ಸುದೀಪ್ ತಂಡದಲ್ಲಿ ಗೇಲ್, ಕೃಷ್ಣ ತಂಡದಲ್ಲಿ ರೈನಾ!

ನ್ನಡ ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಮೆಂಟ್ ಆದ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2018ರಲ್ಲಿ ಉದ್ಘಾಟನೆಯಾಗಿದ್ದ ಕನ್ನಡ ಚಲನಚಿತ್ರ ಕಪ್ ಬಳಿಕ 2019ರಲ್ಲೂ ಸಹ ನಡೆದಿತ್ತು. ಆದರೆ ನಂತರದ ವರ್ಷಗಳಲ್ಲಿ ಕೊರೊನಾ ವೈರಸ್ ಹಾವಳಿ ಹಾಗೂ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣದಿಂದಾಗಿ ಕನ್ನಡ ಚಲನಚಿತ್ರ ಕಪ್ ನಡೆದಿರಲಿಲ್ಲ.

ಹೀಗೆ ಕಳೆದ ಎರಡು ಮೂರು ವರ್ಷಗಳಲ್ಲಿ ನಡೆಯದೇ ಇದ್ದ ಈ ಟೂರ್ನಿ ಇದೀಗ ಮತ್ತೆ ಬಂದಿದ್ದು, ಸಿನಿಮಾ ಹಾಗೂ ಕ್ರಿಕೆಟ್ ಎರಡರಲ್ಲೂ ಆಸಕ್ತಿ ಇರುವವರಿಗಂತೂ ಭರ್ಜರಿ ಮನರಂಜನೆ ಕಟ್ಟಿಟ್ಟ ಬುತ್ತಿ ಎನ್ನಬಹುದು. ಇನ್ನು ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಕುರಿತಾಗಿ ಮಾಹಿತಿಗಳು ಹೊರಬಿದ್ದಿದ್ದು, ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ಟೂರ್ನಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಇನ್ನು ಟೂರ್ನಿಯ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದ್ದು, ಪಂದ್ಯಗಳನ್ನು ವೀಕ್ಷಿಸಲು ಇಚ್ಛಿಸುವವರು ಬುಕ್ ಮೈ ಶೋ, ಪೇ ಟಿಎಂ ಹಾಗೂ ಟಿಕೆಟ್ ಜೀನಿ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಬಹುದಾಗಿದೆ. ಪಂದ್ಯಗಳ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಒಟ್ಟು ಆರು ತಂಡಗಳು ಕಣಕ್ಕಿಳಿಯಲಿವೆ. ಇನ್ನು ಈ ಆರೂ ತಂಡಗಳಲ್ಲೂ ಓರ್ವ ಅಂತರರಾಷ್ಟ್ರೀಯ ಕ್ರಿಕೆಟಿಗನಿದ್ದು, ಯಾವ ತಂಡಗಳಲ್ಲಿ ಯಾರೆಲ್ಲಾ ಇದ್ದಾರೆ, ಯಾರು ತಂಡಗಳನ್ನು ಮುನ್ನಡೆಸಲಿದ್ದಾರೆ ಹಾಗೂ ಯಾವ ತಂಡದಲ್ಲಿ ಯಾವ ಅಂತರರಾಷ್ಟ್ರೀಯ ಕ್ರಿಕೆಟಿಗರಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಹೊಯ್ಸಳ ಈಗಲ್ಸ್

ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್ ನಾಯಕನಾಗಿ ಮುನ್ನಡೆಸಲಿದ್ದು, ಈ ತಂಡದಲ್ಲಿ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಇರಲಿದ್ದಾರೆ. ಸಂಪೂರ್ಣ ತಂಡ ಹೀಗಿದೆ: ಕ್ರಿಸ್ ಗೇಲ್, ಸುದೀಪ (ನಾಯಕ), ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನೀಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅಭಿಷೇಕ್ ಬಾಡ್ಕರ್. ಮಾರ್ಗದರ್ಶಕ: ನಂದಕಿಶೋರ್

ಗಂಗಾ ವಾರಿಯರ್ಸ್

ಡಾರ್ಲಿಂಗ್ ಕೃಷ್ಣ ನಾಯಕನಾಗಿ ಮುನ್ನಡೆಸಲಿರುವ ಗಂಗಾ ವಾರಿಯರ್ಸ್ ತಂಡದಲ್ಲಿ ಸುರೇಶ್ ರೈನಾ ಇರಲಿದ್ದು, ಸಂಪೂರ್ಣ ತಂಡ ಹೀಗಿರಲಿದೆ: ಸುರೇಶ್ ರೈನಾ, ಧನಂಜಯ, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ರಾಜನ್ ಹಾಸನ್, ಪ್ರವೀಣ್, ಶಿವಕುಮಾರ್ ಬಿ ಯು, ಕೃಷ್ಣ (ನಾಯಕ )ಹಾಗೂ ಮಾರ್ಗದರ್ಶಕ: ಕಾರ್ತಿಕ್ ಗೌಡ.

ವಿಜಯನಗರ ಪೇಟ್ರಿಯಾಟ್ಸ್

ಹರ್ಷಲ್ ಗಿಬ್ಸ್, ಉಪೇಂದ್ರ, ತ್ರಿವಿಕ್ರಮ್, ಗರುಡ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಟ್ಟಲ್ ಕಾಮತ್, ಕಿರಣ್, ಸಚಿನ್, ಮಹೇಶ್ ಕೃಷ್ಣ, ಮಯೂರ್ ಪಟೇಲ್, ಆದರ್ಶ್, ರಜತ್ ಹೆಗ್ಡೆ, ಪ್ರದೀಪ್ (ನಾಯಕ)ಹಾಗೂ ಮಾರ್ಗದರ್ಶಕ: ದಿನಕರ್ ತೂಗುದೀಪ.

ಕದಂಬ ಲಯನ್ಸ್

ತಿಲಕರತ್ನೆ ದಿಲ್ಶನ್, ಗಣೇಶ್ (ನಾಯಕ), ರೇಣುಕಾ, ವ್ಯಾಸರಾಜ್, ಲೋಕಿ, ಪ್ರತಾಪ್ ವಿ, ಲೋಕಿ ಕೆ, ಯೋಗೇಶ್, ಅಭಿಲಾಷ್, ಪವನ್ ಒಡೆಯರ್, ಪ್ರೀತಮ್ ಗುಬ್ಬಿ, ರಕ್ಷಿತ್ ಎಸ್, ರಿಷಿ ಬೋಪಣ್ಣ, ರಾಜೀವ್ ಹನು ಹಾಗೂ ಮಾರ್ಗದರ್ಶಕನಾಗಿ ರಾಕ್‌ಲೈನ್ ವೆಂಕಟೇಶ್

ರಾಷ್ಟ್ರಕೂಟ ಪ್ಯಾಂಥರ್ಸ್

ಎಸ್. ಬದ್ರಿನಾಥ್, ಧ್ರುವ ಸರ್ಜಾ, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ಜಯರಾಮ್ ಕಾರ್ತಿಕ್ (ನಾಯಕ)ಹಾಗೂ ಮಾರ್ಗದರ್ಶಕನಾಗಿ ಸದಾಶಿವ್ ಶೆಣಾಯ್.

ಒಡೆಯರ್ ಚಾರ್ಜರ್ಸ್

ಬ್ರಿಯಾನ್ ಲಾರಾ, ಶಿವಣ್ಣ (ನಾಯಕ), ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನರೇಶ್ ಗಾಂಧಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್ ಬಿಎ, ರಾಹುಲ್ ಪ್ರಸನ್ನ, ಆರ್ಯನ್, ಥಮನ್ ಎಸ್ ಹಾಗೂ ಮಾರ್ಗದರ್ಶಕನಾಗಿ ಕೆ ಪಿ ಶ್ರೀಕಾಂತ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಾಂತಾರ 2ನಲ್ಲಿ ರಜನಿಕಾಂತ್ ನಟನೆ,

Tue Feb 21 , 2023
ಕಳೆದ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ದೇಶಾದ್ಯಂತ ಸದ್ದು ಮಾಡಿದ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಕಬಳಿಸಿಕೊಂಡ ಕಾಂತಾರ ಚಿತ್ರ ಭಾರತ ಸಿನಿಮಾ ರಂಗದಲ್ಲಿ ವಿಶೇಷ ದಾಖಲೆಯನ್ನು ಬರೆದ ಚಿತ್ರ ಎನಿಸಿಕೊಂಡಿದೆ. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಿದ ಚಿತ್ರತಂಡ ಬೇರೆ ಬೇರೆ ರಾಜ್ಯಗಳ ಸಿನಿ ರಸಿಕರಿಂದ ವ್ಯಕ್ತವಾದ ಪ್ರಶಂಸೆ ಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಪರ ರಾಜ್ಯಗಳಲ್ಲಿಯೂ ಸಹ ಬಿಡುಗಡೆ ಮಾಡಿದರು. […]

Advertisement

Wordpress Social Share Plugin powered by Ultimatelysocial