ಪೀಣ್ಯ ಫ್ಲೈಓವರ್‌ನಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧ

ರಾಷ್ಟ್ರೀಯ ಹೆದ್ದಾರಿ ೪ರ ಪೀಣ್ಯ ಮೇಲು ಸೇತುವೆ (ಫ್ಲೈಓವರ್) ರಸ್ತೆಯ ಮೇಲೆ ಮತ್ತೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.ಕಳೆದ ವರ್ಷ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಮೂರ್ನಾಲ್ಕು ತಿಂಗಳುಗಳ ಕಾಲ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಪಿಲ್ಲರ್‌ಗಳಿಗೆ ಕೇಬಲ್ ಅಳವಡಿಸಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಭಾರಿ ವಾಹನಗಳ ಓಡಾಡಿಸಿ ತಪಾಸಣೆ ಮಾಡಿ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿತ್ತು. ಆದರೆ ಈಗ ಮತ್ತೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದೆ.ಏಕೆಂದರೆ ಫ್ಲೈಓವರ್‌ನ ಎಲ್ಲಾ ಪಿಲ್ಲರ್‌ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕ ಎದುರಾಗಿದೆ. ಹಾಗಾಗಿ ಕೇಬಲ್ ಕಿತ್ತು ಬರುವುದಕ್ಕೂ ಮುಂಚೆಯೇ ಹೊಸ ಕೇಬಲ್‌ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಇದಕ್ಕಾಗಿ ಟೆಂಡರ್ ಕೂಡ ನೀಡಿದ್ದು ಫೆಬ್ರವರಿ ತಿಂಗಳಲ್ಲಿ ಕೆಲಸ ಶುರುವಾಗುವ ಸಾಧ್ಯತೆ ಇದೆ. ಹಾಗಾಗಿ ಭಾರೀ ವಾಹನ ಓಡಾಟ ನಡೆಸಿದರೆ ಪಿಲ್ಲರ್ ಮತ್ತು ಫ್ಲೈಓವರ್ ಕೇಬಲ್‌ಗಳು ಕಿತ್ತು ಬರುವ ಸಾಧ್ಯತೆ ಇರುವುದರಿಂದ ಮುಂದಿನ ನಾಲ್ಕು ತಿಂಗಳವರೆಗೂ ಭಾರೀ ವಾಹನಗಳ ನಿರ್ಬಂಧಿಸಲಾಗಿದೆ.
ಫ್ಲೈಓವರ್‌ನ ಪ್ರವೇಶ ದ್ವಾರದಲ್ಲೇ ಸಂಚಾರ ಪೊಲೀಸರು ಮತ್ತು ಹೋಂಗಾರ್ಡ್‌ಗಳು ಬ್ಯಾರಿಕೇಡ್ ಹಾಕಿ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.ಪೀಣ್ಯ ಫ್ಲೈಓವರ್ ೧೨೦ ಪಿಲ್ಲರ್‌ಗಳನ್ನು ಒಳಗೊಂಡಿದ್ದು, ೨೪೦ ಕೇಬಲ್‌ಗಳನ್ನು ಅಳವಡಿಸಬೇಕಾಗಿದೆ. ಪ್ರತಿ ಪಿಲ್ಲರ್‌ಗೂ ಎರಡೆರಡು ಕೇಬಲ್‌ಗಳನ್ನು ಅಳವಡಿಸಬೇಕಿದ್ದು ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ.ಕೇಬಲ್ ಅಳವಡಿಸಿದ ಬಳಿಕ ಐಐಎಸ್‌ಸಿ ಅವರು ಫ್ಲೈಓವರ್ ಮೇಲೆ ಪ್ರಾಯೋಗಿಕವಾಗಿ ಭಾರೀ ವಾಹನಗಳನ್ನು ಓಡಾಡಿಸಿ ತಪಾಸಣೆ ಮಾಡಲಿದ್ದಾರೆ. ಆ ತಪಾಸಣೆಯಲ್ಲಿ ಪಾಸ್ ಆದರೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬಹುದು.೨೩ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಬೆಂಗಳೂರು ಮತ್ತು ರಾಜ್ಯದ ಜಿಲ್ಲೆಗಳಿಗೆ ಒಂದು ರೀತಿ ಆರ್ಥಿಕ ಚೇತರಿಕೆಯ ಕೊಂಡಿ ಆಗಿದ್ದು, ಇದರ ದುರಸ್ಥಿ ಕಾರ್ಯ ಆದಷ್ಟು ಬೇಗ ಆಗಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನವರಿ 19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಆಗಮನ.

Sat Jan 14 , 2023
ಕಲಬುರಗಿ,ಜ.13(ಕ.ವಾ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ ಅವರು ಕಲಬುರಗಿ ನಗರದ ಐವಾನ್-ಎ-ಶಾಹಿತಿ ಅತಿಥಿಗೃಹದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಪರಿಶೀಲನಾ ಸಭೆ ನಡೆಸಿದರು. ಪ್ರಧಾನಮಂತ್ರಿಗಳು ಅಂದು ಮಳಖೇಡ್‍ದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ, ಯಾದಗಿರಿ ಹಾಗೂ […]

Advertisement

Wordpress Social Share Plugin powered by Ultimatelysocial