ಇಂದು ತಾಯ್ನಾಡಿಗೆ ಮರಳಿದ 628 ಭಾರತೀಯರು

ನವದೆಹಲಿ,ಮಾ.3- ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಮುಂದುವರೆದಿದ್ದು, ಇಂದು ಒಂದೇ ದಿನದಲ್ಲಿ 628 ಭಾರತಿಯರನ್ನು ರಕ್ಷಣೆ ಮಾಡಿ ಕರೆತರಲಾಗಿದೆ.ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ಸಿಲುಕಿ ಅಲ್ಲಿಂದ ತಪ್ಪಿಸಿಕೊಂಡು ರೊಮೆನಿಯಾ ಗಡಿಯಲ್ಲಿ ಆಶ್ರಯ ಪಡೆದಿದ್ದ 200 ಭಾರತೀಯರನ್ನು ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ.ರೊಮೆನಿಯಾದಿಂದ ಬಂದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.ಇನ್ನು ಹಂಗೇರಿಯಾದ ಬುಡಾಪೇಸ್ಟ್‍ನಿಂದ ಭಾರತೀಯ ವಾಯು ಸೇನೆಯ ಸಿ-17 ವಿಮಾನ 220 ಭಾರತೀಯರನ್ನು ಹೊತ್ತು ದೆಹಲಿಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್‍ಭಟ್ ತಾಯ್ನಾಡಿಗೆ ಬಂದ ಭಾರತೀಯರನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ಸ್ಥಳಗಳಿಗೆ ತೆರಳುವ ವ್ಯವಸ್ಥೆ ಮಾಡಿವೆ.ವಾಯು ಸೇನೆ ಸಿ-17 ಮೂರನೇ ವಿಮಾನ 208 ಭಾರತೀಯರನ್ನು ಪೋಲೆಂಡ್‍ನಿಂದ ಹೊರಟು ದೆಹಲಿ ಏರ್‍ಬೇಸ್‍ಗೆ ಬಂದಿದೆ. ಮೂರು ವಿಮಾನಗಳಲ್ಲಿ ಒಟ್ಟು 628 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶತಮಾನದ ಅತೀ ದೊಡ್ಡ ವಲಸೆ, ಉಕ್ರೇನ್‌ನಿಂದ ಹೊರಬಂದ 10 ಲಕ್ಷ ಮಂದಿ..!

Thu Mar 3 , 2022
  ಜಿನೀವಾ ಮಾ.3- ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಆರೇ ದಿನಗಳಲ್ಲಿ ಒಂದು ಮಿಲಿಯನ್ (10 ಲಕ್ಷ) ಜನರು ಉಕ್ರೇನ್ ದೇಶವನ್ನು ತೊರೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ವರದಿಮಾಡಿದ್ದು, ಇದು ಈ ಶತಮಾನದ ಅತೀ ದೊಡ್ಡ ವಲಸೆಯಾಗಿದೆ ಎಂದು ತಿಳಿಸಿದವಿಶ್ವ ಬ್ಯಾಂಕ್ ಎಣಿಕೆ 2020ರ ಪ್ರಕಾರ 44 ಮಿಲಿಯನ್ ಜನಸಂಖ್ಯೆಯಲ್ಲಿ 2%ಕ್ಕಿಂತ ಹೆಚ್ಚು ಜನ ಪಲಾಯನ ಮಾಡುತ್ತಿದ್ದು, ಸುಮಾರು 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು […]

Advertisement

Wordpress Social Share Plugin powered by Ultimatelysocial