ಬಾಲಿವುಡ್ ಬೆಡಗಿ ಮೃನಾಲ್‌ ಠಾಕೂರ್‌ ಫಿಟ್‌ನೆಸ್‌ ಸೀಕ್ರೆಟ್‌ ಏನು?.

ಇತ್ತೀಚಿಗೆ ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಸೀತಾರಾಮಂ ಸಿನಿಮಾ ಮೃನಾಲ್‌ಗೆ ಸಿಕ್ಕಾಪಟ್ಟೆ ಹೆಸರನ್ನು ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಮೃನಾಲ್‌ ನಟನೆಯನ್ನು ಎಲ್ಲರೂ ಮೆಚ್ಚುಕೊಂಡಿದ್ರು. ಹೀರೋಯಿನ್‌ ಅಂದ ಮೇಲೆ ಫಿಟ್‌ನೆಸ್‌ ತುಂಬಾನೇ ಮುಖ್ಯವಾಗುತ್ತದೆ. ಮೃನಾಲ್‌ ಠಾಕೂರ್‌ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡ್ತಾರೆ? ಅವರ ಫಿಟ್‌ನೆಸ್‌ ಸೀಕ್ರೆಟ್‌ ಏನು ಅನ್ನೋದನ್ನ ಹೇಳ್ತೀವಿ.ಫೇವರೇಟ್‌ ಹಿರೋಯಿನ್‌ ಡಯೇಟ್‌ ಸೀಕ್ರೇಟ್‌ ಬಗ್ಗೆ ತಿಳಿದುಕೊಳ್ಳೋ ಕುತುಹಲವಂತೂ ಅಭಿಮಾನಿಗಳಿಗೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತು ಮೃನಾಲ್‌ ಠಾಕೂರು ಅವರ ಫಿಟ್‌ನೆಸ್‌ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ.ಮೃನಾಲ್‌ ನಿತ್ಯದ ಆಹಾರ ಕ್ರಮವನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ಪ್ರತಿನಿತ್ಯ ಎಂಟು ಲೋಟದಷ್ಟು ಬಿಸಿನೀರನ್ನು ಸೇವನೆ ಮಾಡುತ್ತಾರೆ. ಕಾರ್ಬೋಹೈಡ್ರೇಡ್‌ ಹೊಂದಿರುವ ಪದಾರ್ಥವನ್ನು ಸೇವಿಸುವುದಿಲ್ಲ. ಜೊತೆಗೆ ಆದಷ್ಟು ಸಮತೋಲಿತ ಆಹಾರವನ್ನು ಸೇವನೆ ಮಾಡುತ್ತಾರೆ.ಇನ್ನೂ ಶೂಟಿಂಗ್‌ ಮಧ್ಯದಲ್ಲಿ ಅವರು ಯಾವುದೇ ತರಹದ ತಿಂಡಿಯನ್ನು ಸೇವಿಸುವುದಿಲ್ಲ. ಬದಲಾಗಿ ಹಣ್ಣುಗಳನ್ನು ತಿನ್ನುತ್ತಾರೆ. ಇನ್ನು ಇವರ ನಿತ್ಯದ ಆಹಾರದಲ್ಲಿ ಪ್ರೋಟೀನ್, ಧಾನ್ಯಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅನೇಕ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಏನೇ ಕೆಲಸ ಮಾಡಬೇಕಾದರೂ ಅಲ್ಲಿ ಸ್ಥಿರತೆ ಅನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಇವತ್ತು ಭಾನುವಾರವೆಂದು ವರ್ಕ್‌ಔಟ್‌ ಮಾಡದೇ ಇರುವುದು, ಸಿಕ್ಕಸಿಕ್ಕದ್ದನ್ನೆಲ್ಲಾ ತಿನ್ನಬಾರದು. ಮೃನಾಲ್‌ ಠಾಕೂರ್‌ ಅವರು ಎಲ್ಲಾ ದಿನವೂ ತಮ್ಮ ಫಿಟ್‌ನೆಸ್‌ಗೆ ಬೇಕಾಗುವ ಚಟುವಟುಕೆಗಳನ್ನು ತಪ್ಪದೇ ಮಾಡುತ್ತಾರಂತೆ.ನಿರಂತರವಾಗಿ ನಮ್ಮ ಡಯೇಟ್‌ ಚಾರ್ಟ್‌ ಫಾಲೋ ಮಾಡಿದರೆ ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಇನ್ನೂ ಫಿಟ್‌ ಆಗಿರಬೇಕು ಅಂತ ದಿನಕ್ಕೆ ಮೂರು ಗಂಟೆಗೂ ಅಧಿಕವಾಗಿ ಜಿಮ್‌ನಲ್ಲಿ ದೇಹವನ್ನು ದಂಡಿಸಿದರೆ ಒಳ್ಳೆಯದಲ್ಲ. ಒತ್ತಡದ ಸಮಸ್ಯೆ, ಸ್ನಾಯುರಜ್ಜು ಮತ್ತು ಸ್ನಾಯುವಿನ ಒತ್ತಡದಂತಹ ಸಮಸ್ಯೆಗಳು ಎದುರಾಗುವ ಸಾದ್ಯತೆ ಇದೆ.ಮೃನಾಲ್‌ ಪ್ರಕಾರ ಒಬ್ಬರೇ ವರ್ಕ್‌ಔಟ್‌ ಮಾಡುವುದಕ್ಕಿಂತ ಸ್ನೇಹಿತರ ಜೊತೆಗೆ ವರ್ಕ್‌ಔಟ್‌ ಮಾಡುವುದರಿಂದ ಹಲವಾರು ಲಾಭಗಳಿದೆ. ನಿಮ್ಮ ಸ್ನೇಹಿತ ನಿಮ್ಮನ್ನು ಮತ್ತಷ್ಟು ವರ್ಕ್‌ಔಟ್‌ ಮಾಡಲು ಪ್ರೇರೇಪಿಸುತ್ತಾನೆ. ಇನ್ನೂ ವರ್ಕ್‌ ಔಟ್‌ ಮಾಡುವಾಗ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮುಂಜಾಗರೂಕತೆ ವಹಿಸೋದು ಉತ್ತಮ. ವರ್ಕ್‌ಔಟ್‌ ಮಾಡುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ತುಂಬಾನೇ ಉತ್ತಮ ಆತನೇ ನಿಮಗೆ ಪ್ರೇರಣೆಯಾಗುತ್ತಾನೆ, ಇದರಿಂದ ನಿಮ್ಮೊಳಗೆ ವರ್ಕ್‌ಔಟ್‌ ಮಾಡುವ ಹಠ ಹೆಚ್ಚಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ 10 ನಟರ ಪಟ್ಟಿ ರಿಲೀಸ್;

Fri Feb 24 , 2023
ಸೋಷಿಯಲ್ ಮೀಡಿಯಾ.. ಸದ್ಯ ಪ್ರತಿಯೊಂದು ಕ್ಷೇತ್ರಕ್ಕೂ ಸಹ ಅತಿಮುಖ್ಯವಾದ ಅಂಶವಾಗಿಬಿಟ್ಟಿದೆ. ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಸುಲಭವಾಗಿ ತಮ್ಮ ಅನುಯಾಯಿಗಳಿಗೆ ತಿಳಿಸಲು ಇರುವ ಅತ್ಯುತ್ತಮ ವೇದಿಕೆ ಇದಾಗಿದೆ. ಇನ್ನು ಸಿನಿಮಾ ಕ್ಷೇತ್ರಕ್ಕಂತೂ ಈ ಸಾಮಾಜಿಕ ಜಾಲತಾಣ ಅತ್ಯಗತ್ಯ ಎನಿಸಿಬಿಟ್ಟಿದೆಈ ಹಿಂದೆ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾದರೆ ಅಥವಾ ಹಾಡುಗಳ ಬಿಡುಗಡೆಯಾದರೆ ಮರುದಿನ ಬರುವ ದಿನಪತ್ರಿಕೆಗಳಲ್ಲಿ ಅದರ ಬಗ್ಗೆ ಸುದ್ದಿ ಇರುತ್ತಿತ್ತು. ಹೀಗೆ ಚಿತ್ರವೊಂದರ ಅಪ್‌ಡೇಟ್‌ ದಿನ ಕಳೆದ ಬಳಿಕ ಸಿನಿ […]

Advertisement

Wordpress Social Share Plugin powered by Ultimatelysocial