ಕೊಡಗಿನಲ್ಲಿ ಎ. ಮಂಜು ಪುತ್ರನಿಗೆ ಮುಖಭಂಗ

ಕೊಡಗಿನಲ್ಲಿ ಎ. ಮಂಜು ಪುತ್ರನಿಗೆ ಮುಖಭಂಗ

ಇಂದು ವಿಧಾನಪರಿಷತ್ 25 ಸ್ಥಾನಗಳ ಫಲಿತಾಂಶ ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಕೊಡಗಿನಲ್ಲಿ ಬಿಜೆಪಿ ಮೊದಲ ಖಾತೆ ತೆರೆದಿದೆ. ಕೊಡಗು ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎ.

ಮಂಜು ಪುತ್ರ ಕೆ. ಮಂಥರ್ ವಿರುದ್ಧ ಸುಜಾ ಕುಶಾಲಪ್ಪ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೊಡಗು ಕ್ಷೇತ್ರದಲ್ಲಿ 1229 ಮತ ಚಲಾವಣೆಯಾಗಿತ್ತು.

ಕೆ. ಮಂಥರ್, ಮಾಜಿ ಸಚಿವ ಎ. ಮಂಜು ಪುತ್ರನಾಗಿದ್ದು, ಎ. ಮಂಜು ಅವರು ತಾವು ಬಿಜೆಪಿಯಲ್ಲಿದ್ದುಕೊಂಡೇ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಪರಿಷತ್ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಿ ಬಳಿಕ ನಿಧಾನವಾಗಿ ಮತ್ತೆ ಕಾಂಗ್ರೆಸ್ ನತ್ತ ಸರಿಯಲು ಮಂಜು ಯತ್ನಿಸಿದ್ದರು ಎನ್ನಲಾಗಿದೆ. ಆದರೆ ಇದೀಗ ಮಂಥರ್ ಗೌಡ ಸೋಲನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಹಾಗಾಗಿ ಆರಂಭದಲ್ಲಿಯೇ ಮುಖಭಂಗವಾದಂತಾಗಿದೆ

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಆಸಕ್ತ ಜನರಿಗೆ ಸೇವೆ ಸಲ್ಲಿಸುವುದೇ ಜಯ ಕರ್ನಾಟಕದ ಕುಟುಂಬದ ಕಾಯಕ: ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ

Fri Dec 17 , 2021
ಕೆ ಆರ್ ಪೇಟೆ ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮತ್ತು ಪದಾಧಿಕಾರಿಗಳು ನೇತೃತ್ವದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ ಖಾಸಿಂಖಾನ್ ಸಮುದಾಯ ಭವನ ಪಕ್ಕ ಆವರಣದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ತಾಲೂಕಿನ ಹೆಸರಾಂತ ಸೈ ಡ್ಯಾನ್ಸ್ ಸ್ಕೂಲ್ ಮಕ್ಕಳು,ಸನ್ನಿ ಡ್ಯಾನ್ಸ್ ಸ್ಕೂಲ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಮುಖಾಂತರ ಚಾಲನೆ ನೀಡಿ,ಕೊರೋನಾ ವಾರಿಯರ್ಸ್ ಹಾಗೂ ಗಣ್ಯರಿಂದ,ಮತ್ತು ರಾಜ್ಯ ಹಾಗೂ ತಾಲೂಕು ಮಟ್ಟದ ಜಯಕರ್ನಾಟಕ ಕುಟುಂಬದ […]

Advertisement

Wordpress Social Share Plugin powered by Ultimatelysocial