ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು ರಾಜಕೀಯ ತಂತ್ರ-DKS

ಉಪಚುನಾವಣೆಯಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು, ಅವರ ರಾಜಕೀಯ ತಂತ್ರಗಾರಿಕೆ. ಅನುಭವಕ್ಕೆ ತಕ್ಕಂತೆ ಅವರು ತಂತ್ರಗಾರಿಕೆ ಮಾಡುತ್ತಾರೆ. ನಮ್ಮ ಪಕ್ಷದ ಸೂಚನೆ ಮೇರೆಗೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೆ. ಅದರ ಫಲ ಆ ಭಗವಂತ ನೋಡಿಕೊಳ್ಳಲಿ.ನಾವೇ ಅವರನ್ನ ಸಿಎಂ ಮಾಡಬೇಕು ಅಂತಾ ಹೋಗಿದ್ದು ನಿಜ. ಕೊನೆ ಘಳಿಗೆವರೆಗೂ ಬೆಂಬಲವಾಗಿ ನಿಂತಿದ್ದೆವು. ಮುಂದೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ ಎಂದ್ರು ಡಿ.ಕೆ.ಶಿ.ಬಿಜೆಪಿ ಸರಕಾರ ದಿನನಿತ್ಯ ಜನರ ಜೇಬಿಗೆ ಕನ್ನ ಹಾಕಲಾಗುತ್ತಿದೆ. ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ಬೊಮ್ಮಾಯಿ ಅವರು ಮಹದಾಯಿ ಕೆಲಸ ಆರಂಭಿಸುತ್ತಾರೆ, ಕಾವೇರಿಯ ಮೇಕೆದಾಟು ಯೋಜನೆ ಮಾಡುತ್ತಾರೆ, ಕೃಷ್ಣ ಯೋಜನೆಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅವರು ಈ ವಿಚಾರವಾಗಿ ಒಂದು ದಿನವೂ ಉಸಿರೇ ಎತ್ತುತ್ತಿಲ್ಲ. 25 ಸಂಸದರನ್ನ ಕರೆದುಕೊಂಡು ಹೋಗಿ ಪ್ರಧಾನಮಂತ್ರಿಗಳ ಮುಂದೆ ಕೂರಿಸಿ, ನಮ್ಮ ಯೋಜನೆಗಳಿಗೆ ಅನುಮತಿ ನೀಡಿ ಎಂದು ಪಟ್ಟು ಹಿಡಿಯಲಿ. ಸಣ್ಣ ರಾಜ್ಯ ಗೋವಾ ಮುಂದೆ 25 ಸಂಸದರು ಸುಮ್ಮನಿದ್ದಾರೆ.

ಜನ ಇವರಿಗೆ ಮತ ಹಾಕಿದ್ದು ಯಾಕೆ? ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ನ್ಯಾಯಾಲಯದಲ್ಲಿ ಮಹದಾಯಿ ತೀರ್ಮಾನ ಆಗಿದ್ದರೂ ಯೋಜನೆಗೆ ತಡ ಯಾಕೆ? ಬಿಜೆಪಿಯಿಂದ ಈ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ. 25 ಸಂಸದರು, ಜತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಇವರದೇ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಎಲ್ಲ ಕೆಲಸ ಮಾಡುತ್ತೇವೆ ಎಂದಿದ್ದರು. ಏನು ಮಾಡಿದ್ದಾರೆ? ಈ ಭಾಗದ ಜನ, ರಾಜ್ಯದ ರೈತರು ಇವರಿಗೆ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದು ಭಾವಿಸುತ್ತೇನೆ ಅಂತ ಡಿ.ಕೆ.ಶಿವಕುಮಾರ್‌ ಬಿಜೆಪಿ ವಿರುದ್ಧ ವಾಗ್ವಾದ ನಡಿಸಿದ್ದರು.ಅದೇನೆಆಗಲಿ ಈ ಉಪಚುನಾವಣೆ ಮಾತ್ರ ಕಾಂಗ್ರೆಸ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ ಇನ್ನು ಚುನಾವಣೆಯ ಬಿಸಿ ಮುಗಿಲುಮುಟ್ಟುತ್ತಿದ್ದು ಹಾನಗಲ್‌ ಮತ್ತು ಸಿಂದಗಿಯ ಆದೀ ಪತ್ಯ ಯಾರ ಪಾಲಾಗಲಿದೆ ಅಂತ ಕಾದುನೋಡ ಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಮಮತಾ ಬ್ಯಾನರ್ಜಿ

Thu Oct 7 , 2021
ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿಧಾನಸಭೆಯ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಜಗದೀಪ್ ಧಂಕರ್ ಅವರು ಪ್ರಮಾಣವಚನ ಬೋಧಿಸಿದರು. ಮಮತಾ ಅವರೊಂದಿಗೆ ಟಿಎಂಸಿಯ ಜಾಕೀರ್ ಹೊಸೈನ್ ಮತ್ತು ಅಮಿರುಲ್ ಇಸ್ಲಾಂ ಅವರೂ ಶಾಸಕರಾಗಿ ಪ್ರಮಾಣ ವಚನ ಪಡೆದರು. ಭವಾನಿಪುರ ಉಪಚುನಾವಣೆಯಲ್ಲಿ 58,835 ಮತಗಳ ಅಂತರದಿಂದ ಜಯಗಳಿಸಿದ ಬ್ಯಾನರ್ಜಿ, ಬಂಗಾಳಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಾರ್ಚ್-ಏಪ್ರಿಲ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಸ್ಪರ್ಧಿಸಿದ್ದರಾದರೂ, ತಮ್ಮ ಎದುರಾಳಿ […]

Advertisement

Wordpress Social Share Plugin powered by Ultimatelysocial