ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

 

ಮುಂಬೈ: ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸಹೋದರಿ ಮಾಳವಿಕಾ ಸೂದ್ ಪರ ಸೋನು ಸೂದ್, ಮತದಾನದ ದಿನದಂದು ಚುನಾವಣೆ ಪ್ರಚಾರ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಸೋನು ಸೂದ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು.ಮಂಗೇವಾಲಾ, ದರ್ಪುರ್, ಖಖರ್ನಾ ಹಳ್ಳಿಗಳಲ್ಲಿ ಸಹೋದರಿ ಪರ ಪ್ರಚಾರ ನಡೆಸಿದ್ದರು. ಚುನಾವಣೆ ದಿನ ಮತಗಟ್ಟೆಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದರು. ಈ ವೇಳೆ ಅವರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಮತದಾನದ ದಿನ ನೀತಿ ಸಂಹಿತೆ ಉಲ್ಲಂಘಿಸಿ ಸಹೋದರಿ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರಿಂದ ಸೋನು ಸೂದ್ ವಿರುದ್ಧ ಮೊಗಾ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಸ್ಟಾಗ್ರಾಮ್ ಬಳಕೆದಾರರಿಗೆ 'ನೀವು ಮರುಉತ್ಪಾದಿಸಿದ್ದೀರಾ' ಎಂದು ಕೇಳಿದ ಸಮಂತಾ ಹಿಟ್!!

Tue Feb 22 , 2022
ಸಮಂತಾ ರುತ್ ಪ್ರಭು ಸೋಮವಾರ ತನ್ನ ಇನ್‌ಸ್ಟಾಗ್ರಾಮ್ ಅನುಯಾಯಿಗಳೊಂದಿಗೆ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಅನ್ನು ನಡೆಸಲು ನಿರ್ಧರಿಸಿದ್ದಾರೆ. ನಟಿ ಅಧಿವೇಶನವನ್ನು ಪ್ರಾರಂಭಿಸಿದರು, ‘ನನಗೇನಾದರೂ ಕೇಳು? ಸರಿ, ಏನೂ ಅಲ್ಲ. ನಾನು ಉತ್ತರಿಸಲು ಬಯಸುವ ಪ್ರಶ್ನೆಗಳಿಗೆ ಮಾತ್ರ.’ ಒಬ್ಬ ವ್ಯಕ್ತಿ ಸಮಂತಾಗೆ ಕೆಲಸಗಳನ್ನು ಮಾಡಲು ‘ಇಷ್ಟು ಧೈರ್ಯ’ ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ, ಅವಳು ಉತ್ತರಿಸಿದಳು, “ದೊಡ್ಡ ಪ್ರತಿಕೂಲತೆಯನ್ನು ಎದುರಿಸುವಾಗ ದೊಡ್ಡ ಧೈರ್ಯ ಬರುತ್ತದೆ.” ಇತರ ಬಳಕೆದಾರ ಅವಳನ್ನು ಕೇಳಿದನು, […]

Advertisement

Wordpress Social Share Plugin powered by Ultimatelysocial