ಸಿಡಿಲು ಸಹಿತ ಜೋರು ಮಳೆ

 

ಕಲಘಟಗಿ: ತಾಲ್ಲೂಕಿನಾದ್ಯಂತ ಭಾರಿ ಗಾಳಿ, ಸಿಡಿಲು ಸಹಿತ ಅಲ್ಲಲಿ ಆಲಿಕಲ್ಲು ಮಳೆ ಸುರಿದು ಗಿಡ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ರಸ್ತೆಯ ಪಕ್ಕದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಹುಲ್ಲಂಬಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಇಷ್ಟು ದಿನ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಈಗ ವರ್ಷದ ಮೊದಲ ಮಳೆ ಸುರಿದು ಎಲ್ಲ ಕಡೆ ತಂಪಾದ ವಾತಾವರಣ ಉಂಟಾಗಿದೆ.

ಹೋಳಿ ಹುಣ್ಣಿಮೆ ಅಂಗವಾಗಿ ಕಾಮದಹನ ಮಾಡಿದ ಮೇಲೆ ಮಳೆಯಾಗಿದ್ದರಿಂದ ಇದು ಕಾಮಣ್ಣನ ಕಣ್ಣೀರು ಎಂದು ಕೂಡಾ ಕರೆಯುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನಲ್ಲಿ ರಷ್ಯಾ ಮೇಲುಗೈ ಸಾಧಿಸುತ್ತದೆ ಎಂದು ಪುಟಿನ್ ಪ್ರತಿಜ್ಞೆ ಮಾಡಿದರು ಆದರೆ ಗ್ಲಿಚ್ ಟಿವಿಗೆ ಅಡ್ಡಿಯಾಗುತ್ತದೆ!

Sat Mar 19 , 2022
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ತುಂಬಿದ ಸಾಕರ್ ಕ್ರೀಡಾಂಗಣದ ಮೊದಲು ಉಕ್ರೇನ್ ಆಕ್ರಮಣವನ್ನು ಸಮರ್ಥಿಸಿಕೊಂಡರು ಆದರೆ ಕ್ರೆಮ್ಲಿನ್ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆ ಎಂದು ಹೇಳಿದ್ದರಿಂದ ರಾಜ್ಯ ದೂರದರ್ಶನದಲ್ಲಿ ಅವರ ಭಾಷಣದ ಪ್ರಸಾರವು ಅನಿರೀಕ್ಷಿತವಾಗಿ ಅಡಚಣೆಯಾಯಿತು. ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದ ಮಧ್ಯಭಾಗದಲ್ಲಿ ವೇದಿಕೆಯಲ್ಲಿ ಮಾತನಾಡಿದ ಪುಟಿನ್, ಹತ್ತಾರು ಸಾವಿರ ಜನರಿಗೆ ರಷ್ಯಾದ ಧ್ವಜಗಳನ್ನು ಬೀಸುತ್ತಾ “ರಷ್ಯಾ, ರಷ್ಯಾ, ರಷ್ಯಾ” ಎಂದು ಘೋಷಣೆ ಕೂಗುತ್ತಾ ಕ್ರೆಮ್ಲಿನ್‌ನ ಎಲ್ಲಾ ಗುರಿಗಳನ್ನು ಸಾಧಿಸಲಾಗುವುದು ಎಂದು […]

Advertisement

Wordpress Social Share Plugin powered by Ultimatelysocial