Mamata Banerjee: ಸೀರೆ, ಚಪ್ಪಲಿಯಲ್ಲೇ ಸ್ಪೇನ್‌ನಲ್ಲಿ ಜಾಗಿಂಗ್‌ ಮಾಡಿದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್

ಮ್ಯಾಡ್ರಿಡ್:‌ ಮಮತಾ ಬ್ಯಾನರ್ಜಿಯವರು ರಾಜಕಾರಣದಲ್ಲಿ ಎಷ್ಟು ಅಗ್ರೆಸ್ಸಿವ್‌ ಇದ್ದರೂ, ಜೀವನ ಶೈಲಿಯಲ್ಲಿ ಮಾತ್ರ ತುಂಬ ಸರಳವಾಗಿದ್ದಾರೆ. ಎಲ್ಲಿಯೇ ಹೋಗಲಿ, ಅವರು ಸಾಮಾನ್ಯ ಸೀರೆ, ಸ್ಲಿಪ್ಪರ್‌ ಧರಿಸಿರುತ್ತಾರೆ. ಯಾವುದೇ ಆಡಂಬರವಿಲ್ಲದ, ಮೈತುಂಬ ಚಿನ್ನಾಭರಣ ಹಾಕಿಕೊಳ್ಳದೆ, ಸಿಂಪಲ್‌ ಆಗಿರುವುದು ಅವರ ಜೀವನ ಶೈಲಿ.

ಇಂತಹ ಮಮತಾ ಬ್ಯಾನರ್ಜಿಯವರು ಸ್ಪೇನ್‌ನಲ್ಲಿ ಬೆಳಗ್ಗೆ ಬೆಳಗ್ಗೆ ಜಾಗಿಂಗ್‌ ಹೋಗಿದ್ದು, ಆಗಲೂ ಅವರು ಸಾಮಾನ್ಯ ಸೀರೆ, ಸ್ಲಿಪ್ಪರ್‌ ಧರಿಸಿದ್ದ ವಿಡಿಯೊ ಈಗ ವೈರಲ್‌ ಆಗಿದೆ.

ಸಾಂಪ್ರದಾಯಿಕ ಸೀರೆ ಧರಿಸಿ, ಅದೇ ಸ್ಲಿಪ್ಪರ್‌ ಹಾಕಿಕೊಂಡು, ಕೈಗೊಂದು ಸ್ಮಾರ್ಟ್‌ ವಾಚ್‌ ಕಟ್ಟಿಕೊಂಡು ಮಮತಾ ಬ್ಯಾನರ್ಜಿ ಅವರು ಜಾಗಿಂಗ್‌ ಮಾಡಿದ್ದಾರೆ. ಇದರ ವಿಡಿಯೊವನ್ನು ಅವರೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ‘ಬೆಳಗ್ಗೆ ಮನಸ್ಸು ಉಲ್ಲಾಸಗೊಂಡಿತು. ದಿನ ಶುರುವಾಗುವ ಮೊದಲೇ ಒಂದೊಳ್ಳೆ ಜಾಗಿಂಗ್‌ ಮಾಡಿದರೆ, ಆ ದಿನಪೂರ್ತಿ ಉಲ್ಲಾಸದಿಂದ ಇರಬಹುದು. ಎಲ್ಲರೂ ಫಿಟ್‌ ಆಗಿರಿ, ಆರೋಗ್ಯದಿಂದ ಇರಿ’ ಎಂದು ಮಮತಾ ಬ್ಯಾನರ್ಜಿ ಬರೆದುಕೊಂಡಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಹಿಂದೂ ಧರ್ಮ ಗ್ರಂಥ 'ರಾಮಚರಿತಮಾನಸ' ಸೈನೈಡ್ ಇದ್ದಂತೆ : ನಾಲಿಗೆ ಹರಿಬಿಟ್ಟ ಬಿಹಾರ ಶಿಕ್ಷಣ ಸಚಿವ

Fri Sep 15 , 2023
ನವದೆಹಲಿ : ರಾಮಚರಿತಮಾನಸವನ್ನ ಅವಮಾನಿಸುವ ಮತ್ತೊಂದು ಪ್ರಯತ್ನದಲ್ಲಿ, ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಗುರುವಾರ ಮಹಾಕಾವ್ಯದಲ್ಲಿ “ಪೊಟ್ಯಾಸಿಯಮ್ ಸೈನೈಡ್” ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದವನ್ನ ಹುಟ್ಟುಹಾಕಿದ್ದಾರೆ. ರಾಮಚರಿತಮಾನಸದಲ್ಲಿ ಚಿತ್ರಿಸಲಾದ ಜಾತಿ ಚಲನಶಾಸ್ತ್ರವನ್ನ ಪ್ರಶ್ನಿಸಿದ ಚಂದ್ರಶೇಖರ್, ಧರ್ಮಗ್ರಂಥದಲ್ಲಿ ತನಗೆ ಸಮಸ್ಯೆ ಇದೆ ಮತ್ತು ಪೊಟ್ಯಾಸಿಯಮ್ ಸೈನೈಡ್ನಂತಹ ವಸ್ತುವನ್ನ ಹೊಂದಿರುವವರೆಗೂ ಅದರ ವಿರುದ್ಧ ಹೋರಾಡುವುದನ್ನ ಮುಂದುವರಿಸುತ್ತೇನೆ ಎಂದು ಹೇಳಿದರು.   ಸಚಿವರು ಸಾರ್ವಜನಿಕ ಸಭೆಯಲ್ಲಿ ಹಿಂದೂ ಧಾರ್ಮಿಕ ಪುಸ್ತಕದ ಬಗ್ಗೆ […]

Advertisement

Wordpress Social Share Plugin powered by Ultimatelysocial