Facebookಗೆ ಒಂದೇ ದಿನ 14 ಲಕ್ಷ ಕೋಟಿ ನಷ್ಟ;

ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲೆಯ ಪತನ ಕಂಡಿರುವ ಫೇಸ್ಬುಕ್‌, ನೆನ್ನೆ ಒಂದೇ ದಿನ ಸುಮಾರು 14 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದೆ. 18 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಫೇಸ್ಬುಕ್‌ನ ಸಕ್ರಿಯ ಬಳೆಕೆದಾರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಇದರಿಂದ ಫೇಸ್ಬುಕ್‌ನ ಮಾತೃ ಸಂಸ್ಥೆ ಮೆಟಾ ಗುರುವಾರ ಸುಮಾರು 24% ನಷ್ಟ ಅನುಭವಿಸಿತು. ಇದು ಅಮೇರಿಕದ ಟ್ರೇಂಡಿಗ್‌ ಇತಿಹಾಸದಲ್ಲಿಯೇ ಅತಿದೊಡ್ಡ ನಷ್ಟವಾಗಿದೆ.
ಇದರ ಪರಿಣಾಮ ಫೇಸ್ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಕೂಡ ವ್ಯಯಕ್ತಿಕವಾಗಿ 2.3 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದರೊಂದಿಗೆ ಜುಲೈ 2015ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವದ ಟಾಪ್‌-ಟೆನ್‌ ಶ್ರೀಮಂತರ ಲಿಸ್ಟ್‌ನಿಂದ ಜುಕರ್‌ಬರ್ಗ್‌ ಆಚೆ ಬಂದಂತಾಗಿದೆ. ಪ್ರತಿಸ್ಪರ್ಧಿಗಳಾದ ಟಿಕ್‌ಟಾಕ್‌, ಸ್ನ್ಯಾಪ್‌ಚಾಟ್‌ ಮತ್ತು ಯೂಟ್ಯೂಬ್‌ಗಳಿಗೆ ಜನರು ಮೊರೆ ಹೋಗುತ್ತಿರುವುದರಿಂದ ಫೇಸ್ಬುಕ್ನ ಬಳೆಕಾದರರು ಕಡಿಮೆಯಾಗುತ್ತಿದೆ. ಜೊತೆಗೆ apple ತನ್ನ ios ಫೋನ್‌ಗಳ ಡೇಟಾ ಶೇರಿಂಗ್‌ನಲ್ಲಿ ಹೊಸ ನಿಯಮಗಳನ್ನು ತಂದಿರುವುದರಿಂದ ಫೇಸ್ಬುಕ್‌ನ ಟಾರ್ಗೆಟೆಡ್‌ ಜಾಹಿರಾತುಗಳಿಗೆ ಹೊಡೆತ ಬಿದ್ದು ರೆವಿನ್ಯು ಕಡಿಮೆಯಾಗಿದೆ. ಅಲ್ಲದೆ ಫೆಸ್ಬುಕ್ನಲ್ಲಿ ಖರ್ಚು ಹೆಚ್ಚಾಗಿ ಆದಾಯ ನಿರೀಕ್ಷಿಸಿದ ಮಟ್ಟಕ್ಕಿಂತ ಕಡಿಮೆಯಾಗಿರುವುದು‍ ಫೇಸ್ಬುಕ್‌ನ ಹಿನ್ನಡೆಗೆ ಕಾರಣವಾಗಿದೆ ಅಂತ ಟೆಕ್‌-ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BREAKING NEWS:ಹಿಜಾಬ್ ಮುಂದುವರಿಸಿದರೆ ಪಂಚೆ, ರುದ್ರಾಕ್ಷಿ ಮಾಲೆ ಧರಿಸುತ್ತೇವೆ;

Fri Feb 4 , 2022
ರಾಜ್ಯದಲ್ಲಿ ಜಿಹಾದ್ ವಿವಾದ ತೀವ್ರವಾಗಿದ್ದು, ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಕಾಲೇಜಿ‌ಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಕಾಂಪೌಂಡ್ ಪ್ರವೇಶಿಸಲು ಇಂದು ಸಹ ಅವಕಾಶ ನಿರಾಕರಿಸಲಾಗಿದ್ದು, ವಿದ್ಯಾರ್ಥಿನಿಯರು ಇಡೀ ದಿನ ರಸ್ತೆ ಬದಿಯಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದದ ಕಿಡಿ ಸದ್ಯ ಕುಂದಾಪುರದಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ. ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಶುಕ್ರವಾರ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ‌. […]

Advertisement

Wordpress Social Share Plugin powered by Ultimatelysocial