HOME TIPS:ಹೊಳೆಯುವ ದಂತಪಂಕ್ತಿ ಮನೆ ಸಲಹೆಗಳು;

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. ಎಷ್ಟೋ ಮಂದಿ ತಮ್ಮ ಹಳದಿ ಹಲ್ಲುಗಳಿಂದ ಕಿರಿಕಿರಿ ಅನುಭವಿಸ್ತಾರೆ, ಅವುಗಳನ್ನು ಬೆಳ್ಳಗಾಗಿಸೋಕೆ ವೈದ್ಯರ ಬಳಿ ದೌಡಾಯಿಸ್ತಾರೆ.

ಆದ್ರೆ ಮನೆಯಲ್ಲೇ ನೀವು ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸಿಕೊಳ್ಳಬಹುದು. ಅದಕ್ಕೆ ಬೇಕಾಗೋದು ಎರಡೇ ಸಾಮಗ್ರಿ, ನಿಂಬೆ ಹಣ್ಣಿನ ಸಿಪ್ಪೆ ಮತ್ತು ತೆಂಗಿನ ಎಣ್ಣೆ.

ರಾತ್ರಿ ಮಲಗುವ ಮುನ್ನ ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಮೂಲೆ ಮೂಲೆಯಲ್ಲೂ ನಿಂಬೆ ಸಿಬ್ಬೆಯನ್ನು ಹಾಕಿ ಉಜ್ಜಿದ್ರೆ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ. ಅಷ್ಟೇ ಅಲ್ಲ ನಿಂಬೆ ಹಣ್ಣಿನಲ್ಲಿ ಸಿ ಜೀವಸತ್ವ ಇರುವುದರಿಂದ ಅದು ನಿಮ್ಮ ದಂತಪಂಕ್ತಿ ಹೊಳೆಯುವಂತೆ ಮಾಡುತ್ತದೆ.

ಇನ್ನು ತೆಂಗಿನ ಎಣ್ಣೆಯಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಬೆಳಗ್ಗೆ ಎದ್ದ ತಕ್ಷಣ ಎರಡು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ, ನುಂಗಬೇಡಿ. ಸುಮಾರು 10 ನಿಮಿಷ ಎಣ್ಣೆ ನಿಮ್ಮ ಬಾಯಲ್ಲೇ ಇರಲಿ. ಹಲ್ಲು ಮತ್ತು ವಸಡಿನ ಮೂಲೆ ಮೂಲೆಗೂ ಎಣ್ಣೆಯ ಸ್ಪರ್ಷವಾಗಬೇಕು. ಇದರಿಂದ ನಿಮ್ಮ ಹಲ್ಲುಗಳಲ್ಲಿರುವ, ಬಾಯಿಯಲ್ಲಿರುವ ಕೀಟಾಣುಗಳೆಲ್ಲ ನಾಶವಾಗಿ ಹಲ್ಲು ಹುಳುಕಾಗುವುದಿಲ್ಲ. ಹೊಳಪು ಕೂಡ ಸಿಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಂದೆ ವಿಧಿವಶ

Sat Jan 29 , 2022
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಂದೆ ನಿಧನರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ, ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. ಮೊದಲ ಬಾರಿಗೆ ಅಪ್ಪನಿಲ್ಲದೆ, ಲೋಕವನ್ನು ನಾನೆದುರಿಸಬೇಕಾಗಿದೆ.ಓಂಶಾಂತಿ ಅಣ್ಣ ಎಂದು ಬರೆದುಕೊಂಡಿದ್ದಾರೆ.ಸಿ.ಟಿ. ರವಿ ಅವರ ತಂದೆ ತಿಮ್ಮೇಗೌಡ(92) ವಯೋ ಸಹಜ ಅನಾರೋಗ್ಯದಿಂದಾಗಿ ಇಂದು ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ […]

Advertisement

Wordpress Social Share Plugin powered by Ultimatelysocial