ಪಾದಯಾತ್ರೆಯ ವಿರುದ್ಧ ನಾವು ಷಡ್ಯಂತ್ರ ನಡೆಸಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ !

ಮೇಕೆದಾಟು ಯೋಜನೆಯ ಉದ್ದೇಶವೇ ಜನರಿಗೆ ಅನುಕೂಲವಾಗಬೇಕು ಎನ್ನುವುದು . ಆದರೆ, ಕಾಂಗ್ರೆಸ್ಸಿಗರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆಗೆ ಲಾಭವಾಗುವುದಕ್ಕಿಂತ ತಮಗೆ ಲಾಭವಾಗಲಿ ಎನ್ನುವುದು  ಕಾಂಗ್ರೆಸ್ಸಿಗರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಎಂಬ ನಡಿಗೆಯನ್ನು ಮಾಡಿದರು. ಈ ವೇಳೆ ನೀರು ಹಿಡಿದು ಶಪಥ ಮಾಡಿ ವರ್ಷಕ್ಕೆ 10 ಸಾವಿರ ಕೋಟಿ ರು. ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು. ಐದು ವರ್ಷ ಇವರ ಪಕ್ಷ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಖರ್ಚು ಮಾಡಿದ್ದ ಕೇವಲ 7.5 ಸಾವಿರ ಕೋಟಿ ರು. ಮಾತ್ರ. ಕಾಂಗ್ರೆಸ್ಸಿಗರಿಗೆ ನೀರಾವರಿ ಯೋಜನೆ(Irrigation Project) ಬಗ್ಗೆ ಬದ್ಧತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೂಸ್ಟರ್ ಡೋಸ್ ಲಸಿಕೆ ಪಡೆದ ರಾಜ್ಯಪಾಲ ಗೆಹ್ಲೋಟ್...

Sat Jan 15 , 2022
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ಮೂರನೇ ಡೋಸ್  ಲಸಿಕೆ ತೆಗೆದುಕೊಂಡರು. ನಂತರ ಮಾತನಾಡಿದ ಅವರು ಕೊರೋನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳು ಅಗತ್ಯವಾಗಿ ಬೂಸ್ಟರ್ ಡೋಸ್ ಪಡೆಯುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿಯನ್ನು ಮಾಡಿಕೊಂಡರು.ಈ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸಚಿವ  ಡಾ .ಕೆ. ಸುಧಾಕರ್‌ ಉಪಸ್ತಿತರಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial