ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಿಗ್​ ಶಾಕ್​!

ಬಿಜೆಪಿಯಿಂದ ಹೊರ ಬಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ, ರಾಜ್ಯ ರಾಜಕೀಯದಲ್ಲಿ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸೆಕೆಂಡ್​ ಇನ್ಸಿಂಗ್​ ಆರಂಭಿಸಿದ್ದಾರೆ. ಈಗಾಗಲೇ ರಾಜಕೀಯ ಅಖಾಡಕ್ಕೂ ಧುಮಿಕಿದ್ದು, ಪಕ್ಷದ ಬಾವುಟವನ್ನು ಅನಾವರಣಗೊಳಿಸಿ, ಭರ್ಜರಿಯಾಗಿ ಚುನಾವಣಾ ತಯಾರಿಯನ್ನು ಮಾಡಿಕೊಳ್ತಿದ್ದಾರೆ ಇದರ ಮಧ್ಯೆ ನಾ ನಿನ್ನ ಬಿಡಲಾರೇ ಎಂಬಂತೆ ಸಿಬಿಐ ಗಣಿಧಣಿಗೆ ಬಿಗ್​ ಶಾಕ್​ ನೀಡಿದೆ.ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಮಾಡಲು ಕರ್ನಾಟಕ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಕ್ರಮ ಹಣದ ಮೂಲದಿಂದ ಖರೀದಿಸಿದ್ದ ಜನಾರ್ದನ ರೆಡ್ಡಿ ಆಸ್ತಿಯನ್ನು ಜಪ್ತಿ ಮಾಡಿ ಎಂದು ಕರ್ನಾಟಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಿಬಿಐ ಮನವಿ ಹೈಕೋರ್ಟ್​ಗೆ ಮನವಿ ಮಾಡಿದೆ.ಅಕ್ರಮ ಹಣದ ಮೂಲದಿಂದ ಜನಾರ್ದನ ರೆಡ್ಡಿ ಖರೀದಿಸಿದ್ದ, ಹೊಸದಾಗಿ 200ಕ್ಕೂ ಹೆಚ್ಚು ಆಸ್ತಿಯನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಪತ್ತೆ ಹಚ್ಚಲಾಗಿದೆ. ಹೀಗಾಗಿ ಆಸ್ತಿ ಜಪ್ತಿಗೆ ಅನುಮತಿ ಕೋರಿ ಕರ್ನಾಟಕ ಸರ್ಕಾರಕ್ಕೆ 2022ರ ಆಗಸ್ಟ್​ 30ರಂದೇ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಇದುವರೆಗೂ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅನುಮತಿ ನೀಡಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದೆ. ಇನ್ನು ಈ ವಿಚಾರ ತಿಳಿದು ಜನಾರ್ದನ ರೆಡ್ಡಿ ಸುಮಾರು 19.14 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗಿ ರೆಡ್ಡಿ ಆಸ್ತಿ ಜಪ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್​ನಲ್ಲಿ ಸಿಬಿಐ ಅರ್ಜಿ ಸಲ್ಲಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಯುವಕ ಶರತ್‌ ಕೊಲೆ ಕೇಸ್‌

Thu Jan 5 , 2023
  ಬೆಂಗಳೂರಿನ ಯುವಕ ಶರತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಅವರ ಮೃತದೇಹಕ್ಕಾಗಿ ಚಾರ್ಮಾಡಿ ಘಾಟ್‌ನಲ್ಲಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ. (Sharath murder case) ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ, ಕಳೇವರ ಪತ್ತೆಯಾಗಿಲ್ಲ.ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದರು. ಸ್ಥಳಕ್ಕೆ ಇಬ್ಬರು ಆರೋಪಿಗಳನ್ನು ಕರೆತಂದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಆರೋಪಿ ಶರತ್ ಹಾಗೂ ಧನುಷ್‌ನನ್ನು ಕರೆತರಲಾಗಿದೆ. ಕ್ಷಣಕ್ಕೊಂದು ಜಾಗವನ್ನು ಆರೋಪಿಗಳು ತೋರಿಸುತ್ತಿದ್ದು, ಪೊಲೀಸರಿಗೆ ತಲೆನೋವಾಗಿ […]

Advertisement

Wordpress Social Share Plugin powered by Ultimatelysocial