ಪ್ರತಿಪಕ್ಷಗಳ ನಡವಳಿಕೆಯಿಂದ ನೋವಾಗಿ ರಾಜೀನಾಮೆಗೆ ಮುಂದಾಗಿದ್ದೆ: ಸಭಾಪತಿ ಬಸವರಾಜ ಹೊರಟ್ಟಿ

ಪ್ರತಿಪಕ್ಷಗಳ ನಡವಳಿಕೆಯಿಂದ ನೋವಾಗಿ ರಾಜೀನಾಮೆಗೆ ಮುಂದಾಗಿದ್ದೆ: ಸಭಾಪತಿ ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಪರಿಷತ್‌ನಲ್ಲಿ ಶುಕ್ರವಾರ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು. ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನಲ್ಲಿ ನಿನ್ನೆ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು.

ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ. ಕಡೆಗೆ ಪ್ರತಿಪಕ್ಷಗಳ ನಾಯಕರು ನನ್ನನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು ಎಂದು ಹೇಳಿದ್ದಾರೆ.

ಸದನದಲ್ಲಿ 3 ಗಂಟೆಗೆ ಬೆಲ್ ಆಗಬೇಕಿತ್ತು. ಆದರೆ, ಮೂರೂವರೆಯಾದರೂ ಆಗಲಿಲ್ಲ. ನನಗೂ ಅತ್ತ ಲಕ್ಷ್ಯವಿರಲಿಲ್ಲ. ಮತಾಂತರ ನಿಷೇಧ ಮಸೂದೆಗೆ ಅವಕಾಶ ನೀಡಲು ಸಭಾಪತಿ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದವರು ಮನಸ್ಸಿಗೆ ಬಂದಂತೆ ಕೂಗಾಡಿದರು. ಇದರಿಂದ ನನಗೆ ನೋವಾಯಿತು. ಬಳಿಕ ಪ್ರತಿಪಕ್ಷದವರು ಕ್ಷಮೆ ಕೋರಿದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿಎಂಸಿ ಗೋವಾ ಘಟಕಕ್ಕೆ ಐವರು ನಾಯಕರ ರಾಜೀನಾಮೆ

Sat Dec 25 , 2021
ಪಣಜಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಟಿಎಂಸಿ ಪಕ್ಷವು “ಧರ್ಮದ ಆಧಾರದ ಮೇಲೆ ಗೋವಾವನ್ನು ವಿಭಜಿಸಲು” ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ನ(ಟಿಎಂಸಿ) ಗೋವಾ ಘಟಕಕ್ಕೆ ಸೇರ್ಪಡೆಗೊಂಡಿದ್ದ ಐವರು ರಾಜಕಾರಣಿಗಳು ಶುಕ್ರವಾರ ರಾಜೀನಾಮೆ ನೀಡಿದ್ದಾರೆ ಎಂದು ANI ವರದಿ ಮಾಡಿದೆ. ಈ ಗುಂಪಿನಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮಾಜಿ ಶಾಸಕ ಲಾವೂ ಮಾಮ್ಲೇದಾರ್ ಅವರು ಮೂರು ತಿಂಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ರಾಮ್ ಮಾಂಡ್ರೇಕರ್, ಕಿಶೋರ್ ಪರ್ವಾರ್, […]

Advertisement

Wordpress Social Share Plugin powered by Ultimatelysocial