ತೆಲುಗು ಸ್ಟಾರ್ ಮಹೇಶ್ ಬಾಬು ಹಿರಿಯ ಸಹೋದರ ಘಟ್ಟಮನೇನಿ ರಮೇಶ್ ಬಾಬು ಶನಿವಾರ ನಿಧನ;

ಹೈದರಾಬಾದ್ : ತೆಲುಗು ಸ್ಟಾರ್ ಮಹೇಶ್ ಬಾಬು ಹಿರಿಯ ಸಹೋದರ ಘಟ್ಟಮನೇನಿ ರಮೇಶ್ ಬಾಬು ಶನಿವಾರ ನಿಧನ ಹೊಂದಿದ್ದಾರೆ. ಅಣ್ಣನ ಅಗಲಿಕೆಗೆ ಮಹೇಶ್ ಬಾಬು ಭಾವುಕರಾಗಿ ಸಂತಾಪ ಸೂಚಿಸಿದ್ದು, ಧೈರ್ಯ ತುಂಬಿದ್ದಕ್ಕಾಗಿ ಹಿರಿಯ ನಟ-ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ, ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರರಾಗಿದ್ದ 56 ವರ್ಷದ ನಿರ್ಮಾಪಕ ರಮೇಶ್ ಬಾಬು ಆರೋಗ್ಯ ಸಮಸ್ಯೆಗಳಿಂದ ಶನಿವಾರ ರಾತ್ರಿ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಮಹೇಶ್ ಬಾಬು ಟ್ವಿಟ್ಟರ್‌ನಲ್ಲಿ ಅಣ್ಣನ ನೆನಪನ್ನು ಹಂಚಿಕೊಂಡಿದ್ದು, ತಮ್ಮ ಪ್ರೀತಿಯ ‘ಅಣ್ಣಯ್ಯ’ (ಅಣ್ಣ) ಅವರನ್ನು ಕಳೆದುಕೊಂಡಿದ್ದೇನೆ. ನೀನು ನನಗೆ ಸ್ಫೂರ್ತಿಯಾಗಿದ್ದಿ. ನೀನು ನನ್ನ ಶಕ್ತಿಯಾಗಿದ್ದಿ. ನೀನು ನನ್ನ ಧೈರ್ಯ. ನೀನೇ ನನ್ನ ಸರ್ವಸ್ವವಾಗಿದ್ದೀಯ ನೀನು ಇಲ್ಲದಿದ್ದರೆ, ನಾನು ಇಂದು ಇರುವ ಅರ್ಧದಷ್ಟು ಮನುಷ್ಯನಾಗುತ್ತಿರಲಿಲ್ಲ. ನೀವು ನನಗಾಗಿ ಮಾಡಿದ ಎಲ್ಲದಕ್ಕೂ ಧನ್ಯವಾದಗಳು.ಈಗ ಕೇವಲ ವಿಶ್ರಾಂತಿ…ವಿಶ್ರಾಂತಿ… ಎಂದೆಂದಿಗೂ ಮತ್ತು ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ. ನನಗೆ ಇನ್ನೊಂದು ಜನ್ಮ ಇದ್ದರೆ, ನೀನು ಯಾವಾಗಲೂ ನನ್ನ ‘ಅಣ್ಣಯ್ಯ’ ಎಂದು ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಾಕ್ ಡೌನ್ ನಲ್ಲಿ ಪೊಲೀಸರು ಸವಾರರನ್ನು ಹೇಗೆಲ್ಲಾ ಚೆಕ್ ಮಾಡುತ್ತಿದ್ದಾರೆ ಗೊತ್ತಾ?

Sun Jan 9 , 2022
  ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial