Third Wave Corona: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ ಸಿಡಿಎಸ್ಸಿಒ ಒಪ್ಪಿಗೆ;

ನವದೆಹಲಿ(ಡಿ. 28): ಕೊರೋನಾ ಮೂರನೇ ಅಲೆ ಬರಬಹುದು ಎಂಬ ದಟ್ಟ ವದಂತಿಯ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗೆ ಸಹಕಾರಿ ಆಗಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ತುರ್ತು ಬಳಕೆಗಾಗಿ ಒಪ್ಪಿಗೆ ‌ಸೂಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.
ಮುನ್ಸುಖ್ ಮಾಂಡೋವಿಯಾ  ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸದ್ಯ ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಲಸಿಕೆಗಳ ತುರ್ತು ಬಳಕೆಗಾಗಿ ‌ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಒಪ್ಪಿಗೆ ‌ಸೂಚಿಸಿದ್ದು ಭಾರತೀಯ ಔಷಧ ನಿಯಂತ್ರಕ ಜನರಲ್  ಅಂತಿಮವಾದ ಅನುಮೋದನೆ ನೀಡಬೇಕಾಗಿದೆ. ಶೀಘ್ರವೇ ಡಿಸಿಜಿಐ ವತಿಯಿಂದ ಅನುಮೋದನೆ ಸಿಗುವ ಸಾಧ್ಯತೆ ಕೂಡ‌ ಕಂಡುಬರುತ್ತಿದ್ದು ಆಗ ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು 8 ಲಸಿಕೆಗಳು ಲಭ್ಯವಾದಂತಾಗುತ್ತದೆ.ಇಂದು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯು ಅನುಮೋದನೆ ನೀಡಿರುವ ಕೋವೊವಾಕ್ಸ್ ಲಸಿಕೆಯನ್ನು ಪುಣೆ ಮೂಲದ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.‌ ಕಾರ್ಬೆವಾಕ್ಸ್ ಲಸಿಕೆಯನ್ನು ಹೈದ್ರಾಬಾದ್ ಮೂಲದ ಬಯೋಲಾಜಿಕಲ್ ಇ ಉತ್ಪಾದಿಸುತ್ತಿದೆ. ಮೊಲ್ನುಪಿರಾವಿರ್ ಎಂಬ ಆಂಟಿವೈರಲ್ ಔಷಧವನ್ನು 13 ವಿವಿಧ ಕಂಪನಿಗಳು ಉತ್ಪಾದಿಸುತ್ತಿವೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಮುನ್ಸುಖ್ ಮಾಂಡೋವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಫೆಬ್ರವರಿಗೆ‌ ಕಾದಿದೆಯಾ ಅಪಾಯ?
ಫೆಬ್ರವರಿ 3, 2022 ಗುರುವಾರದಂದು ಮೂರನೇ ಅಲೆ ಅಪ್ಪಳಿಸಲಿದೆ ಎಂದು ಐಐಟಿ ಕಾನ್​ಪುರದ ತಜ್ಞರ ತಂಡ ತಿಳಿಸಿದೆ. ಗಣಿತ ಶಾಸ್ತ್ರಜ್ಞರು ಮತ್ತಿತರ ತಜ್ಞರ ತಂಡ ಈ ಲೆಕ್ಕಾಚಾರ ಮಾಡಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ 10 ದೇಶಗಳನ್ನು ಆಯ್ಕೆ ಮಾಡಿ ಆದೇಶಗಳಲ್ಲಿ ಪ್ರತಿದಿನ ಎಷ್ಟು ಪ್ರಕರಣಗಳು ವರದಿಯಾಗಿದ್ದವು. ಒಂದು ಮಿಲಿಯನ್​ನಲ್ಲಿ ಎಷ್ಟು ಪ್ರಕರಣ ಎನ್ನುವ ಅಂಕಿ ಅಂಶಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಈ ತಂಡ ಫೆಬ್ರವರಿ 3ರ ದಿನಾಂಕವನ್ನು ನಿರ್ಧರಿಸಿದೆ.
ಸದ್ಯ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದೃಷ್ಟವಶಾತ್ ಓಮೈಕ್ರಾನ್ ಸೋಂಕು ಡೆಲ್ಟಾದಷ್ಟು ಜೀವಹಾನಿ ಮಾಡುವ ರೂಪಾಂತರ ಅಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಇದು ಜೀವ ತೆಗೆಯುವಷ್ಟು ತೀವ್ರವಲ್ಲ ನಿಜ, ಆದರೆ ಖಂಡಿತವಾಗಿಯೂ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಬಹಳ ವೇಗವಾಗಿ ಹರಡುತ್ತದೆ ಎನ್ನುವ ಎಚ್ಚರಿಕೆಯನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಹೊಸ ತಳಿಯ ಓಮಿಕ್ರಾನ್ ಹೆಚ್ಚುತ್ತಿದೆ

Tue Dec 28 , 2021
ಕರ್ನಾಟಕದಲ್ಲಿ 289 ಹೊಸ ಕೋವಿಡ್ -19 ಪ್ರಕರಣಗಳುಈ ವಾರ ಕಡಿಮೆ ಪರೀಕ್ಷೆಗಳಿಗೆ ಸಾಕ್ಷಿಯಾಗಿದೆ ಬೆಂಗಳೂರು ಸಕ್ರಿಯ ಕೋವಿಡ್ -19 ಪ್ರಕರಣಗಳು ಬೆಂಗಳೂರು, ಕರ್ನಾಟಕ ಒಮಿಕ್ರಾನ್  ಇತ್ತೀಚಿನ ನವೀಕರಣಗಳು  27 ಡಿಸೆಂಬರ್ ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ಪ್ರಸ್ತಾವಿತ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ತಿಳಿಸಿದ್ದಾರೆ ಕರ್ನಾಟಕದಲ್ಲಿ ಸೋಮವಾರ 289 ಹೊಸ […]

Advertisement

Wordpress Social Share Plugin powered by Ultimatelysocial