ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ 1473ರ ಫೆಬ್ರುವರಿ 19ರಂದು ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದರು. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತಮ್ಮ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು. ತುಂಬ ಕರುಣಾಮಯಿಯಾಗಿದ್ದ […]

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಜ್ ಅವರು ತಮ್ಮ ಕುರಿತು ಪ್ರಕಟವಾದ ಸುದ್ದಿ ಒಂದ ಮೇಲೆ ಗರಂ ಆಗಿದ್ದಾರೆ. ವರದಿಯಲ್ಲಿ ಅವರ ವಿರುದ್ಧ ಅವಹೇಳನಕಾರಿಯಾದ ಬರವಣಿಗೆ ಇಲ್ಲ. ಆದರೂ, ಅವರು ಗರಂ ಆಗಲು ಒಂದು ಕಾರಣವಿದೆ. ಅದು ಏನಂತಾ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ. ಅನಸೂಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋಶೂಟ್​ ಮಾಡಿಸುವ ಅನಸೂಯ, ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಬಿಳಿ […]

ಮಾನವನ ಕಿವಿ ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದೆ. ಇದು ಸ್ವಯಂ ಶುಚಿಗೊಳಿಸುವಿಕೆ ಮಾಡಿಕೊಳ್ಳುವ ಕಾರಣ ಕಾಲಕಾಲಿಕ ನಿರ್ವಹಣೆ ಅಗತ್ಯವಿಲ್ಲ. ಆದರೂ, ನಾವು ಮೆಡಿಕಲ್ ಅಥವಾ ದಿನಸಿ ಅಂಗಡಿಗೆ ಭೇಟಿ ನೀಡಿದಾಗ ಹತ್ತಿ-ತುದಿಯ ಇಯರ್‌ಬಡ್‌ಗಳು ಅಥವಾ ಇಯರ್ ಸ್ವ್ಯಾಬ್‌ಗಳನ್ನು ತೆಗೆದುಕೊಳ್ಳುತ್ತೇವೆ. ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ ಕಿವಿಯ ಗುಗ್ಗೆ ತೆಗೆದುಹಾಕಲು ಅಥವಾ ಅದರ ಸಂಗ್ರಹವನ್ನು ತಡೆಯಲು ನೀವು ನಿಮ್ಮ ಕಿವಿಗೆ ಸ್ವ್ಯಾಬ್‌ಗಳನ್ನು ಸೇರಿಸುತ್ತಿದ್ದರೆ, ಮತ್ತೊಮ್ಮೆ ಯೋಚಿಸಿ. ಗುಗ್ಗೆಯು ಕಿವಿಯ […]

ಹಿರಿಯ ವಿದ್ವಾಂಸರಾದ ಎ. ನರಸಿಂಹ ಭಟ್ಟರು ಇಂದು ಈ ಲೋಕವನ್ನಗಲಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಮಹಾನ್ ಸಾಧಕರಾದ ಎ. ನರಸಿಂಹ ಭಟ್ಟರು ಸಾಹಿತ್ಯ ಮತ್ತು ವೇದಾಂತಗಳ ಮಹಾನ್ ಪರಿಣಿತರಾಗಿದ್ದವರು.ಎ. ನರಸಿಂಹ ಭಟ್ಟರು ಮೂಲತಃ ಕಾಸರಗೋಡಿನವರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಭಟ್ಟರು ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು.ಎ. ನರಸಿಂಹ ಭಟ್ಟರು ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಕೃತಿಗಳನ್ನು ಇಂಗ್ಲಿಷಿಗೆ ಸೊಗಸಾಗಿ ಅನುವಾದಿಸಿದ್ದಾರೆ. ಕನ್ನಡದಲ್ಲೂ […]

ಭಾರ್ಗವಿ ನಾರಾಯಣ್ ಪ್ರಖ್ಯಾತ ರಂಗಭೂಮಿ ಹಿರಿಯ ಕಲಾವಿದೆ ಮತ್ತು ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರ್ಗವಿ ನಾರಾಯಣ್ 1938ರ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ. ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆದ ಭಾರ್ಗವಿ ಅವರು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ವ್ಯವಸ್ಥಾಪಕರ ಹುದ್ದೆ ನಿರ್ವಹಿಸಿ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು. […]

ದೇಶದಾದ್ಯಂತ 24 ಗಂಟೆಯಲ್ಲಿ 22,270 ಮಂದಿಗೆ ಕೊರೋನಾ, 325 ಸಾವು ಸಕ್ರಿಯ ಪ್ರಕರಣಗಳ ಸಂಖ್ಯೆ 2,53,739 ಕ್ಕೆ ಇಳಿಕೆಯಾಗಿದ್ದು, ಇದೇ ಅವಯಲ್ಲಿ 325 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,11,230 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸತತ 13 ದಿನಗಳಿಂದ ಒಂದು ಲಕ್ಷಕ್ಕಿಂತ ಕಡಿಮೆ ಸೋಂಕಿತರು ವರದಿಯಾಗುತ್ತಿದ್ದು, ರಾಷ್ಟ್ರೀಯ ಕೋವಿಡ್ ಸೋಂಕಿತರ ಚೇತರಿಕೆ ದರವು 98.21 ಶೇಕಡಾಕ್ಕೆ ತಲಿಪಿದ್ದು, ದೈನಂದಿನ ಧನಾತ್ಮಕತೆಯ ದರವು ಶೇಕಡಾ 1.80 […]

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಬೆಳಿಗ್ಗೆ ನಡದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ. ಝೈನಾಪೊರಾ ಪ್ರದೇಶದ ಚೆರ್‌ಮಾರ್ಗ್ ಎಂಬಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದವು ಎಂದು ಪೊಲೀಸರು ತಿಳಿಸಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ. ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯ […]

ರಾಜೇಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಕನ್ನಡ ಚಿತ್ರರಂಗದ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು. ರಾಜೇಶ್ 1935ರ ಏಪ್ರಿಲ್ 15ರಂದುಬೆಂಗಳೂರಿನಲ್ಲಿ ಜನಿಸಿದರು. ಎಲ್ಲ ಸಾಮಾನ್ಯ ಮಕ್ಕಳಂತೆ ಬಾಲ್ಯವನ್ನು ಕಳೆದ ರಾಜೇಶ್ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ […]

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ರೈಲು ಸಂಪೂರ್ಣವಾಗಿ ಖಾಲಿ ಇದ್ದ ಕಾರಣ ಯಾವುದೇ ಸಾವು – ನೋವು ಸಂಭವಿಸಿಲ್ಲ. ರೈಲಿನ ಬೋಗಿಗಳಿಗೆ ಬೆಂಕಿ ತಗುಲುತ್ತಿದ್ದಂತೆಯೇ ಸಾರ್ವಜನಿಕರು ನೀರು ತಂದು ಎರಚಿದರಾದರೂ ಬೆಂಕಿ ತೀವ್ರವಾಗಿ ವ್ಯಾಪಿಸಿದ ಕಾರಣ ಅದು ಸಾಧ್ಯವಾಗಲಿಲ್ಲ. ರೈಲಿನ ಬೋಗಿಗಳಿಗೆ ಬೆಂಕಿ ತಗುಲಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬಿಹಾರ: ಇಲ್ಲಿನ ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಧಗಧಗಿಸಿ ಹೊತ್ತಿ ಉರಿದಿರುವಂತ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯಿಂದ ಬಿಹಾರದ ಮಧುಬನಿಗೆ ಬಂದಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ, ರೈಲು ಬೋಗಿ ಸುಟ್ಟು ಕರಕಲಾಗಿವೆ. ಅಂದಹಾಗೇ ಕಳೆದ ರಾತ್ರಿ ದೆಹಲಿಯಿಂದ ಬಂದು ಮಧುಬನಿಯಲ್ಲಿ ನಿಂತಿದ್ದ ಕಾರಣ, ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ. ಹೀಗಾಗಿ ಪ್ರಾಣಾಪಾಯ ಕೂಡ […]

Advertisement

Wordpress Social Share Plugin powered by Ultimatelysocial