ಮೆಟಾ ಕಂಪೆನಿ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ.

ಮೆಟಾ ಕಂಪೆನಿ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್‌ನಲ್ಲಿ ಆಡಿಯೊ ಫೀಚರ್ಸ್‌, ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ ಮತ್ತು ಇತರ ಫೀಚರ್ಸ್‌ಗಳಿಗಾಗಿ ಸ್ಪ್ಲಿಟ್ ಪಾವತಿ ಪೇಮೆಂಟ್‌ ಫೀಚರ್ಸ್‌ ಅನ್ನು ಮೆಟಾ ಕಂಪೆನಿ ಘೋಷಣೆ ಮಾಡಿದೆ.ಸದ್ಯ ಮೆಟಾ ಕಂಪೆನಿ ಘೋಷಣೆ ಮಾಡಿರುವ ಕೆಲವು ಫೀಚರ್ಸ್‌ಗಳು ಆರಂಭಿಕ ಹಂತದಲ್ಲಿ US ಪ್ರೇಕ್ಷಕರಿಗೆ ಲಭ್ಯವಿರುತ್ತವೆ ಎನ್ನಲಾಗಿದೆ.ಅಪ್ಲಿಕೇಶನ್‌ಹೌದು, ಮೆಸೆಂಜರ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳು ಮೆಸೆಂಜರ್‌ ಪ್ಲಾಟ್‌ಫಾರ್ಮ್‌ ಸೇರಲಿವೆ. ಇನ್ನು ಮೆಟಾ ತನ್ನ ಹೊಸ ಫೀಚರ್ಸ್‌ಗಳ ಬಗ್ಗೆ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಅಲ್ಲದೆ ಐಒಎಸ್‌ ಅಥವಾ ಆಂಡ್ರಾಯ್ಡ್‌ ಫೋನ್ ಬಳಸುವ ಪ್ರತಿಯೊಬ್ಬರಿಗೂ ಮೆಸೆಂಜರ್‌ನಲ್ಲಿ ಸ್ಪ್ಲಿಟ್ ಪೇಮೆಂಟ್ಸ್‌ಅನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದೆ. ಹಾಗಾದ್ರೆ ಮೆಸೆಂಜರ್‌ ಸೇರಿದ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿಸ್ಪ್ಲಿಟ್ ಪೇಮೆಂಟ್ಸ್ ಫೀಚರ್ ಹೆಸರೇ ಸೂಚಿಸುವಂತೆ ನಿಮ್ಮ ಬಿಲ್‌ ಅನ್ನು ವಿಭಜಿಸುವುದಕ್ಕೆ ಇದು ಸಹಕಾರಿಯಾಗಲಿದೆ. ಈ ಫೀಚರ್ಸ್‌ ಮೂಲಕ ನೀವು ಪ್ರತಿಯೊಬ್ಬ ವ್ಯಕ್ತಿಯು ನೀಡಬೇಕಾದ ಮೊತ್ತವನ್ನು ಕಸ್ಟಮೈಸ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಫೀಚರ್ಸ್‌ ಅನ್ನು ಬಳಸುವುದಕ್ಕೆ ಬಳಕೆದಾರರು ಗ್ರೂಪ್‌ ಚಾಟ್‌ನಲ್ಲಿ + ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಅಲ್ಲದೆ ಪೇಮೆಂಟ್ಸ್‌ ಟ್ಯಾಬ್ ಅನ್ನು ಆಯ್ಕೆ ಮಾಡುವ ಮೂಲಕ ಸ್ಟಾರ್ಟ್‌ ಬಟನ್ ಅನ್ನು ಟ್ಯಾಪ್ ಮಾಡಬಹುದು. ಇಲ್ಲಿ ನೀವು ಪಾವತಿ ವಿವರಗಳನ್ನು ದೃಢೀಕರಿಸಬಹುದು ಮತ್ತು ರಿಕ್ವೆಸ್ಟ್‌ ಕಳುಹಿಸಬಹುದು.ಇನ್ನು ಫೇಸ್‌ಬುಕ್ ಮೆಸೆಂಜರ್ ಶೀಘ್ರದಲ್ಲೇ ಬಳಕೆದಾರರಿಗೆ ವಾಯ್ಸ್‌ ಮೆಸೇಜ್‌ ಕಳುಹಿಸುವುದಕ್ಕೆ ಅವಕಾಶ ನೀಡಲಿದೆ. ಮೆಸೇಜ್‌ ಅನ್ನು ಕಳುಹಿಸುವ ಮೊದಲು ವಾಯ್ಸ್‌ ಮೆಸೇಜ್‌ ಪಾಸ್‌ಗೊಳಿಸುವ, ಪ್ರಿವ್ಯೂ ಮಾಡುವ, ಡಿಲೀಟ್‌ ಅಥವಾ ರೆಕಾರ್ಡ್ ಮಾಡುವುದನ್ನು ಮುಂದುವರಿಸುವುದಕ್ಕೆ ಕೂಡ ಅವಕಾಶ ನೀಡಲು ಮುಂದಾಗಿದೆ. ಇದಲ್ಲದೆ ಮೆಸೆಂಜರ್ ವಾಯ್ಸ್‌ ಮೆಸೇಜ್‌ನ ಅವಧಿಯನ್ನು ಒಂದು ನಿಮಿಷದಿಂದ 30 ನಿಮಿಷಗಳಿಗೆ ಹೆಚ್ಚಿಸಿದೆ. ಅಂದರೆ ನೀವು ಒಂದು ಹಾಡನ್ನು ವಾಯ್ಸ್‌ ಮೆಸೇಜ್‌ನಲ್ಲಿ ರೆಕಾರ್ಡ್ ಮಾಡಬಹುದು.ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ಮೆಸೆಂಜರ್ ಕೂಡ ವಾಟ್ಸಾಪ್‌ ಮಾದರಿಯ ವಾಯ್ಸ್‌ ನೋಟ್‌ಗಳನ್ನು ಪಡದುಕೊಳ್ಳಲಿದೆ. ಇವುಗಳನ್ನು ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ ನಲ್ಲಿ ಬಳಸಬಹುದು. ಅಂದರೆ ಈ ಸಂದೇಶಗಳು ವ್ಯಾನಿಶ್‌ ಮೋಡ್‌ನಲ್ಲಿ ನೋಡಿದ ತಕ್ಷಣ ಕಣ್ಮರೆಯಾಗುವಂತೆ ಮಾಡಲಾಗಿದೆ. ಇದರಿಂದ ಬಳಕೆದಾರರು ಕಣ್ಮರೆಯಾಗುತ್ತಿರುವ ಮೇಮ್‌ಗಳು, GIF ಗಳು, ಸ್ಟಿಕ್ಕರ್‌ಗಳು ಅಥವಾ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇನ್ನು ಮೆಸೆಂಜರ್‌ನಲ್ಲಿ ವ್ಯಾನಿಶ್ ಮೋಡ್ ಅನ್ನು ಆನ್ ಮಾಡಲು, ಚಾಟ್ ಥ್ರೆಡ್ ಅನ್ನು ತೆರೆಯಬೇಕಾಗುತ್ತದೆ. ಇದರಲ್ಲಿ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ವ್ಯಾನಿಶ್‌ ಮೋಡ್‌ ಅನ್ನು ಬಳಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಫೆಬ್ರವರಿ 14ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

Thu Feb 10 , 2022
ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಫೆಬ್ರವರಿ 14ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಈ ಹೊಸ ಮಾರ್ಗಸೂಚಿಯಲ್ಲಿ ಅಪಾಯದಲ್ಲಿರುವ ಹಾಗೂ ಉಳಿದ ದೇಶಗಳ ಗಡಿರೇಖೆಗಳನ್ನು ತೆಗೆದು ಹಾಕಲಾಗಿದೆ.ಹೊಸ ಮಾರ್ಗಸೂಚಿಗಳ ಪ್ರಕಾರ ಈ ಹಿಂದೆ ಕಡ್ಡಾಯಗೊಳಿಸಲಾಗಿದ್ದ 7 ದಿನಗಳ ಹೋಂ ಕ್ವಾರಂಟೈನ್​ಗಳ ಬದಲಾಗಿ 14 ದಿನಗಳ ಸ್ವಯಂ ಮೇಲ್ವಿಚಾರಣೆ ವಿಧಾನವನ್ನು ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ದೇಶಕ್ಕೆ ಆಗಮಿಸಿದವರಿಗೆ ಶಿಫಾರಸು ಮಾಡಲಾಗಿದೆ.ಈ ಸಮಯದಲ್ಲಿ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತವರು ಐಸೋಲೇಟ್​ ಆಗಬೇಕು […]

Advertisement

Wordpress Social Share Plugin powered by Ultimatelysocial