ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ:

 

ಬೆಂಗಳೂರು: ಮೇಲ್ಮನೆ ಟಿಕೆಟ್ ವಿಚಾರದ ಬಗ್ಗೆ ಪಕ್ಷದ ಅಧ್ಯಕ್ಷರು, ವಿಧಾನಸಭೆಯ ವಿಪಕ್ಷ ನಾಯಕರ ಜೊತೆ ಚರ್ಚೆ ಮಾಡಿರುತ್ತಾರೆ. ಅವರಿಗೆ ಅದರ ಬಗ್ಗೆ ಗೊತ್ತಿರುತ್ತದೆ. ನನಗೆ ಅದರ ಬಗ್ಗೆ ಯಾವುದೂ ಗೊತ್ತಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.

ಎಸ್.ಆರ್.ಪಾಟೀಲ್ ಅವರಿಗೆ ಮೇಲ್ಮನೆ ಟಿಕೆಟ್ ನೀಡಲು ವಿರೋಧ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ವಿರೋಧ ಮಾಡುವ ಬಗ್ಗೆ ಪ್ರಶ್ನೆ ಉದ್ಬವಿಸುವುದಿಲ್ಲ.

ಈ ಬಗ್ಗೆ ಸಭೆಗೆ ನನ್ನನ್ನು ಕರೆದು‌ ಚರ್ಚೆಯನ್ನೂ‌ ಮಾಡಿಲ್ಲ. ನಾನು ಪರವೂ ಇಲ್ಲ, ವಿರೋಧವೂ ಇಲ್ಲ ನಾನ್ಯಾಕೆ ಅವರನ್ನ ವಿರೋಧ ಮಾಡಲಿ ಎಂದರು.

ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ನಾರಾಯಣ ಗುರು, ಬಸವಣ್ಣ ಆದರ್ಶಪ್ರಾಯರು. ಮುಂದಿನ ಪೀಳಿಗೆಗೆ ಅವರ ತತ್ವಗಳ ಮೌಲ್ಯ ತಿಳಿಸಬೇಕು. ಪಠ್ಯದಲ್ಲಿ ಆರ್ ಎಸ್‌ಎಸ್ ತತ್ವ ಸೇರಿಸುವುದು ಸರಿಯಲ್ಲ. ನಾರಾಯಣ ಗುರು, ಪೆರಿಯಾರ್, ಭಗತ್ ಸಿಂಗ್ ಪಠ್ಯ ಇರಲಿ. ಅವರ ತತ್ವಗಳನ್ನು ಮಕ್ಕಳಿಗೆ ತಿಳಿಸಲಿ. ಈ ರೀತಿ ಆರ್ ಎಸ್‌ಎಸ್ ಸಿದ್ಧಾಂತ ಹೇರುವುದು ಸರಿಯಲ್ಲ. ಬಿಜೆಪಿಯವರು ಇದನ್ನೇ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್​ಟಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಬದ್ಧ: ತಿಪ್ಪರಾಜು ಹವಾಲ್ದಾರ್!

Mon May 23 , 2022
ಬೆಂಗಳೂರು: ಪರಿಶಿಷ್ಟ ಪಂಗಡ (ಎಸ್​ಟಿ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷರೂ ಆದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪರಾಜು ಹವಾಲ್ದಾರ್, ಎಸ್​ಟಿ ಮೀಸಲು ಪ್ರಮಾಣ ಶೇ.7.5.ಕ್ಕೆ ಏರಿಸಲು ಒತ್ತಾಯಿಸಿ […]

Advertisement

Wordpress Social Share Plugin powered by Ultimatelysocial