ಮಹೇಶ್ ಬಾಬು, ನಿತಿನ್, ಮೀನಾರಲ್ಲಿ ಸೋಂಕು:ಕೊರೋನಾ;

Hyderabad: 2022 ಹೊಸ ವರ್ಷ ತೆಲುಗು ಚಿತ್ರ ರಂಗಕ್ಕೆ ಆರಂಭದಲ್ಲೇ ಶಾಕ್ ನೀಡುತ್ತಿದೆ. ಕೊರೊನಾ ಪ್ರಪಂಚಾದ್ಯಂತ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗ ತೆಲುಗು ಚಿತ್ರರಂಗದ ದಿಗ್ಗಜರನ್ನ ಬಿಟ್ಟು ಬಿಡದಂತೆ ಆಕ್ರಮಿಸುತ್ತಿದೆ.

ನೆನ್ನೆಯಷ್ಟೆ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಕೊವಿಡ್ ಪಾಸಿಟೀವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರು ಟ್ಟಿಟರ್ ನಲ್ಲಿ ಪೋಸ್ಟ್ ಒಂದನ್ನ ಹಾಕಿ ನನಗೆ ಕೊರೋನ ಪಾಸಿಟೀವ್ ಆಗಿದ್ದೂ ನಾನು ಹೋಂ ಐಸೋಲೇಷನ್ ನಲ್ಲಿದ್ದೇನೆ. ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿರುವವರು ಮಂಜಾಗೃತ ಕ್ರಮವಾಗಿ ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

ಇದೀಗ ಹೊಸದಾಗಿ ದಕ್ಷಿಣ ಭಾರತದ ಖ್ಯಾತ ನಟಿ ಮೀನ. ಹೊಸ ವರ್ಷಕ್ಕೆ ನಮ್ಮ ಮನೆಗೆ ಹೊಸ ಅತಿಥಿ ಬಂದಿದ್ದೂ ನಮ್ಮ ಇಡೀ ಕುಟುಂಬವನ್ನ ಇಷ್ಟ ಪಟ್ಟು ಆತಿಥ್ಯ ಪಡೆಯಲು ಬಂದಿದೆ . ಆದರೆ ನಾವು ಇದನ್ನ ತುಂಬಾ ದಿನ ನಮ್ಮ ಮನೆಯಲ್ಲಿ ಇರಿಸಿಕೊಳ್ಳುವುದಿಲ್ಲ ಬೇಗ ವಾಪಾಸ್ ಕಳಿಸುತ್ತೇವೆ. ಮತ್ತು ನೀವು ಕೊರೊನಾ ವಿಷಯದಲ್ಲಿ ತುಂಬ ಜವಾಬ್ದಾರಿಯುತವಾಗಿರಿ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇನ್ನೂ ಟಾಲಿವುಡ್ ಮತ್ತೊಬ್ಬ ನಟ ನಿತಿನ್ ಕೂಡ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಒಂದನ್ನ ಹಾಕಿ ತನ್ನ ಪತ್ನಿಗೆ ಕೊರೊನಾ ಪಾಸಿಟೀವ್ ಆಗಿದ್ದು ಇಂದು ಆಕೆಯ ಜನ್ಮದಿನ. ಜೀವನದಲ್ಲಿ ಇದೇ ಮೊದಲಬಾರಿಗೆ ನೆಗೆಟೀವ್ ವರಿಯಾಗಲಿ ಎಂದು ಕೋರಿಕೊಳ್ಳುತ್ತಿದ್ದೇನೆ ಎಂದು. ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SS ರಾಜಮೌಳಿಗೆ ಹೊಸ ತಲೆನೋವು: ''RRR'' ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ;

Fri Jan 7 , 2022
ಹೈದರಾಬಾದ್: ‘RRR’ ಸಿನಿಮಾ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಆಂಧ್ರಪ್ರದೇಶದ ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಅವರು ತೆಲಂಗಾಣ ಹೈಕೋರ್ಟ್‍ನಲ್ಲಿ ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘RRR’ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಸಲ್ಲಿಸಿದ್ದಾರೆ. ಈ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರ ಬರುತ್ತದೆ. ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ […]

Advertisement

Wordpress Social Share Plugin powered by Ultimatelysocial