ಹಠಾತ್ ಹೃದಯ ಸ್ತಂಭನದ ಪ್ರಮುಖ ಲಕ್ಷಣಗಳು ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹಠಾತ್ ಹೃದಯ ಸ್ತಂಭನದ ಪ್ರಮುಖ ಲಕ್ಷಣಗಳು ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಗರಿಷ್ಠ ಸಂಖ್ಯೆಯಲ್ಲಿ ಹೃದಯ ಸ್ತಂಭನದಿಂದ ಅನೇಕ ಮಂದಿ ಸಾಯುತ್ತಿದ್ದಾರೆ. ಹೃದ್ರೋಗಗಳಲ್ಲಿ, ಹೃದಯ ಸ್ತಂಭನವು ಅತ್ಯಂತ ಸಾಮಾನ್ಯವಾಗಿದೆ.
ಹೃದಯ ಸ್ತಂಭನದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಯುವಕರಲ್ಲೇ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.ಹಠಾತ್ ಹೃದಯ ಸ್ತಂಭನವು ಮಾರಣಾಂತಿಕ ಸ್ಥಿತಿಯಾಗಿದ್ದು, ಕೂಡಲೇ ಎಚ್ಚೆತ್ತುಕೊಳ್ಳದಿದ್ರೆ ಸಾವಿಗೆ ಕಾರಣವಾಗಬಹುದು. ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಎಂದು ಕರೆಯುತ್ತಾರೆ. ಇನ್ನೊಂದೆಡೆ ಹೃದಯಕ್ಕೆ ರಕ್ತ ಪೂರೈಕೆಯು ಅಡ್ಡಿಪಡಿಸಿದಾಗ ಹೃದಯಾಘಾತ ಸಂಭವಿಸುತ್ತದೆ.

ಹಠಾತ್ ಹೃದಯ ಸ್ತಂಭನದ ಲಕ್ಷಣಗಳು ಯಾವುವು.. ?

ಹಠಾತ್ ಹೃದಯ ಸ್ತಂಭನದ ಆರಂಭಿಕ ರೋಗಲಕ್ಷಣಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕಾದುದು ಅಗತ್ಯವಾಗಿದೆ. ಅವೆಲ್ಲಾ ಯಾವುವು ಅನ್ನೋದು ಇಲ್ಲಿವೆ..

ಪ್ರಜ್ಞಾಹೀನತೆಯ ಲಕ್ಷಣಗಳು: ವೈದ್ಯಕೀಯ ತಜ್ಞರ ಪ್ರಕಾರ, ಹಠಾತ್ ಹೃದಯ ಸ್ತಂಭನದ ಸಾಮಾನ್ಯ ಆರಂಭಿಕ ಲಕ್ಷಣವೆಂದರೆ ಪ್ರಜ್ಞಾಹೀನತೆ. ಆಗಾಗ್ಗೆ-ಸಂಭವಿಸುವ ತಲೆ ತಿರುಗುವಿಕೆಗಳಂತಹ ಸಮಸ್ಯೆಗಳು ಹೃದಯ ಬಡಿತಕ್ಕೆ ಸಂಬಂಧಿಸಿರಬಹುದು. ಇದು ಅಂತಿಮವಾಗಿ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ನಿರಂತರ ಎದೆನೋವು: ಹಠಾತ್ ಹೃದಯ ಸ್ತಂಭನದ ಮತ್ತೊಂದು ಪ್ರಮುಖ ಆರಂಭಿಕ ಲಕ್ಷಣವೆಂದ್ರೆ ಅದು ನಿರಂತರ ಎದೆ ನೋವು. ದೇಹವು ವಿಶ್ರಾಂತಿ ಮತ್ತು ಶ್ರಮದಿಂದ ಮುಕ್ತವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡದಿದ್ದರೂ ಸಹ ಇದು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ವೈದ್ಯರು ತಕ್ಷಣವೇ ಇಸಿಜಿ ಮಾಡುವುದನ್ನು ಶಿಫಾರಸು ಮಾಡುತ್ತಾರೆ.

ಉಸಿರಾಟದ ತೊಂದರೆ: ಸಾಮಾನ್ಯವಾಗಿ, ತೀವ್ರವಾದ ವ್ಯಾಯಾಮ ಅಥವಾ ವಾಕಿಂಗ್ ನಂತಹ ಶ್ರಮದಾಯಕ ಚಟುವಟಿಕೆಗಳನ್ನು ಮಾಡುವಾಗ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ಆದರೆ, ಇದು ವಿಶ್ರಾಂತಿ ತೆಗೆದುಕೊಂಡಿದ್ದಾಗಲೂ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲೈಂಗಿಕ ಆರೋಗ್ಯಕ್ಕೆ ಮದ್ದು ಈ ಅಣಬೆ!

Tue Dec 28 , 2021
ವಿವಿಧ ಆಹಾರ ಪದಾರ್ಥಗಳಲ್ಲಿ ಅಣಬೆಯನ್ನು ಸೇರಿಸಿ ಅದರ ರುಚಿಯನ್ನು ದ್ವಿಗುಣಗೊಳಿಸಲಾಗುವುದು. ಅಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಇನ್ನೂ ಹಲವು ಅಂಶಗಳಿವೆ. ಅಣಬೆಯಲ್ಲಿಯೇ ವಿವಿಧ ಬಗೆಗಳಿರುವುದರಿಂದ ಕೆಲವು ಆಹಾರ ಪದಾರ್ಥಗಳಿಗೆ ಆಯಾ ಅಣಬೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು.ಹೀಗಾಗಿಯೇ ಅಣಬೆ […]

Advertisement

Wordpress Social Share Plugin powered by Ultimatelysocial