ಸುಶ್ಮಿತಾ ಸೇನ್ ಹಾಗೂ :ಲಲಿತ್ ಮೋದಿ ಪ್ರೇಮಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಕಳೆದ ಕೆಲವು ದಿನಗಳಿಂದ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಪ್ರೇಮಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಉದ್ಯಮಿ ಲಲಿತ್ ಮೋದಿ ತನ್ನ ಟ್ವಿಟರ್ ಖಾತೆಯಲ್ಲಿ ಸುಶ್ಮಿತಾ ಸೇನ್ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿದ್ದರು. ಅಲ್ಲಿಂದ ಈ ಜೋಡಿ ಬಗ್ಗೆ ಚರ್ಚೆಯಾಗುತ್ತಲೇ ಇದೆ.

ಇತ್ತ ಸುಶ್ಮಿತಾ ಸೇನ್ “ಮದುವೆನೂ ಇಲ್ಲ.. ರಿಂಗೂ ಇಲ್ಲ” ಎಂದು ಅಂತ ಪರೋಕ್ಷವಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್‌ ಮಾಡಿದ್ದು ಕೂಡ ಹಲವು ಚರ್ಚೆಗಳಿಗೆ ಗ್ರಾಸವಾಗಿತ್ತು. ಆದರೆ, ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಇಬ್ಬರೂ ಡೇಟ್ ಮಾಡಿದ ವಿಷಯವಂತೂ ಹಲ್‌ಚಲ್ ಎಬ್ಬಿಸಿದೆ.

ಇದೇ ವೇಳೆ ಮಾಜಿ ಐಪಿಎಲ್‌ ಚೇರ್ಮನ್ ಲಲಿತ್ ಮೋದಿ ಆಸ್ತಿ ಕಡೆಗೂ ವರದಿಯೊಂದು ಹೊರಬದ್ದಿದೆ. ಹಣ ವಂಚನೆ ಆರೋಪದ ಮೇರೆಗೆ ಲಲಿತ್ ಮೋದಿ ಲಂಡನ್‌ಗೆ ಪಲಾಯನ ಮಾಡಿದ್ದರೂ, ಅವರ ಆಸ್ತಿ ಹಾಗೂ ಬ್ಯುಸಿನೆಸ್‌ ಬಗ್ಗೆ ಚರ್ಚೆ ನಡೆಯುವುದಕ್ಕೆ ಶುರುವಾಗಿದೆ.

ಲಲಿತ್ ಮೋದಿ ಕಳೆದೊಂದು ದಶಕದಿಂದ ಏನು ಮಾಡುತ್ತಿದ್ದಾರೆ ಅನ್ನೋ ಸುಳಿವಿರಲಿಲ್ಲ. ಸುಶ್ಮಿತಾ ಸೇನ್‌ ಜೊತೆ ಮತ್ತೆ ಪ್ರತ್ಯಕ್ಷ ಆದಾಗಲೇ ಮತ್ತೆ ಲಲಿತ್ ಮೋದಿ ಹೆಸರು ಚಾಲನೆಗೆ ಬಂದಿದೆ. ಅಂದ್ಹಾಗೆ ಭಾರತಕ್ಕೆ ಐಪಿಎಲ್ ಮಾದರಿಯನ್ನು ಪರಿಚಯಿಸಿದ್ದೇ ಲಲಿತ್ ಮೋದಿ. ಈಗ ಇದು ವಿಶ್ವದ ಎರಡನೇ ಅತೀ ಹೆಚ್ಚು ಗಳಿಕೆ ಕಾಣುವ ಆಟವಾಗಿದೆ. ಪ್ರತಿ ಪಂದ್ಯದಿಂದ 117 ಕೋಟಿ ರೂ. ಹಣ ಹರಿದು ಬರುತ್ತಿದೆ. ಎಲ್ಲರಿಗೂ ಮೋದಿ ಕೇವಲ ಐಪಿಎಲ್‌ನಿಂದ ಮಾತ್ರ ಪರಿಚಯ. ಆದರೆ, ಈತ ಹುಟ್ಟು ಶ್ರೀಮಂತ.

ಲಲಿತ್ ಮೋದಿ ಆಸ್ತಿ ಎಷ್ಟು?

ಲಲಿತ್ ಮೋದಿ ಸದ್ಯಕ್ಕೆ ಲಂಡನ್‌ನಲ್ಲಿ ವಾಸವಿದ್ದಾರೆ. ಐದು ಅಂತಸ್ತಿನ 7 ಸಾವಿರ ಚದರ ಅಡಿಯ ಭವ್ಯ ಬಂಗಲೆಯಲ್ಲಿ ಲಲಿತ್ ಮೋದಿ ವಾಸವಿದ್ದಾರೆ. ಈ ಮನೆಯೊಳಗೆ ಸುಮಾರು 14 ಕೋಣೆಗಳಿವೆ. ಜೊತೆ ಕ್ರಿಕೆಟ್‌ನಿಂದ ಸಂಪಾದನೆ ಮಾಡಿದ್ದು ಹಾಗೂ ಹಲವು ಉದ್ಯಮಗಳನ್ನು ನಡೆಸುತ್ತಿರುವ ಲಲಿತ್ ಮೋದಿಯ ಒಟ್ಟು ಆಸ್ತಿ 570 ಮಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ, ಭಾರತದ ರೂಪಾಯಿಯಲ್ಲಿ 4555 ಕೋಟಿ ಎಂದು ಆಜ್‌ತಕ್ ವರದಿ ಮಾಡಿದೆ.

ಫ್ಯಾಮಿಲಿ ಬ್ಯುಸಿನೆಸ್ 12000 ಕೋಟಿ ರೂ.

ಮೋದಿ ಎಂಟರ್‌ಪ್ರೈಸಸ್‌ ಅನ್ನು ಲಲಿತ್ ಮೋದಿ ತಂದೆ ಕೆಕೆ ಮೋದಿ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು. ಫ್ಯಾಮಿಲಿ ಬ್ಯುಸಿನೆಸ್ ಅನ್ನು ಬೇರೆ ಬೇರೆ ಕಡೆ ಬೆಳೆಸಿದ್ದರು. ಅದು ಈಗ ಆರ್ಗೋ, ಕೆಮಿಕಲ್ಸ್, ಪಾನ್ ಮಸಾಲ, ತಂಬಾಕು, ಶಿಕ್ಷಣ, ಮನರಂಜನೆ, ಫ್ಯಾಷನ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ವ್ಯಾಪಿಸಿದೆ. ಆತ್‌ ತಕ್ ವರದಿಯ ಪ್ರಕಾರ, ಮೋದಿ ಎಂಟರ್‌ಪ್ರೈಸಸ್ ಆಸ್ತಿಯ ಮೊತ್ತ ಸುಮಾರು 1.5 ಬಿಲಿಯನ್ ಡಾಲರ್ ಅಂದರೆ, 12 ಸಾವಿರ ಕೋಟಿ ರೂ. ಎನ್ನಲಾಗಿದೆ.

ಲಲಿತ್ ಮೋದಿ ಕೈಯಲ್ಲಿ ಹಲವು ಕಂಪನಿ

ಲಲಿತ್ ಮೋದಿಯ ಮೋದಿ ಎಂಟರ್‌ಪ್ರೈಸ್ ಹಲವು ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿದೆ. ಮೋದಿ ಕೇರ್, ಇಂಡೋಫಿಲ್ ಇಂಡಸ್ಟ್ರೀಸ್ ಲಿಮಿಟೆಡ್, ರಾಕ್‌ಫೋರ್ಟ್ ವಿಸ್ಕಿ, ಪಾನ್ ವಿಲಾಸ್ ಪಾನ್ ಮಸಾಲ,24 ಸೆವೆನ್ ರಿಟೈಲ್ ಸ್ಟೋರ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿವೆ. ಇನ್ನೊಂದು ಕಡೆ ದೆಹಲಿಯಲ್ಲಿ ಈಗೋ ಥೈ, ಈಗೊ ಇಟಾಲಿಯನ್, ಈಗೋ 33 ರೆಸ್ಟೋರೆಂಟ್‌ಗಳು ಕೂಡ ಇವೆ. ಹಾಗೇ ಮೋದಿ ಕಂಪನಿಗಳು ಅರಬ್ ದೇಶಗಳು, ಆಫ್ರಿಕಾ ಹಾಗೂ ಯುರೋಪ್‌ ದೇಶಗಳಲ್ಲೂ ಬ್ಯುಸಿನೆಸ್ ಮಾಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಟ್ವಿಟ್ಟರ್‌ನಲ್ಲಿ ಕೆಲವು ಟ್ರೋಲ್ ಪಡೆಗಳ ಬೆಂಬದೊಂದಿಗೆ ಹಲವರೊಡನೆ ಜಗಳಕ್ಕಿಳಿದಿರುವ ವಿವೇಕ್

Sun Jul 17 , 2022
  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಂದೆಂದಿಗಿಂತಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿಬಿಟ್ಟಿದ್ದಾರೆ. ಟ್ವಿಟ್ಟರ್‌ನಲ್ಲಿ ಕೆಲವು ಟ್ರೋಲ್ ಪಡೆಗಳ ಬೆಂಬದೊಂದಿಗೆ ಹಲವರೊಡನೆ ಈಗಾಗಲೇ ಜಗಳಕ್ಕಿಳಿದಿರುವ ವಿವೇಕ್ ಅಗ್ನಿಹೋತ್ರಿ, ಶಶಿ ತರೂರ್, ಅನುಪಮಾ ಚೋಪ್ರಾ, ಕೆಲವು ಮಾಜಿ ಐಎಎಸ್ ಅಧಿಕಾರಿಗಳು ಇನ್ನು ಕೆಲವರೊಡನೆ ಟ್ವಿಟ್ಟರ್‌ನಲ್ಲಿ ಜಗಳವಾಡಿದ್ದಾರೆ. ಕೆಲವು ದಿನಗಳ ಹಿಂದೆ ವಿವೇಕ್ ಅಗ್ನಿಹೋತ್ರಿ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸೇರಿದಂತೆ ಬಾಲಿವುಡ್‌ನ ಇತರ […]

Advertisement

Wordpress Social Share Plugin powered by Ultimatelysocial