ಭಾರತದಲ್ಲಿ ಪ್ಯಾನಾಸೊನಿಕ್‌ ಟಫ್ ಬುಕ್ S1 ಟ್ಯಾಬ್ಲೆಟ್ ಬಿಡುಗಡೆ!

ಭಾರತದಲ್ಲಿ ಪ್ಯಾನಾಸೊನಿಕ್‌ ಟಫ್ ಬುಕ್ S1 ಟ್ಯಾಬ್ಲೆಟ್ ಬಿಡುಗಡೆ! ವಿಶೇಷತೆ ಏನು?

ಪ್ಯಾನಾಸೋನಿಕ್‌ ಕಂಪೆನಿ ಟೆಕ್‌ ವಲಯದಲ್ಲಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೊನ್‌,ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಟ್ಯಾಬ್ಲೆಟ್‌ ಪ್ಯಾನಾಸೊನಿಕ್‌ ಟಫ್ ಬುಕ್ S1 ರಗಡ್ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಪರಿಚಯಿಸಿದೆ.

ಇನ್ನು ಈ ರಗಡ್‌ ಟ್ಯಾಬ್ಲೆಟ್‌ ಲಾಜಿಸ್ಟಿಕ್ಸ್, ಸಾರಿಗೆ, ಕ್ಷೇತ್ರ ಸೇವೆ ಮತ್ತು ಇತರ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡಿದೆ. ಇದು ಆಂಡ್ರಾಯ್ಡ್‌ ಎಂಟರ್‌ಪ್ರೈಸ್‌ನೊಂದಿಗೆ ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಪ್ಯಾನಾಸೋನಿಕ್‌
 ಹೌದು, ಪ್ಯಾನಾಸೋನಿಕ್‌ ಕಂಪೆನಿ ಹೊಸ ಪ್ಯಾನಾಸೊನಿಕ್‌ ಟಫ್ ಬುಕ್ S1 ರಗಡ್ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಇದು ಅಪ್ಲಿಕೇಶನ್ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವ್ಯವಹಾರಗಳಿಗೆ ನಿರ್ವಹಣೆಯನ್ನು ಹೆಚ್ಚಿಸುತ್ತದೆ ಎಂದು ಹೆಳಲಾಗುತ್ತದೆ. ಜೊತೆಗೆ ಈ ಟ್ಯಾಬ್ಲೆಟ್‌ ಎರಡು ಬ್ಯಾಟರಿ ಗಾತ್ರದ ಆಯ್ಕೆಗಳೊಂದಿಗೆ ಸಂಯೋಜಿತ ಬಾರ್‌ಕೋಡ್ ರೀಡರ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ಲೆಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಹೇಗಿದೆ?

ಪ್ಯಾನಾಸೋನಿಕ್ ಟಫ್‌ಬುಕ್ S1 800×1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 7 ಇಂಚಿನ WXGA IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೊರಾಂಗಣದಲ್ಲಿ ವೀಕ್ಷಿಸಲು ಸುಲಭವಾಗಿದೆ. ಅಲ್ಲದೆ ಈ ಟ್ಯಾಬ್ಲೆಟ್‌ ಅನ್ನು ಕೈಗವಸುಗಳು ಅಥವಾ ಹೆಚ್ಚುವರಿ ನಿಷ್ಕ್ರಿಯ ಪೆನ್‌ನೊಂದಿಗೆ ಬಳಸಬಹುದು ಎಂದು ಹೇಳಲಾಗಿದೆ. ಜೊತೆಗೆ ಪ್ಯಾನಾಸೋನಿಕ್ ಟ್ಯಾಬ್ಲೆಟ್ ಡ್ರಾಪ್ ರೆಸಿಸ್ಟೆಂಟ್ 20 ರಿಂದ 50 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಒನ್‌ಪ್ಲಸ್‌ ಎಂಟನೇ ವಾರ್ಷಿಕೋತ್ಸವ

Tue Dec 21 , 2021
ಭಾರತದ ಟೆಕ್‌ ವಲಯದಲ್ಲಿ ಒನ್‌ಪ್ಲಸ್‌ ಕಂಪೆನಿ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸದ್ಯ ಒನ್‌ಪ್ಲಸ್‌ ಬ್ರ್ಯಾಂಡ್ ಭಾರತದಲ್ಲಿ ತನ್ನ ಎಂಟು ವರ್ಷಗಳನ್ನು ಪೂರೈಸಿದೆ. ಇನ್ನು ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಆಡಿಯೊ ಆಕ್ಸಿಸರಿಸ್‌ಗಳು ಸೇರಿದಂತೆ ಅನೇಕ ಪ್ರಾಡಕ್ಟ್‌ಗಳನ್ನು ಪರಿಚಯಿಸಿದೆ. ಇನ್ನು ಒನ್‌ಪ್ಲಸ್‌ ತನ್ನ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಹೌದು, ಒನ್‌ಪ್ಲಸ್‌ ಕಂಪೆನಿ […]

Advertisement

Wordpress Social Share Plugin powered by Ultimatelysocial