ಅಭಿಷೇಕ್ ಅಂಬರೀಶ್ ಅವರಿಂದ ಅನಾವರಣವಾಯಿತು “ಪದವಿಪೂರ್ವ” ಚಿತ್ರದ ಟ್ರೇಲರ್.

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹೊಸಪ್ರತಿಭೆಗಳ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ‌ ಅವರ ಸಂಗೀತ ನಿರ್ದೇಶನ ಹಾಗೂ ‌ರೀರೆಕಾರ್ಡಿಂಗ್ ಅದ್ಭುತವಾಗಿದೆ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು ಅಭಿಷೇಕ್ ಅಂಬರೀಶ್.ಈ ಚಿತ್ರದ ಟ್ರೇಲರ್ ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನು ಸೇರಿದಂತೆ ನಮ್ಮ ಚಿತ್ರತಂಡದ ಆಸೆಯಾಗಿತ್ತು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಈ ಹೊಸತಂಡ, ಹೊಸತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 30 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ಯೋಗರಾಜ್ ಭಟ್.ಅಭಿಷೇಕ್ ಅಂಬರೀಶ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಗಿದೆ. ಪ್ರಮೋಷನ್ ಗಾಗಿ ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಪೃಥ್ವಿ ಶಾಮನೂರು.ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೇನೆ. ಇದೇ ಮೂವತ್ತರಂದು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.ನಾಯಕಿ ಅಂಜಲಿ ಅನೀಶ್, ಯಶಾ ಶಿವಕುಮಾರ್, ಛಾಯಾಗ್ರಾಹಕ ಸಂತೋಷ ರೈ ಪಾತಾಜೆ, ನೃತ್ಯ ನಿರ್ದೇಶಕ ಧನಂಜಯ್ ಹಾಗೂ ನಿರ್ಮಾಪಕ ರವಿ ಶಾಮನೂರು “ಪದವಿಪೂರ್ವ” ದ ಬಗ್ಗೆ ಮಾತನಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ರೈತರ ಪಂಪ್ ಶೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ/ಮನವಿ!

Sat Dec 24 , 2022
ತಾಲೂಕಿನ ರೈತರ ಪಂಪ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆಗ್ರಹಿಸಿ ಇಂದು ಬಸವನ ಬಾಗೇವಾಡಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರುಪಟ್ಟಣದ ಬಸವೇಶ್ವರ ವೃತ್ತದಿಂದ ಹೊರಟ ಪ್ರತಿಭಟನೆಕಾರರು ಹೆಸ್ಕಾಂ ಕಚೇರಿಯ ಎದುರು ಕೆಲ ಹೊತ್ತು ಕುಳಿತು ಪ್ರತಿಭಟನೆ ನಡೆಸಿದರುನಂತರ ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಅಶೋಕ ಹಾರಿವಾಳ ಮಾತನಾಡಿಕೃಷಿ ಅವಲಂಬಿತ ಬೆಳೆಗಳನ್ನು ನಂಬಿಕೊಂಡು ಇವತ್ತು ರೈತರು ಸಾಕಷ್ಟು ಶ್ರಮ ಪಡುತ್ತಿದ್ದಾರೆ ಜೊತೆಗೆ ರೈತರು ಬೆಳೆದ ಬೆಳೆ ಕೈಗೆ ಬರಬೇಕು ಅಂದರೆ […]

Advertisement

Wordpress Social Share Plugin powered by Ultimatelysocial