ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಇದೆ.

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50600 ರೂಪಾಯಿಗೆ ಬಂದಿಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತವೇ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಲು ಕಾರಣ.

ಬುಧವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 134 ರೂಪಾಯಿಗಳಷ್ಟು ಇಳಿಕೆ ಕಂಡಿದ್ದು, 50,601 ರೂಪಾಯಿಗಳಿಗೆ ತಲುಪಿದೆ. ಈ ಮೊದಲು ಬಂಗಾರದ ದರ 10 ಗ್ರಾಂಗೆ 50,735 ರೂಪಾಯಿ ಇತ್ತು. ಬೆಳ್ಳಿ ಬೆಲೆ ಕೂಡ 169 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 62,787 ರೂಪಾಯಿ ಆಗಿದೆ. ಈ ಮೊದಲು ಬೆಳ್ಳಿ ಪ್ರತಿ ಕೆಜಿಗೆ 62,956 ರೂಪಾಯಿ ಇತ್ತು.

ರೂಪಾಯಿ ಮೌಲ್ಯ ಕೂಡ ಚೇತರಿಕೆ ಕಂಡಿದ್ದು, ಯುಎಸ್ ಡಾಲರ್ ವಿರುದ್ಧ 76 ರೂಪಾಯಿ 40 ಪೈಸೆಗೆ ಬಂದು ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಪ್ರತಿ ಔನ್ಸ್‌ಗೆ 1,869 ಡಾಲರ್‌ನಷ್ಟಾಗಿದೆ. ಬೆಳ್ಳಿ ಔನ್ಸ್‌ಗೆ 22.61 ಡಾಲರ್‌ ಆಗಿದೆ. ಯುಎಸ್ ಖಜಾನೆ ಗಳಿಕೆಯ ಬೆಳವಣಿಗೆ ಮತ್ತು ಫೆಡರಲ್ ರಿಸರ್ವ್‌ನ ನೀತಿ ನಿರ್ಧಾರಕ್ಕೂ ಮುನ್ನವೇ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿತ್ತು, ಹಾಗಾಗಿಯೇ ಈ ಸ್ಥಿರತೆ ಇದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆಯಪ್’ ಮೂಲಕ ಚಿನ್ನದ ಶುದ್ಧತೆ ನಿಜವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿಯಲ್ಲಿ ಮುಂದಿನ ನಾಲ್ಕು ದಿನ ಮಳೆಯ ಅಲರ್ಟ್!

Thu May 5 , 2022
  ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿರುಗಾಳಿ, ಮಿಂಚು ಗುಡುಗು ಸಹಿತ ಮಳೆಯಾಗುತ್ತಿದೆ. ನಿನ್ನೆಯೂ ಸಹ ರಾಜಧಾನಿಯಲ್ಲಿ ಸಂಜೆ ಆಗುತ್ತಿದ್ದಂತೆ ರಾಜಾಜಿ ನಗರ, ವಿಧಾನಸೌಧ, ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳಭಾಗ ಮತ್ತು ಕರಾವಳಿ ಪ್ರದೇಶ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ. ಮೇ 9ರವರೆಗೆ ರಾಜಧಾನಿಯಲ್ಲಿ ಮಳೆಯನ್ನು ಕಾಣಲಿದ್ದೇವೆ. ಉಷ್ಣ ವಲಯದಲ್ಲಿ ದಿಢೀರ್ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣ ಭಾರತದಲ್ಲಿ ಕಳೆದ ಒಂದು […]

Advertisement

Wordpress Social Share Plugin powered by Ultimatelysocial