ಒಂದು ಕೋಟಿ ಹಣವನ್ನ ದರೋಡೆ ಮಾಡಿ ಪರಾರಿಯಾಗ್ತಿದ್ದ ಆರೋಪಿಗಳನ್ನ ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು!

ಕೇರಳ ಮೂಲದ ರಾಜೀವ,ವಿಷ್ಣುಲಾಲ್,ಸನಾಲ್,ಜಸೀನ್ ಸೇರಿ 10 ಆರೋಪಿಗಳು ಅಂದರ್.ಜೋಸೆಫ್ ಎಂಬವರು ತಮ್ಮ ಸಿಬ್ಬಂದಿಗೆ ಎರಡು ಕೆಜಿ ಚಿನ್ನಾಭರಣವನ್ನ ಕೊಟ್ಟು ಹುಬ್ಬಳ್ಳಿಗೆ ಕಳುಹಿಸಿದ್ದರು.ಫ್ರಾಂಕ್ಲಿನ್,ಮಣಿಕಂಠನದ,ಶಕ್ತಿವೇಲು,ದಿನೇಶ್,ಯೋಗೇಶ್ ಎಂಬರು ಎರಡು ಕೆಜಿ ಚಿನ್ನ ಹಿಡಿದು ಬಂದಿದ್ದರು.

ಕನ್ಯಾಕುಮಾರಿ ಬಳಿಯ ನಾಗರಕೋಯಿಲ್ ನಿಂದ ಬ್ರಿಜಾ ಕಾರಿನಲ್ಲಿ ಹುಬ್ಬಳ್ಳಿಗೆ ತೆರಳಿದ್ದರು.ಮಾರ್ಚ್ 8 ನೇ ತಾರೀಕು ಹುಬ್ಬಳ್ಳಿ ಗೋಲ್ಡ್ ತೆಗೆದುಕೊಂಡು ಹೋಗಿ ಗೋಲ್ಡನ್ನ ಸೇಲ್ ಮಾಡಿದ್ದರು.

ಚಿನ್ನ ಸೇಲಾಗಿ ಒಂದು ಕೋಟಿ ಹಣವನ್ನ ಬ್ಯಾಗ್ ನಲ್ಲಿಟ್ಟು ನಾಗರಕೋಯಿಲ್ ಗೆ ಹಿಂತಿರುಗುತ್ತಿದ್ದರು.ಈ ವೇಳೆ ಕಾರು ಮಾದನಾಯಕನಹಳ್ಳಿ ಬಳಿ ಬರ್ತಿದ್ದಂತೆ ಎರಡು ಕಾರಿನಲ್ಲಿ ಬಂದ ದರೋಡೆಕೋರರು ಬ್ರಿಜಾ ಕಾರಿಗೆ ಡಿಕ್ಕಿ ಹೊಡೆದಿದೆ.

ಬ್ರಿಜಾ ಕಾರಿನಲ್ಲಿದ್ದ ಒಂದು ಕೋಟಿ ರೂಪಾಯಿ ಯನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು 250 ಸಿಸಿ ಟಿವಿ ಫೂಟೇಜ್ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ‌.

ಆರೋಪಿಗಳನ್ನ ಕೇರಳದ ಎರ್ನಾಕುಲಂ ಬಳಿ ಬಂಧಿಸಿದ್ದಾರೆ.ಪ್ರಮುಖ ಆರೋಪಿ ಕೊಡಾಲಿ ಶ್ರೀಧರ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ.

ಪ್ರಮುಖ ಆರೋಪಿ ಕೊಡಾಲಿ ಶ್ರೀಧರನ ಮೇಲೆ ಒಟ್ಟು 16 ಪ್ರಕರಣ ಗಳು ದಾಖಲಾಗಿದ್ದಾವೆ.ಇದೀಗ ಆರೋಪಿಗಳನ್ನ ಬಂಧಿಸಿ 40 ಲಕ್ಷ ರೂ ಮೌಲ್ಯದ ಎರಡು ಕಾರು ಹಾಗೂ 10 ಲಕ್ಷ ನಗದನ್ನ ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉನ್ನತ ಶಿಕ್ಷಣ ಸಚಿವರೇ ಕೊರೊನಾ ರೂಲ್ಸ್ ಬ್ರೇಕ್!

Tue Apr 26 , 2022
ಮಾಸ್ಕ್ ಹಾಕದೇ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿದ ಸಚಿವ ಹಾಸನದ ಡೈರಿ ವೃತ್ತದಲ್ಲಿ ಅಶ್ವತ್ ನಾರಾಯಣ ರನ್ನು ಸ್ವಾಗತಿಸಿದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೂ ಕೂಡಾ ಮಾಸ್ಕ್ ಹಾಕದೇ ರೂಲ್ಸ್ ಬ್ರೇಕ್! ಸಾಮಾಜಿಕ ಅಂತರವನ್ನೂ ಮರೆತ ಸಚಿವರು – ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳಿಗಾಗಿ ಹಾಸನ ನಗರದಕ್ಕೆ ಆಗಮಿಸಿರುವ‌ ಅಶ್ವತ್ ನಾರಾಯಣ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial