ಹೆಜ್ಜೇನು ದಾಳಿಗೆ 2 ಕೋಟಿಯ 2 ಕುದುರೆ ಸಾವು

ಹಣದ ವ್ಯವಹಾರ (Money) ಅಂದ್ರೆ ಅಲ್ಲಿ ಕೊಂಚ ಏರಿಳಿತ ಉಂಟಾಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಹಣ ಹಿಂದಿರುಗಿಸುವ ಸಮಯದಲ್ಲಿಯೂ ಹೆಚ್ಚು ಕಡಿಮೆ ಆಗುತ್ತದೆ. ಆದ್ರೆ ಸಾಲ (Loan) ಕೊಡೋದು ತಡವಾಯ್ತು ಅಂತ ಸಾಲಗಾರರ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ಬಾಲಕನನ್ನು ಅರಳಿ ಮರಕ್ಕೆ ಕಟ್ಟಿ ಕತ್ತು, ಕೈ-ಕಾಲುಗಳಿಗೆ ಹೊಡೆದಿದ್ದಾರೆ. ಬಾಲಕನ (boy) ಖಾಸಗಿ ಅಂಗಕ್ಕೂ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೊಪ್ಪಳದಲ್ಲಿ ತಂದೆ ಮಾಡಿದ ಸಾಲಕ್ಕೆ ಮಗನ ಮೇಲೆ ಹಲ್ಲೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ  ಹೂಸೂರಿನಲ್ಲಿ ಘಟನೆ ನಡೆದಿದ್ದು. 14 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.
ಕನಕರಾಯಪ್ಪ, ರಾಜೇಶ್ವರಿ ಸೇರಿ 6 ಜನರ ವಿರುದ್ಧ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. 14 ವರ್ಷದ ಬಾಲಕನನ್ನು ಗಿಡಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ ಕನಕರಾಯಪ್ಪ, ರಾಜೇಶ್ವರಿ ಎಂಬರು ಬಾಲಕನ ತಂದೆಗೆ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದರು. 30 ಸಾವಿರ ರೂಪಾಯಿ ಸಾಲ ಮರುಪಾವತಿಸಿದ್ದಾರೆ. 10 ಸಾವಿರ ರೂಪಾಯಿ ಅಸಲು ಮತ್ತು 4 ಸಾವಿರ ರೂಪಾಯಿ ಬಡ್ಡಿಯನ್ನು ಬಾಕಿ ಉಳಿಸಿಕೊಂಡಿದ್ದರು. ಸಾಲ ಮರುಪಾವತಿಸಲು ತಡ ಮಾಡಿದ್ದಕ್ಕೆ ಮಗನ ಮೇಲೆ ಹಲ್ಲೆ ನಡೆಸಲಾಗಿದೆ. 14 ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.ಜಿಲ್ಲೆಯ ಕುಣಿಗಲ್​​​ನಲ್ಲಿ ಹೆಜ್ಜೇನು ದಾಳಿಗೆ 2 ಗಂಡು ಕುದುರೆಗಳು ಸಾವನ್ನಪ್ಪಿವೆ. ಕುಣಿಗಲ್​​​ ಸ್ಟಡ್​​ ಫಾರಂನಲ್ಲಿ ಕುದುರೆಗಳನ್ನು ಮೇಯಲು ಬಿಟ್ಟಿದ್ದಾಗ ಹೆಜ್ಜೇನು ದಾಳಿ ಮಾಡಿದೆ.ಎರಡು ಕುದುರೆಗಳಿಗೆ ಚಿಕಿತ್ಸೆ ನೀಡಿದ್ರೂ ಫಲಕಾರಿಯಾಗದೇ ಸಾವನ್ನಪ್ಪಿವೆ. ಒಂದು ಕುದುರೆಯನ್ನು ಅಮೆರಿಕದಿಂದ ಹಾಗೂ ಇನ್ನೊಂದನ್ನು ಐರ್ಲೆಂಡ್​​ನಿಂದ 6 ವರ್ಷದ ಹಿಂದೆ ತರಲಾಗಿತ್ತು. ಒಂದೊಂದು ಕುದುರೆಯನ್ನ 1 ಕೋಟಿಗೆ 6 ವರ್ಷದ ಹಿಂದೆ ಖರೀದಿಸಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ (Saturday, January 7, 2023)

Sat Jan 7 , 2023
ಇಂದು ನಿಮ್ಮ ವಿಶ್ವಾಸ ಬೆಳೆಯುತ್ತದೆ ಮತ್ತು ಪ್ರಗತಿ ನಿಶ್ಚಿತವಾಗಿದೆ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವ ಯಾರಾದರೂ ಸಿಟ್ಟಾಗಬಹುದು. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ಮನೆಯಿಂದ ಹೊರಗೆ ವಾಸಿಸುವವರು, ಇಂದು ಅವರು ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಂಜೆಯ ವೇಳೆಯಲ್ಲಿ ಯಾವುದೇ ಉದ್ಯಾನವನ ಅಥವಾ ಏಕಾಂತ ಸ್ಥಳದಲ್ಲಿ ಸಮಯ […]

Advertisement

Wordpress Social Share Plugin powered by Ultimatelysocial