ಕಬ್ಬಿನಗದ್ದೆಯಲ್ಲಿತ್ತು ಕೋಟಿ ಕೋಟಿ ದುಡ್ಡು! ಅದ್ಧೂರಿ ಮದುವೆಗಾಗಿ ಕ್ಲರ್ಕ್ ಮಾಡಿದ್ದೇನು ಗೊತ್ತಾ?

ಅದ್ಧೂರಿ ಮದುವೆ ಆಗಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಅನ್ನೇ ಸ್ನೇಹಿತರ ಜೊತೆಗೂಡಿ ಕ್ಲರ್ಕ್ 6 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ ಘಟನೆ ಬೆಳಗಾವಿಯ ಸವದತ್ತಿಯಲ್ಲಿ ನಡೆದಿದೆ.

 

ಸವದತ್ತಿ ಜಿಲ್ಲೆಯ ಮುರಗೋಡ್ ನ ಡಿಸಿಸಿ ಬ್ಯಾಂಕ್ ಕರ್ಕ್ ಬಸವರಾಜ್ ಹುಣಸಶೆಟ್ಟಿ ಹಾಗೂ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದು, ಬ್ಯಾಂಕ್ ನಿಂದ ದೋಚಿದ್ದ 6 ಕೋಟಿ ರೂ.

ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಬಸವರಾಜ್ ಹುಣಸಶೆಟ್ಟಿ ಮಾರ್ಚ್ 6ರಂದು ಸಂಜೆ 6 ಗಂಟೆ ಸುಮಾರಿಗೆ ಬ್ಯಾಂಕ್ ಮುಚ್ಚುವ ಸಮಯದಲ್ಲಿ ಸ್ನೇಹಿತರಿಂದ ಕಾರು ತರಿಸಿಕೊಂಡು ನಕಲಿ ಕೀ ಬಳಸಿ ಬ್ಯಾಂಕ್ ಲಾಕರ್ ನಲ್ಲಿದ್ದ 4.5 ಕೋಟಿ ರೂ. ನಗದು ಹಾಗೂ ಸುಮಾರು 3 ಕೆಜಿ ತೂಕದ 1.63 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ತನ್ನದೇ ಕಬ್ಬಿನ ಗದ್ದೆಯಲ್ಲಿ ಬಚ್ಚಿಟ್ಟಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ದಿನ ವಿಚಾರಣೆ ನಡೆಸಿದ್ದರು. ಅನುಮಾನದ ಮೇಲೆ ಬ್ಯಾಂಕ್ ದರೋಡೆ ಆದ ದಿನ ಹಾಗೂ ಹಿಂದಿನ ಎರಡು ದಿನಗಳ ಮೊಬೈಲ್ ಲೋಕೇಷನ್ ಗಮನಿಸಿದಾಗ ಬ್ಯಾಂಕ್ ಸುತ್ತಮುತ್ತ 2 ದಿನ ಅನುಮಾನಸ್ಪದವಾಗಿ ಓಡಾಡಿರುವುದು ಪತ್ತೆಯಾಗಿತ್ತು.

ಪೊಲೀಸರು ವಿಚಾರಣೆ ನಡೆಸಿದಾಗ ಏಪ್ರಿಲ್ 22ರಂದು ಮದುವೆ ನಿಗದಿಯಾಗಿದ್ದು, ಅದ್ಧೂರಿಯಾಗಿ ಮದುವೆ ಆಗಬೇಕು. ಬೇಗ ಶ್ರೀಮಂತ ಆಗಬೇಕು ಎಂಬ ಕಾರಣಕ್ಕೆ ಬ್ಯಾಂಕ್ ಹಣ ದೋಚಿದ್ದಾಗಿ ಬಸವರಾಜ ಒಪ್ಪಿಕೊಂಡಿದ್ದಾನೆ. ಅಲ್ಲದೇ ಕದ್ದ ಹಣದಲ್ಲಿ ಮುರಗೋಡ ಮಠಕ್ಕೆ ದಾನ ನೀಡಲು ಪಾಲು ಇಟ್ಟಿದ್ದ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

FOOTBALL:ಲಿಯೋ ಮೆಸ್ಸಿ-ನೇಮರ್ ಅಭಿಮಾನಿಗಳಿಂದ ಬೊಬ್ಬೆ ಹಾಕಿದರು, ಪ್ಯಾರಿಸ್ ಲೀಗ್ 1 ನಲ್ಲಿ 15 ಅಂಕಗಳಿಗೆ ಮುನ್ನಡೆಯನ್ನು ವಿಸ್ತರಿಸಿತು!

Mon Mar 14 , 2022
ಪ್ಯಾರಿಸ್ ಸೇಂಟ್ ಜರ್ಮೈನ್ ಅವರು ತಮ್ಮ ಲಿಗ್ 1 ​​ಮುನ್ನಡೆಯನ್ನು 15 ಪಾಯಿಂಟ್‌ಗಳಿಗೆ ವಿಸ್ತರಿಸಿದರು, ಅವರು ಭಾನುವಾರದಂದು ತವರಿನಲ್ಲಿ ಕೆಳಭಾಗದ ಗಿರೊಂಡಿನ್ಸ್ ಡಿ ಬೋರ್ಡೆಕ್ಸ್ ಅನ್ನು 3-0 ಗೋಲುಗಳಿಂದ ಸೋಲಿಸಿದರು, ಆದರೆ ಅವರ ಇತ್ತೀಚಿನ ಚಾಂಪಿಯನ್ಸ್ ಲೀಗ್ ವೈಫಲ್ಯವು ಪಾರ್ಕ್ ಡೆಸ್ ಪ್ರಿನ್ಸಸ್‌ನಲ್ಲಿ ಇನ್ನೂ ದೊಡ್ಡದಾಗಿದೆ. ಅಭಿಮಾನಿಗಳ ಅಬ್ಬರದಿಂದ ಪಾರಾದ ಕೈಲಿಯನ್ ಎಂಬಪ್ಪೆ, ನೇಮಾರ್ ಮತ್ತು ಲಿಯಾಂಡ್ರೊ ಪರೆಡೆಸ್ 28 ಪಂದ್ಯಗಳಿಂದ 65 ಪಾಯಿಂಟ್‌ಗಳೊಂದಿಗೆ ಪಿಎಸ್‌ಜಿಯನ್ನು ಗಳಿಸಲು ನಿವ್ವಳ ಬೆನ್ನೆಲುಬನ್ನು […]

Advertisement

Wordpress Social Share Plugin powered by Ultimatelysocial