HEALTH TIPS:ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬಿಸಿ ನೀರು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ;

ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಇದು ಬಹುತೇಕರಿಗೆ ಗೊತ್ತು. ಕೊರೊನಾ ನಂತ್ರ ಬಹುತೇಕ ಎಲ್ಲರೂ ಬಿಸಿ ನೀರು ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಸೇವನೆ ಮಾಡುವುದು ಬಹಳ ಮುಖ್ಯ.

ಬಿಸಿ ನೀರನ್ನು ಬೆಳಿಗ್ಗೆ ಮಾತ್ರವಲ್ಲದೆ ರಾತ್ರಿಯೂ ಸೇವನೆ ಮಾಡಬೇಕು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.

ಬಿಸಿ ನೀರು ನಮ್ಮ ದೇಹದಲ್ಲಿರುವ ವಿಷ ಹೊರಗೆ ಹೋಗಲು ನೆರವಾಗುತ್ತದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ರಾತ್ರಿಯಲ್ಲಿ ಬಿಸಿ ನೀರನ್ನು ಕುಡಿಯುವುದ್ರಿಂದ ಉತ್ತಮ ನಿದ್ರೆ ಬರುತ್ತದೆ.

ತೂಕ ಇಳಿಸಲು ಸತತ ಪ್ರಯತ್ನ ನಡೆಸುತ್ತಿರುವ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವನೆ ಮಾಡ್ತಾರೆ. ಆದ್ರೆ ರಾತ್ರಿಯೂ ಅವರು ಬಿಸಿ ನೀರು ಸೇವನೆ ಮಾಡಿ ಮಲಗಬೇಕು. ಇದ್ರಿಂದ ತೂಕ ಇಳಿಕೆ ಸುಲಭವಾಗುತ್ತದೆ. ಬಿಸಿ ನೀರಿನಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಇಳಿಯುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇದು ಪ್ರಯೋಜನಕಾರಿ.

ಬಿಸಿ ನೀರು ಕುಡಿಯುವ ಮೂಲಕ ಮಾನಸಿಕ ಖಿನ್ನತೆಯನ್ನು ಓಡಿಸಬಹುದು.

ಬಿಸಿ ನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಗ್ಯಾಸ್ ಅಥವಾ ಅಸಿಡಿಟಿ ಕೂಡ ದೂರವಾಗುತ್ತದೆ.

ಇದ್ರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಬಿಸಿ ನೀರು ಇದನ್ನು ದೂರ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 ಯಮಹಾ FZ 25 ಭಾರತದಲ್ಲಿ ಬಿಡುಗಡೆ;

Mon Jan 24 , 2022
2022 ಯಮಹಾ ಎಫ್‌ಜೆಡ್ 25 ಮ್ಯಾಟ್ ಕಾಪರ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ಎರಡು ಹೊಸ ಬಣ್ಣದ ಯೋಜನೆಗಳನ್ನು ಪಡೆಯುತ್ತದೆ ಮತ್ತು ಇದು ಯಾಂತ್ರಿಕವಾಗಿ ಬದಲಾಗದೆ ಉಳಿದಿದೆ ಸೋರಿಕೆಯ ನಂತರ, ಯಮಹಾ ಮೋಟಾರ್ ಇಂಡಿಯಾ ಇಂದು ದೇಶೀಯ ಮಾರುಕಟ್ಟೆಯಲ್ಲಿ 2022 ಎಫ್‌ಜೆಡ್ 25 ಬಿಡುಗಡೆಯನ್ನು ಘೋಷಿಸಿದೆ ಮತ್ತು ಇದರ ಆರಂಭಿಕ ಬೆಲೆ ರೂ. . 1,38,800 ಮತ್ತು ಇದು ರೂ. FZS 25 ರೂಪಾಂತರಕ್ಕೆ 1,43,300 (ಎರಡೂ ಬೆಲೆಗಳು, ಎಕ್ಸ್ […]

Advertisement

Wordpress Social Share Plugin powered by Ultimatelysocial