ಈ ಒಂದು ವಿಷಯದಲ್ಲಿ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದ ತೆಲಂಗಾಣ!

ಹೈದರಾಬಾದ್​​: ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ತೆಲಂಗಾಣ ರಾಜ್ಯವೂ ಕುಖ್ಯಾತಿ ಪಾತ್ರವಾಗಿದೆ. ಮದ್ಯಪಾನ ಮತ್ತು ವೇಗದ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದಾಗಿ ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತಿವೆ. ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡರು ಕೂಡ ಅಪಘಾತಗಳ ಸಂಖ್ಯೆ ಇಳಿಯುತ್ತಿಲ್ಲ.

2021ರಲ್ಲಿ ತೆಲಂಗಾಣದಾದ್ಯಂತ 6690 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಸುಪ್ರಿಂಕೋರ್ಟ್​ ಮಾಜಿ ನ್ಯಾಯಮೂರ್ತಿ ಹಾಗೂ ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್​ ಮನೋಹರ್​ ಸಪ್ರೆ ಅವರು ಹೇಳಿದ್ದಾರೆ.

ಶನಿವಾರ ಶಮ್ಶಬಾದ್​ನ ಹೋಟೆಲ್​ನಲ್ಲಿ ನಡೆದ ರಸ್ತೆ ಅಪಘಾತಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮನೋಹರ್​ ಸಪ್ರೆ ಅವರು ಮಾತನಾಡಿದರು.

ಶೇ. 91ರಷ್ಟು ಅಪಘಾತಗಳು ವೇಗದ ಚಾಲನೆಯಿಂದಲೇ ಸಂಭವಿಸುತ್ತಿವೆ. ಹೀಗಾಗಿ ವಾಹನ ಸವಾರರು ಶೇ. 100ರಷ್ಟು ಹೆಲ್ಮೆಟ್​ ಮತ್ತು ಸೀಟ್​ ಬೆಲ್ಟನ್ನು ಧರಿಸಬೇಕು. ಅಲ್ಲದೆ, ಸರ್ಕಾರ ಅಪಘಾತದ ಕೇಂದ್ರಗಳನ್ನು ಪತ್ತೆ ಹಚ್ಚಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಬೇಕು. ಅಪಘಾತಗಳನ್ನು ತಡೆಯಲು ಉತ್ತಮ ಮಾನದಂಡಗಳನ್ನು ರಚಿಸಬೇಕಿದೆ ಎಂದು ಮನೋಹರ್​ ಸಪ್ರೆ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಹಾವು ಕಡಿತ

Sun Dec 26 , 2021
ಮುಂಬೈ: ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಕೈಗೆ ಹಾವು ಕಚ್ಚಿದೆ. ಪನ್ವೇಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್​ ಖಾನ್​ಗೆ ಶನಿವಾರ ಮಧ್ಯರಾತ್ರಿ ಹಾವು ಕಚ್ಚಿದೆ. ಕೂಡಲೇ ಸಲ್ಮಾನ್ ಖಾನ್ ಅವರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷ ರಹಿತ ಹಾವಾಗಿದ್ದರಿಂದ ಸಲ್ಮಾನ್​ ಅವರ ಆರೋಗ್ಯದಲ್ಲಿ ಅಷ್ಟಾಗಿ ಬಾಧಿಸಿಲ್ಲ ಎಂದು ಮೂಲಗಳು ಹೇಳಿವೆ. ಸದ್ಯ ನಟ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial