ಇಂದಿಗೂ ಜಗತ್ತಿನಲ್ಲಿ ಅನೇಕ ರಹಸ್ಯಗಳಿವೆ.

ಇಂದಿಗೂ ಜಗತ್ತಿನಲ್ಲಿ ಅನೇಕ ರಹಸ್ಯಗಳಿವೆ. ಅವುಗಳನ್ನು ಕಂಡು ಹಿಡಿಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಆ ರಹಸ್ಯಗಳನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ. ಅಂತಹದ್ದೆ ನಿಗೂಢವಾದ ಕೊಳವಿದೆ.

ಅದರ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಂತಿದೆ.

ಈವರೆಗೂ ವಿಜ್ಞಾನಿಗಳು ಸಹ ಈ ಕೊಳದ ಆಳವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.ಈ ಕೊಳ ಬೇರೆಲ್ಲೂ ಇಲ್ಲ, ಇದು ನಮ್ಮ ದೇಶದಲ್ಲಿದೆ. ಆ ನಿಗೂಢ ಕೊಳದ ಹೆಸರು ‘ಭೀಮ್ ಕುಂಡ್'(ಭೀಮ ಕೊಳ). ಈ ಕುಂಡದ ಕಥೆಯು ಮಹಾಭಾರತ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

ಭೀಮ ಕೊಳದ ಇತಿಹಾಸ

ಈ ಕೊಳವು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಬಜ್ನಾ ಗ್ರಾಮದಲ್ಲಿದೆ. ಮಹಾಭಾರತದ ಕಾಲಕ್ಕೆ ಸಂಬಂಧಿಸಿದ ಈ ಕೊಳದ ಬಗ್ಗೆ ಹೇಳಲಾಗುತ್ತದೆ. ಪಾಂಡವರು ವನವಾಸದಲ್ಲಿದ್ದಾಗ ಬಾಯಾರಿಕೆಯಿಂದ ಬಳಲುತ್ತಿದ್ದರಂತೆ. ಆಗ ಅವರಿಗೆ ಯಾವುದೇ ನೀರಿನ ಮೂಲಗಳು ಸಿಗಲಿಲ್ಲವಂತೆ.

ಆಗ ದ್ರೌಪದಿಯು ಬಾಯಾರಿಕೆಯಿಂದ ಕಂಗೆಟ್ಟಾಗ, ನಕುಲನು ತನ್ನ ಶಕ್ತಿಯಿಂದ ನೆಲದಡಿಯಲ್ಲಿ ನೀರನ್ನು ಕಂಡುಕೊಂಡನಂತೆ. ಭೀಮನು ತನ್ನ ಗದೆಯನ್ನು ನೆಲದ ಮೇಲೆ ಹೊಡೆದು ಈ ಕೊಳವನ್ನು ಮಾಡಿದನಂತೆ. 40 ರಿಂದ 80 ಮೀಟರ್ ಅಗಲವಿರುವ ಈ ಕೊಳ ನಿಖರವಾಗಿ ಗದೆಯಂತೆ ಕಾಣುತ್ತದೆ ಎಂದು ಹೇಳಲಾಗುತ್ತದೆ.

ನೈಸರ್ಗಿಕ ವಿಕೋಪ ಸಂಭವಿಸುವ ಮೊದಲು ಸಿಗ್ನಲ್ ಕೊಡುತ್ತಂತ್ತೆ!

ಈ ಕೊಳವು ನೋಟದಲ್ಲಿ ತುಂಬಾ ಸರಳವಾಗಿದೆ. ಆದರೆ ಇದರ ವಿಶೇಷತೆ ಯಾರನ್ನಾದರೂ ಆಶ್ಚರ್ಯಗೊಳಿಸುತ್ತದೆ. ವಾಸ್ತವವಾಗಿ ಏಷ್ಯಾ ಖಂಡದಲ್ಲಿ ಪ್ರವಾಹ, ಚಂಡಮಾರುತ ಅಥವಾ ಸುನಾಮಿ ಮುಂತಾದ ಯಾವುದೇ ನೈಸರ್ಗಿಕ ವಿಕೋಪಗಳು ಮುನ್ನೂಚನೆಯಿದ್ದಾಗ ಕೊಳದ ನೀರು ಸ್ವಯಂಚಾಲಿತವಾಗಿ ಏರಲು ಪ್ರಾರಂಭಿಸುತ್ತದೆ.

ಇದರ ಆಳ ಕಂಡು ಹಿಡಿಯಲು ಸಾಧ್ಯವಾಗಿಲ್ಲ!

ವಿದೇಶಿ ವಿಜ್ಞಾನಿಗಳು ಈ ನಿಗೂಢ ಕೊಳದ ಆಳವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದು,ಆದರೆ ಇಲ್ಲಿಯವರೆಗೆ ಯಾರಿಗೂ ಅದರ ನಿಜವಾದ ಆಳವನ್ನು ತಿಳಿಯಲು ಸಾಧ್ಯವಾಗಲಿಲ್ಲವಂತೆ.

ಇದರ ನೀರು ಗಂಗೆಯಂತೆ ಪರಿಶುದ್ಧ

ಒಮ್ಮೆ ವಿದೇಶಿ ವಿಜ್ಞಾನಿಗಳು ಕೊಳದ ಆಳ ತಿಳಿಯಲು ನೀರಿನ ಅಡಿಯಲ್ಲಿ 200 ಮೀಟರ್ ಕ್ಯಾಮೆರಾವನ್ನು ಕಳುಹಿಸಿದ್ದರು ಎಂದು ಹೇಳಲಾಗುತ್ತದೆ, ಆದರೆ ಆಗಲೂ ಅದರ ಆಳವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಈ ಕುಂಡದಲ್ಲಿ ಸ್ವಲ್ಪ ಆಳದಲ್ಲಿ ನೀರಿನ ಬಲವಾದ ಪ್ರವಾಹಗಳು ಹರಿಯುತ್ತವೆ ಎಂದು ಹೇಳಲಾಗುತ್ತದೆ. ಈ ಕೊಳದ ನೀರು ಗಂಗಾನದಿಯಂತೆ ಸಂಪೂರ್ಣವಾಗಿ ಶುದ್ಧವಾಗಿದೆ. ಅದು ಎಂದಿಗೂ ಕೆಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಸಾಮಾನ್ಯವಾಗಿ ನಿಂತ ನೀರು ನಿಧಾನವಾಗಿ ಹಾಳಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಘಾತಕ್ಕೀಡಾದ 'ಸುಖೋಯಿ-೨೦' ವಿಮಾನ

Thu Feb 16 , 2023
ಅಪಘಾತಕ್ಕೀಡಾದ ‘ಸುಖೋಯಿ-೨೦’ ವಿಮಾನ’ಮಧ್ಯಪ್ರದೇಶದ ಮುರೈನಾದಲ್ಲಿ ಜನವರಿ ೨೮ ರಂದು ಬೆಳಗ್ಗೆ ಬಹುದೊಡ್ಡ ದುರ್ಘಟನೆಯಾಯಿತು. ಭಾರತೀಯ ವಾಯುಪಡೆಯ ‘ಸುಖೋಯಿ-೨೦ ಮತ್ತು ‘ಮಿರಾಜ್-೨೦೦೦ ಈ ಯುದ್ಧ ವಿಮಾನಗಳು ಅಪಘಾತಕ್ಕೀಡಾದವು. ಈ ಘಟನೆಯ ವರದಿ ಸಿಕ್ಕಿದಾಕ್ಷಣ ಸಹಾಯ ಮತ್ತು ರಕ್ಷಣಾ ತಂಡಗಳು ಘಟನಾಸ್ಥಳಕ್ಕೆ ಧಾವಿಸಿದವು. ಇವೆರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉಡ್ಡಾಣ ಮಾಡಿದ್ದವು. ಅಪಘಾತದ ಕಾರಣ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪೊಲೀಸರು ನೀಡಿದ ಮಾಹಿತಿಗನುಸಾರ ಈ ದುರ್ಘಟನೆಯಲ್ಲಿ ಓರ್ವ ವೈಮಾನಿಕನು ಮೃತಪಟ್ಟಿದ್ದಾನೆ. ವಿಮಾನ ಅಪಘಾತಕ್ಕೆ […]

Advertisement

Wordpress Social Share Plugin powered by Ultimatelysocial