ರೇವಿಯನ್ನು ಚಪಾತಿ ಅಥವಾ ರಾಗಿ ರೊಟ್ಟಿ, ಜೋಳದ ರೊಟ್ಟಿ ಇವುಗಳ ಜೊತೆ ತಿನ್ನಲು ಎಷ್ಟು ರುಚಿಯಾಗಿರುತ್ತೆ ಅಲ್ವಾ? ಕಿಡ್ನಿ ಬೀನ್ಸ್ ಅಥವಾ ರಾಜ್ಮಾವನ್ನು ನಿಮ್ಮ ಆಹಾರಕ್ರಮದಲ್ಲಿ ಧೈರ್ಯವಾಗಿ ಸೇರಿಸಬಹುದು, ಏಕೆಂದರೆ ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ತುಂಬಾನೇ ಸಹಕಾರಿ.

ಹೌದು ಮಧುಮೇಹಿಗಳು ತಮ್ಮಆಹಾರಕ್ರಮದಲ್ಲಿ ಸೇರಿಸಬಹುದಾದ ಅತ್ಯುತ್ತಮವಾದ ಆಹಾರಗಳಲ್ಲಿ ಕಿಡ್ನಿ ಬೀನ್ಸ್ ಕೂಡ ಒಂದಾಗಿದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್‌ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿಸುವುದಿಲ್ಲ.

ಕಿಡ್ನಿ ಬೀನ್ಸ್‌ ಈ ಕಾರಣಕ್ಕೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು:

1. ಅಧಿಕ ನಾರಿನಂಶ
ಕಿಡ್ನಿ ಬೀನ್ಸ್‌ನಲ್ಲಿ ನಾರಿನಂಶ ಅಧಿಕವಿದೆ, ಇದರಲ್ಲಿ ಕೊಬ್ಬಿನಂಶ ಹಾಗೂ ಕೊಲೆಸ್ಟ್ರಾಲ್‌ ಕಡಿಮೆ ಇದೆ. 100 ಗ್ರಾಂ ಕಿಡ್ನಿ ಬೀನ್ಸ್‌ನಲ್ಲಿ 6.4 ಗ್ರಾಂ ನಾರಿನಂಶವಿದೆ. ಇದು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ. ನಾರಿನಂಶ ಜೀರ್ಣಕ್ರಿಯೆಗೂ ಒಳ್ಳೆಯದು.

2. ಅಧಿಕ ಪ್ರೊಟೀನ್ ಇದೆ

ಅಮೆರಿಕನ್‌ ಡಯಾಬಿಟಿಸ್‌ ಅಸೋಸಿಯೇಷನ್‌ ಮಧುಮೇಹಿಗಳು ಪ್ರೊಟೀನ್ ಅಧಿಕವಿರುವ ಆಹಾರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತದೆ. ಒಂದು ಕಪ್ ಕಿಡ್ನಿ ಬೀನ್ಸ್ ತಿಂದರೆ 14 ಗ್ರಾಣನಷ್ಟು ಪ್ರೊಟೀನ್‌ ದೊರೆಯುವುದು. ಅಲ್ಲದೆ ರಾಜ್ಮಾ ಅಥವಾ ಕಿಡ್ನಿ ಬೀನ್ಸ್ ತಿಂದರೆ ಬೇಗನೆ ಹಸಿವು ಉಂಟಾಗಲ್ಲ.

3. ಪೊಟಾಷ್ಯಿಯಂ ಅಧಿಕವಿದೆ

ಮಧುಮೇಹಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಆದರೆ ರಾಜ್ಮಾದಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತೆ, ಹೃದಯ ಆರೋಗ್ಯವನ್ನು ವೃದ್ಧಿಸುತ್ತೆ, ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುತ್ತೆ. ಅಲ್ಲದೆ ಸೋಡಿಯಂನಿಂದ ಉಂಟಾಗುವ ಪರಿಣಾಮವನ್ನು ತಗ್ಗಿಸಲು ಇದು ಸಹಕಾರಿ.

4. ಕಾರ್ಬೋಹೈಡ್ರೇಟ್ಸ್

ಕಿಡ್ನಿ ಬೀನ್ಸ್‌ನಲ್ಲಿ ಕಾರ್ಬೋಹೈಡ್ರೇಟ್ಸ್‌ ಇದ್ದರೂ ಅದು ನಿಧಾನಕ್ಕೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದಿಲ್ಲ. ಕಾರ್ಬ್ಸ್‌, ಪ್ರೊಟೀನ್‌, ನಾರಿನಂಶ ಇವೆಲ್ಲಾ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಅಲ್ಲದೆ ಬೇಗನೆ ಹಸಿವು ಉಂಟಾಗುವುದಿಲ್ಲ.

5. ಗ್ಲೈಸೆಮಿಕ್‌ ಇಂಡೆಕ್ಸ್ ಕಡಿಮೆ ಇದೆ

ಮಧುಮೇಹಿಗಳು ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವ ಆಹಾರಗಳನ್ನು ಸೇವಿಸಬೇಕು. ಕಿಡ್ನಿ ಬೀನ್ಸ್‌ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು, ನಾರಿನಂಶ ಅಧಿಕವಿರುವುದರಿಂದ ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಸೇರಿಸಬಹುದಾದ ರುಚಿಕರವಾದ ಆಹಾರ ಇದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಮಾರ್ಟಿನ್' ಅಡ್ಡಾದಲ್ಲಿ ನಡೀತಿರೋದೇನು;

Fri Jan 21 , 2022
ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ಕನ್ನಡದ ಬಹುನಿರೀಕ್ಷೆ ಚಿತ್ರಗಳಲ್ಲಿ ಒಂದು. ಪೊಗರು ನಂತರ ಧ್ರುವ ಸರ್ಜಾ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾರ್ಟಿನ್ ಲುಕ್‌ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರದ ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಲುಕ್‌ ಅನಾವರಣ ಆಗಿದೆ. ಧ್ರುವ ಸರ್ಜಾ ಅವರ ಸಿನಿಮಾಗಳು ರಿಲೀಸ್ ನಡುವೆ ಒಂದರಿಂದ ಮತ್ತೊಂದಕ್ಕೆ ಹೆಚ್ಚು ಗ್ಯಾಪ್‌ ಇರುತ್ತದೆ. ಸಿನಿಮಾದಿಂದ ಸಿನಿಮಾಗೆ ಧ್ರುವ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರು. ಆದರೆ ಇನ್ನು […]

Advertisement

Wordpress Social Share Plugin powered by Ultimatelysocial