KING KHAN:ನನ್ನ ಪೈಜಾಮ ಮಾರಿಯಾದರೂ ಧೋನಿಯನ್ನು ಖರೀದಿಸಲು ಸಿದ್ಧ ಎಂದಿದ್ದ ಶಾರುಖ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಎಲ್ಲರೂ ಅವರನ್ನು ವಿಶ್ವದ ಅತ್ಯುತ್ತಮ ನಾಯಕ ಎಂದು ಪರಿಗಣಿಸುತ್ತಾರೆ. 40ರ ಹರೆಯದಲ್ಲಿಯೂ ಕಳೆದ ಐಪಿಎಲ್ ಋತುವಿನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಈ ಬಾರಿಯೂ ಸಹ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ಸೀಸನ್‌ಗಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಆದರೆ, ಬಾಲಿವುಡ್‌ನ ಕಿಂಗ್ ಖಾನ್ ಎಂದು ಕರೆಯಲ್ಪಡುವ ಶಾರುಖ್ ಖಾನ್, ಮಹೇಂದ್ರ ಸಿಂಗ್ ಧೋನಿಗಾಗಿ ತಮ್ಮ ಪೈಜಾಮಾವನ್ನು ಮಾರಾಟ ಮಾಡಲು ಸಹ ಒಪ್ಪಿಕೊಂಡ ಸಮಯವಿತ್ತು.

ನನ್ನ ಪೈಜಾಮ ಮಾರಿಯಾದರೂ ಧೋನಿಯನ್ನು ಖರೀದಿಸಲು ಸಿದ್ಧ:

ಐಪಿಎಲ್ 2017 (IPL 2017)ರ ಹರಾಜಿನ ಸಂದರ್ಭದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್  ಅವರು ಅತ್ಯಂತ ಯಶಸ್ವಿ ಭಾರತೀಯ ನಾಯಕ ಮಹೇಂದ್ರ ಸಿಂಗ್ ಧೋನಿ  ಅವರನ್ನು ಖರೀದಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು, 2017 ನಲ್ಲಿ ತಮ್ಮ ತಂಡಕ್ಕಾಗಿ ಧೋನಿಯಂತಹ ಡೈನಾಮಿಕ್ ನಾಯಕನನ್ನು ಖರೀದಿಸಲು ಅವರು ತಮ್ಮ ಬಟ್ಟೆಗಳನ್ನು ಮಾರಾಟ ಮಾಡಲೂ ಸಹ ಸಿದ್ಧ ಎಂದು ಹೇಳಿದ್ದರು.

ಧೋನಿ ಮೇಲಿನ ಅಭಿಮಾನಿಗಳ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ:

ಯಾರ್ ಮೈನ್ ತೋ ಉಸ್ಕೊ ಅಪ್ನಾ ಪೈಜಾಮ ಬೆಚ್ ಕೆ ಭಿ ಖರಿದ್ ಲುನ್, ವೋ ಆಯೆ ತೋ ಹರಾಜ್ ಮೇ (ಮಹೇಂದ್ರ ಸಿಂಗ್ ಧೋನಿ ಅವರು ಹರಾಜಿಗೆ ಬಂದರೆ, ನನ್ನ ಪೈಜಾಮವನ್ನು ಮಾರಿಯಾದರೂ ನಾನು ಅವರನ್ನು ಖರೀದಿಸುತ್ತೇನೆ ಎಂದು ಶಾರುಖ್ ಖಾನ್)ಹೇಳಿದ್ದರು. ವಾಸ್ತವವಾಗಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೂ ಧೋನಿ ಮೇಲಿನ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಜನರು ಅವರನ್ನು ಮೈದಾನದಲ್ಲಿ ನೋಡಲು ಬಯಸುತ್ತಿದ್ದಾರೆ. ಧೋನಿ ಒಬ್ಬ ಕ್ರಿಕೆಟಿಗನಾಗಿದ್ದು, ಬಾಲಿವುಡ್ ತಾರೆಯರೂ ಕೂಡ ಅವರ ಅಭಿಮಾನಿಗಳಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲದೆ ಧೀರ ಸೇನಾಧಿಕಾರಿಯೂ ಹೌದು. ಕಾಶ್ಮೀರ ಕಣಿವೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.

ಕೆಕೆಆರ್ ಎರಡು ಬಾರಿ ಐಪಿಎಲ್ ಗೆದ್ದಿದೆ:

ಕೆಕೆಆರ್ ತಂಡ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. 2012ರಲ್ಲಿ ಕೆಕೆಆರ್ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇದರ ನಂತರ, KKR 2014 ರಲ್ಲಿ ಅಂತಿಮ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಅನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಐಪಿಎಲ್ ಚಾಂಪಿಯನ್:

ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ಹೇಳುವುದಾದರೆ, ಈ ತಂಡವು 4 ಬಾರಿ ಐಪಿಎಲ್ ಪ್ರಶಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. 2010 ರಲ್ಲಿ ಮುಂಬೈ ಇಂಡಿಯನ್ಸ್ (MI) ಅನ್ನು ಸೋಲಿಸುವ ಮೂಲಕ CSK ಮೊದಲ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸತತ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, ಚೆನ್ನೈ ಸೂಪರ್ ಕಿಂಗ್ಸ್ 2018 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾವನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಕಾಶಕ್ಕೇರಿದ ತರಕಾರಿ ದರ: ಕೆ.ಜಿ. ಬದನೆಕಾಯಿ ₹ 200, ಹಸಿ ಮೆಣಸಿನಕಾಯಿಗೆ ₹ 150

Tue Dec 28 , 2021
ಹುಬ್ಬಳ್ಳಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಮವಾರದ ಸಂತೆಯಲ್ಲಿ ತರಕಾರಿ ಬೆಲೆ ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ. ಬದನೆಕಾಯಿ ಕೆ.ಜಿ.ಗೆ ₹ 200, ಹಸಿ ಮೆಣಸಿನಕಾಯಿ ₹ 150 ಹಾಗೂ ಬೆಂಡೆಕಾಯಿ ಬೆಲೆ ಕೆ.ಜಿ.ಗೆ ₹ 100ಕ್ಕೆ ಏರಿಕೆಯಾಗಿದೆ. ಕಳೆದ ವಾರ ಒಂದು ಕೆ.ಜಿ ಬದನೆಕಾಯಿ ಹಾಗೂ ಹಸಿ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ ತಲಾ ₹ 80-₹ 100 ಇತ್ತು. ಬೆಂಡೆಕಾಯಿ ₹ 60-₹ 70 ಇತ್ತು. ಆದರೆ ಈ ವಾರ […]

Advertisement

Wordpress Social Share Plugin powered by Ultimatelysocial