ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಕುಟುಂಬದವರು.ಅವರಿಗೆ ಇರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಕುಮಾರಸ್ವಾಮಿಯವರು ಏನು ಹೇಳುತ್ತಾರೆಯೋ ಅದನ್ನು ಕೇಳಬೇಕು. ಪ್ರಶ್ನಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.ಫೆಬ್ರವರಿ 27ರಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭವಾಗಲಿದ್ದು, ಕೆಂಗಲ್ ನಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ […]

ಧಾನ್ಯಗಳನ್ನು ಅಡುಗೆ ಮಾಡಲು ಬಳಸುವ ಮೊದಲು ಅದನ್ನು ನೀರಲ್ಲಿ ನೆನೆಸಲು ಹಾಕುತ್ತೇವೆ. ಧಾನ್ಯಗಳನ್ನು ತೆಗೆದ ಬಳಿಕ ಇಂತಹ ನೀರನ್ನು ಚೆಲ್ಲುತ್ತೇವೆ. ಇದರಲ್ಲಿ ಕಡಲೆ ಕೂಡ ಒಂದಾಗಿದೆ. ಯಾವುದೇ ಖಾದ್ಯಕ್ಕೆ ನಾವು ಕಡಲೆ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಯಲು ಹಾಕುತ್ತೇವೆ. ಈ ವೇಳೆ ನೆನೆಸಿದ ನೀರನ್ನು “ಅಕ್ವಾಫಾಬ” ಎಂದು ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಕಡಲೆ ನೆನಸಲು ಹಾಕಿದ ನೀರು ಹೆಚ್ಚು ಜನಪ್ರಿಯವಾಗುತ್ತಿದೆ. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು […]

ಶಿವಮೊಗ್ಗ: ನಗರದ ಕಾಮತ್​ ಪೆಟ್ರೋಲ್​ ಬಂಕ್​ ಬಳಿ ಸಪ್ತಗಿರಿ ಬಾರ್ ಬಳಿಯಲ್ಲಿ ಹರ್ಷ ಎಂಬಾತನ ಕೊಲೆಯಾಗಿದೆ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗುತ್ತಿದ್ದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು ಒಂಬತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಶಿವಮೊಗ್ಗ ನಗರಾದ್ಯಂತ ದಿನಾಂಕ 21 ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.ನಗರದಲ್ಲಿ ಮೊನ್ನೆ ರಾತ್ರಿ ಸೂಳೇ ಬೈಲಿನಲ್ಲಿ ನಡೆದ ಜಗಳದಲ್ಲಿ ಇಬ್ಬರ ಹತ್ಯೆಯಾಗಿತ್ತು […]

ದೆಹಲಿ: 102 ವರ್ಷ ವಯಸ್ಸಿನ ಗಾಂಧಿವಾದಿ ಸಮಾಜ ಸೇವಕಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಶಕುಂತಲಾ ಚೌಧರಿ ಇಂದು ನಿಧನರಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಅಸ್ಸಾಂನ ಕಾಮ್ರೂಪ್‌ನಿಂದ ಬಂದ ಅವರು ಹಳ್ಳಿಗರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮಕ್ಕಾಗಿ ಕೆಲಸ ಮಾಡಿದರು ಮತ್ತು ‘ಶಕುಂತಲಾ ಬೈದೆಯೊ’ ಎಂದು ಜನಪ್ರಿಯರಾಗಿದ್ದರು. ಈ ವರ್ಷದ ಆರಂಭದಲ್ಲಿ, ಭಾರತ ಸರ್ಕಾರದಿಂದ ಶಕುಂತಲಾ ಚೌಧರಿ ಅವರನ್ನುʻಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ʼಎಂದು […]

ನವದೆಹಲಿ: ದೇಶದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 24 ಗಂಟೆಗಳ ಅವಧಿಯಲ್ಲಿ 16,051 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 206 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ದೇಶದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,02,131ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇಕಡ 1.93ರಷ್ಟಿದೆ. ಕೋವಿಡ್ ಚೇತರಿಕೆ ದರ ಶೇಕಡ 98.33ರಷ್ಟಿದೆ. ದೇಶದಲ್ಲಿ ಈವರೆಗೆ 5,12,109 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ. ಈವರೆಗೆ 175 […]

ಲಂಡನ್‌, ಫೆಬ್ರವರಿ 20: ರಾಣಿ ಎಲಿಜಬೆತ್ (95) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಬಕಿಂಗ್‌ಹ್ಯಾಮ್‌ನ ಅರಮನೆ ಮಾಹಿತಿ ನೀಡಿದೆ. ಈ ಬಗ್ಗೆ ಯುಕೆ ಅಧಿಕಾರಿಗಳು ಭಾನುವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. “”ರಾಣಿ ಇಂದು ಕೋವಿಡ್‌ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ,” ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. “ಶೀತವನ್ನೂ ಒಳಗೊಂಡಂತೆ ಅವರಿಗೆ ಕೋವಿಡ್‌ನ ಸೌಮ್ಯ ರೋಗಲಕ್ಷಣಗಳಿವೆ. ಈ ವಾರ ಅವರು ತಮ್ಮ ವಿಂಡ್ಸರ್ ಕ್ಯಾಸಲ್ ನಿವಾಸದಲ್ಲಿ ಅಲ್ಪ ಪ್ರಮಾಣದಲ್ಲಿ ಕರ್ತವ್ಯಗಳನ್ನು […]

ಹೈದರಾಬಾದ್ (ತೆಲಂಗಾಣ): ಆಂಧ್ರಪ್ರದೇಶದ ಐಟಿ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯರು ಇಂದು ಅಧಿಕೃತ ಹೇಳಿಕೆಯಲ್ಲಿ, ‘ರಾಜ್ಯ ಸಚಿವ ಗೌತಮ್ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.’ ಅವರು ನೆಲ್ಲೂರು ಜಿಲ್ಲೆಯ ಆತ್ಮಕೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಆಂಧ್ರ ಪ್ರದೇಶ ವಿಧಾನಸಭೆಯ […]

ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ಆಗಬಹುದಾದ ದೊಡ್ಡ ಅನಾಹುತದಿಂದ ಆದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.ಜೀವನದಲ್ಲಿ ಎಷ್ಟು ಎಚ್ಚರವಿದ್ದರೂ ಸಾಕಾಗುವುದಿಲ್ಲ. ಹಲವು ಬಾರಿ ಎಷ್ಟು ಜಾಗರೂಕರಾಗಿ ಇದ್ದರೂ ಎಡವಿ ಬೀಳುತ್ತೇವೆ. ಮೋಸ ಹೋಗುತ್ತೇವೆ. ಎಷ್ಟೇ ಅಚ್ಚುಕಟ್ಟಿನ ಜೀವನ ನಮ್ಮದಾಗಿದ್ದರೂ ಸಣ್ಣ ತಪ್ಪು ಹೆಜ್ಜೆಯೂ ಭಾರೀ ದೊಡ್ಡ ಸಮಸ್ಯೆಗೆ ಕಾರಣ ಆಗಬಹುದು. ನಮಗೆ ತಿಳಿದವರು, ತಿಳಿಯದವರು ಯಾರೂ ಕೂಡ ಮೋಸ ಮಾಡುವ […]

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದ ಕುರಿಗಾಹಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲೇ ಭೇದಿಸಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕೇವಲ 24 ಗಂಟೆಯೊಳಗಾಗಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ […]

ಸರ್ವಜ್ಞ 16-17ನೆಯ ಶತಮಾನದ ಮಹಾನ್ ವಚನಕಾರ. ಈತನ ಜೀವನದ ಬಗ್ಗೆ ಖಚಿತವಾಗಿ ಯಾವ ಸಂಗತಿಗಳೂ ತಿಳಿದುಬಂದಿಲ್ಲ. ಕೆಲವಂಶಗಳು ಇವನ ವಚನಗಳಲ್ಲಿ ಉಕ್ತವಾಗಿದ್ದರೂ ಅಂಥ ರಚನೆಗಳು ಪ್ರಕ್ಷಿಪ್ತಗಳಾಗಿರುವ ಸಾಧ್ಯತೆಯೂ ಉಂಟು. ಪುಷ್ಪದತ್ತನೆಂಬ ಗಣನಾಥನ ಅವತಾರವೆಂದು ಹೇಳಲಾದ ಸರ್ವಜ್ಞ ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಂಬಲೂರಿ ನಲ್ಲಿ. ಇದೇ ಜಿಲ್ಲೆಯ ಮಾಸೂರಿನ ಬಸವರಸನೆಂಬ ಆರಾಧ್ಯ ಬ್ರಾಹ್ಮಣ ಇವನ ತಂದೆ. ಮಾಳಿಯೆಂಬ ಕುಂಬಾರರ ಹೆಣ್ಣು ಇವನ ತಾಯಿ. ಇವರ ವಿವಾಹಬಾಹಿರ ಸಂಬಂಧದಿಂದ ಇವನ ಜನನ. ಈ […]

Advertisement

Wordpress Social Share Plugin powered by Ultimatelysocial